ವಿಜಯ್ ಅವರ  ದಳಪತಿ 66  ಚಿತ್ರಕ್ಕೆ  ರಶ್ಮಿಕಾ ಮಂದಣ್ಣ ನಾಯಕಿ

1 min read

ವಿಜಯ್ ಅವರ  ದಳಪತಿ 66  ಚಿತ್ರಕ್ಕೆ  ರಶ್ಮಿಕಾ ಮಂದಣ್ಣ ನಾಯಕಿ

ರಶ್ಮಿಕಾ ಮಂದಣ್ಣ ಆಗಾಗಾ  ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿರುತ್ತಾರೆ. ಆದರೆ ಇವತ್ತು ವಿಶೇಷ ಸಂದರ್ಭ.  ಏಪ್ರಿಲ್ 5, ರಶ್ಮಿಕಾ ಅವರ ಹುಟ್ಟುಹಬ್ಬದ ಪ್ರಯುಕ್ತ ಎಲ್ಲಾ ಕಡೆಯಿಂದ ಶುಭಾಷಯಗಳ  ಮಹಾಪೂರವೇ ಹರಿದುಬರುತ್ತಿದೆ. ಅವರ ಹಲವು ಚಿತ್ರಗಳ ಸ್ಟಿಲ್ ಹಾಗೂ  ಮುಂಬರುವ ಚಿತ್ರಗಳ  ಇಂಟ್ರಡಕ್ಷನ್  ಟೀಸರ್ ಗಳನ್ನ ಕೂಡ ಬಿಡುಗಡೆ ಮಾಡಲಾಗಿದೆ. ಇಷ್ಟೇ ಅಲ್ಲದೇ  ತಮಿಳಿನ ಸ್ಟಾರ್ ನಟ ಥಳಪತಿ ವಿಜಯ್ ಅವರ ಜೊತೆ  ತೆರೆ ಹಂಚಿಕೊಳ್ಳಲಿದ್ದಾರೆ ರಶ್ಮಿಕಾ.  ವಿಜಯ್ ಅವರ 66 ನೇ ಚಿತ್ರಕ್ಕೆ ನಾಯಕಿಯಾಗಿ  ರಶ್ಮಿಕಾ ಸೆಲೆಕ್ಟ್ ಆಗಿದ್ದಾರೆ.  ಈ ಕುರಿತು ಚಿತ್ರ ನಿರ್ಮಾಣ ಸಂಸ್ಥೆ ಹುಟ್ಟು ಹಬ್ಬದಂದು ವಿಶ್ ಮಾಡಿ  ಅನೌನ್ಸ್ ಮಾಡಿದೆ. ಈ ಮೂಲಕ ರಶ್ಮಿಕಾ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಜ್ ನೀಡಿದ್ದಾರೆ.

ಅಲ್ಲು ಅರ್ಜುನ್  ಜೊತೆ ನಟಿಸಿದ ಪುಷ್ಪ ಚಿತ್ರದ ಯಶಸ್ಸಿನಲ್ಲಿದ್ದಾರೆ ರಶ್ಮಿಕಾ ಮಂದಣ್ಣ.  ಬೀಸ್ಟ್ ಚಿತ್ರದ ಬಿಡುಗಡೆಗೆ ಸಿದ್ಧರಾಗಿದ್ದಾರೆ ದಳಪತಿ ವಿಜಯ್ .  ಬೀಸ್ಟ್ ತೆರೆಕಂಡ ನಂತರ ಮುಂದಿನ ಚಿತ್ರೀಕರಣದಲ್ಲಿ ರಶ್ಮಿಕಾ  ಮತ್ತು ವಿಜಯ್ ಒಂದಾಗಲಿದ್ದಾರೆ.  ಇಂದು ರಶ್ಮಿಕಾ ಹುಟ್ಟುಹಬ್ಬದ ಪ್ರಯುಕ್ತ ನಿರ್ಮಾಣ ಸಂಸ್ಥೆ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್‌ನ ಅಧಿಕೃತ ಟ್ವೀಟ್  ಮಾಡಿ ಸುದ್ದಿ ಪ್ರಕಟಿಸಿದೆ.  “ಪ್ರತಿಭಾವಂತ ಮತ್ತು ಸುಂದರ  ರಶ್ಮಿಕಾ ಮಂದಣ್ಣ ಅವರಿಗೆ ಜನ್ಮದಿನದ ಶುಭಾಶಯಗಳು! ವೆಲ್‌ಕಮ್ ಆನ್‌ಬೋರ್ಡ್ #Thalapathy66 @actorvijay @directorvamshi #RashmikaJoinsThalapathy66 (sic).” ಎಂದು ಟ್ವೀಟ್ ಮಾಡಿದ್ದಾರೆ.

ವಿಜಯ್ ಅವರ 66  ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುವುದು  ಧೃಡವಾಗಿದೆ. ಆನ್ ಸ್ಕೀನ್ ನಲ್ಲಿ ಮೊದಲ ಬಾರಿ ಈ ಜೋಡಿ ಒಂದಾಗಲಿದೆ.  ಪೂಜಾ ಹೆಗ್ಡೆ  ಅಥವಾ ಕಿಯಾರಾ ಅಡ್ವಾಣಿ ಈ ಚಿತ್ರಕ್ಕೆ ನಾಯಕಿಯಾಗತ್ತಾರೆ ಎಂಬ ವದಂತಿಗಳಿದ್ದವು. ಅದೆಲ್ಲವನ್ನ ಬದಿಗೆ ಸರಿಸಿ ರಶ್ಮಿಕಾ ಅವರನ್ನ ಸೆಲೆಕ್ಟ್ ಮಾಡಲಾಗಿದೆ.  ದಳಪತಿ 66 ಚಿತ್ರವನ್ನ   ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್‌ನ ಅಡಿಯಲ್ಲಿ  ದಿಲ್ ರಾಜು ಮತ್ತು ಶಿರೀಷ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ…

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd