‘ಪುಷ್ಪ’ ಸಕ್ಸಸ್ ಕಂಡಿದ್ದೇ ಕಂಡಿದ್ದು… ಸಂಭಾವನೆಯನ್ನೇ ಡಬಲ್ ಮಾಡಿಕೊಂಡ ರಶ್ಮಿಕಾ..!!!
ಕನ್ನಡ ಸಿನಿಮಾ ಮೂಲಕ ಹಿಟ್ ಆಗಿ ಫೇಮ್ ಗಳಿಸಿ ಟಾಲಿವುಡ್ ನಲ್ಲಿ ನೆಲೆಯೂರಿರುವ ರಶ್ಮಿಕಾ ಮಂದಣ್ಣ ಸದ್ಯ ಸಂಭಾವನೆ ಹೆಚ್ಚಿಸಿಕೊಂಡೇ ಹೋಗ್ತಿದ್ದಾರೆ.. ಆದ್ರೆ ಪ್ರಸ್ತುತ ಅಲ್ಲು ಅರ್ಜುನ್ ಅಭಿನಯದ ಅವರ ಸಿನಿಮಾ ಪುಷ್ಪ ಸೂಪರ್ ಸಕ್ಸಸ್ ಕಂಡ ಬೆನ್ನಲ್ಲೇ ರಶ್ಮಿಕಾ ತಮ್ಮ ಸಂಭಾವನೆಯನ್ನ 50 % ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ..
ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಸ್ತುತ ಚಿತ್ರತಂಡವು ಪುಷ್ಪ-2 ಸಿನಿಮಾ ತಯಾರಿಗೆ ಮುಂದಾಗಿದ್ದು, ಈ ಸಿನಿಮಾ ಮುಂದುವರಿದ ಭಾಗಕ್ಕೆ ರಶ್ಮಿಕಾ ತಮ್ಮ ಸಂಭಾವನೆಯನ್ನು ಶೇ.50 ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ..
ಮೂಲಗಳ ಪ್ರಕಾರ ಪುಷ್ಪ ಚಾಪ್ಟರ್ ಒಂದಕ್ಕೆ ರಶ್ಮಿಕಾ 2 ಕೋಟಿ ರೂಪಾಯಿಗಳ ಸಂಭಾವನೆಯನ್ನ ಪಡೆದಿದ್ದಾರೆ ಎನ್ನಲಾಗಿದೆ.. ಆದ್ರೀ ಪುಷ್ಟ 2 ಗಾಗಿ ಅವರು ಬರೋಬ್ಬರಿ 3 ಕೋಟಿ ರೂ ಸಂಭಾವನೆಗಾಗಿ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.. ನಿರ್ಮಾಕರು ರಶ್ಮಿಕಾಗೆ 3 ಕೋಟಿ ರೂ ಸಂಭಾವನೆ ನೀಡಿದರೆ , ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಲಿವುಡ್ ನಟಿಯರ ಪೈಕಿ ಅಗ್ರ ಸ್ತಾನದಲ್ಲಿರಲಿದ್ದಾರೆ ರಶ್ಮಿಕಾ..