ಮನೆ ಬದಲಾಯಿಸಿದ ರಶ್ಮಿಕಾ ಮಂದಣ್ಣ Saaksha Tv
ಸಿನಿಮಾ: ನಟಿ ರಶ್ಮಿಕಾ ಮಂದಣ್ಣ ಅವರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಹಿಟ್ ಆಗಿತ್ತಿವೆ. ಕಳೆದ ವರ್ಷ ಡಿ.17ರಂದು ಬಿಡುಗಡೆಯಾದ ‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಆಯಿತು. ವಿಶ್ವಾದ್ಯಂತ 350 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸುವಲ್ಲಿ ಆ ಚಿತ್ರ ಯಶಸ್ವಿ ಆಯಿತು.
ಅದರಿಂದ ರಶ್ಮಿಕಾ ಅವರ ಡಿಮ್ಯಾಂಡ್ ಕೂಡ ಹೆಚ್ಚಿದೆ. ಈಗ ಬಾಲಿವುಡ್ ಸಿನಿಮಾಗಳ ಕಡೆಗೆ ಮುಖ ಮಾಡಿರುವ ರಶ್ಮಿಕಾ ಮಂದಣ್ಣ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಜೊತೆ ತೆರೆಹಂಚಿಕೊಳ್ಳಲಿದ್ದಾರೆ. ಹೀಗಾಗಿ ಮುಂಬೈನಲ್ಲಿ ಅವರ ವಾಸ್ತವ್ಯ ಹೂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಮುಂಬೈನಲ್ಲಿ ತಾವು ಮೊದಲು ಇದ್ದ ಮನೆಯನ್ನು ಬದಲಾಯಿಸುತ್ತಿದ್ದಾರೆ. ಬೇರೆ ಮನೆಗೆ ಸಿಪ್ಟ್ ಆಗುತ್ತಿರುವ ಕುರಿತು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದ ಅವರು ವಿಡಿಯೋದಲ್ಲಿ ಸ್ವತಃ ಅವರೇ ಮನೆಯ ವಸ್ತುಗಳನ್ನು ಪ್ಯಾಕಿಂಗ್ ಮಾಡಿದ್ದಾರೆ. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದು ರಶ್ಮಿಕಾಗೆ ಇಷ್ಟವಂತೆ. ಆದರೆ ವಸ್ತುಗಳನ್ನು ಶಿಫ್ಟ್ ಮಾಡುವುದು ಬಲು ಕಷ್ಟ ಎಂದು ಅಂತ ಹೇಳಿದ್ದಾರೆ.
ಸಿದ್ದಾರ್ಥ್ ಮಲ್ಹೋತ್ರಾ ಜೊತೆ ‘ಮಿಷನ್ ಮಜ್ನು’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅದು ಅವರ ಮೊದಲ ಬಾಲಿವುಡ್ ಸಿನಿಮಾ. ಅಮಿತಾಭ್ ಬಚ್ಚನ್ ಜೊತೆ ‘ಗುಡ್ ಬೈ’ ಚಿತ್ರದಲ್ಲಿ ರಶ್ಮಿಕಾ ನಟಿಸಲಿದ್ದು, ಈ ಮೂಲಕ ಹಿಂದಿ ಚಿತ್ರರಂಗದಿಂದ ಅವರಿಗೆ ಅನೇಕ ಹೊಸ ಹೊಸ ಆಫರ್ಗಳು ಹರಿದುಬರುತ್ತಿವೆ. ಈ ಸಂದರ್ಭದಲ್ಲಿ ಅವರು ಬಾಲಿವುಡ್ ಸಿನಿಮಾಗಳ ಕೆಲಸದ ಸಲುವಾಗಿ ಮುಂಬೈನಲ್ಲೇ ಹೆಚ್ಚು ಸಮಯ ಕಳೆಯಬೇಕಾಗುತ್ತಿದೆ. ಹಾಗಾಗಿ ಅವರು ಅಲ್ಲಿಯೇ ಮನೆ ಕೊಂಡುಕೊಂಡಿದ್ದಾರೆ.