Rashmika Mandana : ಖಜಾನಾ ಬ್ರಾಂಡ್ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾಗೆ ಗೇಟ್ ಪಾಸ್….
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಇತ್ತೀಚೆಗೆ ವಿವಾದಗಳು ಸಿಲಿಕಿಕೊಳ್ಳತ್ತಿದ್ದಂತೆ ಪ್ರತಿಷ್ಠಿತ ಆಭರಣ ಸಂಸ್ಥೆಯೊಂದು ರಶ್ಮಿಕಾ ಮಂದಣ್ಣ ಅವರನ್ನ ತನ್ನ ಅಂಬಾಸೀಡರ್ ಸ್ಥಾನದಿಂದ ವಜಾಗೊಳಿಸಿದೆ.
ಖಜಾನ ಜ್ಯೂವೆಲ್ಲರಿ ಬ್ರಾಂಡ್ ಅಂಬಾಸೀಡರ್ ಆಗಿದ್ದ ನಟಿ ರಶ್ಮಿಕಾ ಮಂದಣ್ಣ ಅವರನ್ನ ಜ್ಯುವೆಲ್ಲರಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ರಶ್ಮಿಕಾ ಅವರನ್ನು ವಜಾ ಮಾಡಲಾಗಿದೆ.
ಅಕ್ಷಯ ತೃತೀಯದಿಂದ ಪ್ರಾರಂಭಿಸಿ, ರಶ್ಮಿಕಾ ಭಾರತದಾದ್ಯಂತ ಪ್ರಿಂಟ್, ಔಟ್ಡೋರ್ ಮತ್ತು ಟಿವಿ ಜಾಹೀರಾತುಗಳ ಮೂಲಕ ಖಜಾನಾ ಆಭರಣದ ಸುಂದರ ವಿನ್ಯಾಸಗಳನ್ನು ಪ್ರಚಾರ ಮಾಡುತ್ತಿದ್ದರು.
ಸದ್ಯ ನಟಿಯ ವಿವಾದಗಳಿಂದ ಕರ್ನಾಟಕ ಇಂಡಸ್ಟ್ರಿಯಲ್ಲಿ ಅವರಿಗೆ ಸಂಪೂರ್ಣ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ತಮ್ಮ ರಿಟೇಲ್ ಕಂಪನಿಯ ಇಮೇಜ್ ಕ್ಷೀಣಿಸುತ್ತದೆ ಎಂದುಕೊಂಡ ಖಜಾನೆ ವ್ಯವಸ್ಥಾಪಕರು ರಶ್ಮಿಕಾರನ್ನ ಅಂಬಾಸಿಡರ್ ಸ್ಥಾನದಿಂದ ಕೈಬಿಟ್ಟಿದ್ದಾರೆ ಎನ್ನಲಾಗಿದೆ.
ರಶ್ಮಿಕಾ ಬದಲಿಗೆ ತ್ರಿಷಾ ಅವರನ್ನು ನೇಮಿಸುತ್ತಿರುವುದಾಗಿ ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ. Rashmika Mandana : Gate pass to Rashmika from the post of Khajana Brand Ambassador….