Rashmika Mandanna
ಮೊದಲ ಸಿನಿಮಾ ಮೂಲಕವೇ ಅತಿ ಹೆಚ್ಚು ಖ್ಯಾತಿ ಪಡೆದು ಅತ್ಯಂತ ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ಫೇಮಸ್ ಆದ ನಟಿ ಅಂದ್ರೆ ಅದು “ಕಿರಿಕ್ ಪಾರ್ಟಿಯ “ ರಶ್ಮಿಕಾ ಮಂದಣ್ಣ. ಕನ್ನಡದ ಕಿರಿಕ್ ಪಾರ್ಟಿ ಮೂಲಕ ಪ್ರಸಿದ್ಧಿ ಪಡೆದು ಪರ ಭಾಷೆಗಳಲ್ಲಿ ಮಿಂಚುತ್ತಿರುವ ರಶ್ಮಿಕಾ ಕೇವಲ ಸಿನಿಮಾಗಳಿಗೆ ನಟನೆಗೆ ಮಾತ್ರ ಹೆಸರುವಾಸಿಯಲ್ಲ. ಬದಲಾಗಿ ಹೆಚ್ಚು ಬಾರಿ ಟ್ರೊಲ್ ಆದ ಖ್ಯಾತಿಯೂ ಅವರಿಗಿದೆ. ಸದಾ ಟ್ರೋಲಿಗರ ಪಾಲಿನ ಆಹಾರವಾಗುವ ರಶ್ಮಿಕಾ ಮಂದಣ್ಣ ಸದ್ಯ ಅವನ್ನೆಲ್ಲಾ ಮೀರಿಯೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಸಿನಿರಂಗದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ ರಶ್ಮಿಕಾ.
ಆದ್ರೆ ಒಂದಲ್ಲಾ ಒಂದು ವಿಚಾರಕ್ಕೆ ಸದಾ ಟ್ರೋಲ್ ಆಗುವ ರಶ್ಮಿಕಾ ಸಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರ್ತಾರೆ. ಟ್ರೋಲ್ ಗಳಿಗೆ ಹೆದರದೆ ಅದನ್ನ ಎದುರಿಸುತ್ತಾರೆ. ಹೀಗಂತ ಖುದ್ದು ಅವರೇ ಹೇಳಿಕೊಂಡಿದ್ದಾರೆ. “ಪರದೆಯನ್ನು ಸ್ಪರ್ಶಿಸಿದರೆ ನಮಗೆ ಏನು ಬೇಕಾದರು ಸಿಗುತ್ತೆ, ನಾವು ಅಂತಹ ವಯಸ್ಸಿನಲ್ಲಿ ಮತ್ತು ಸಮಯದಲ್ಲಿದ್ದೇವೆ. ಇದು ವ್ಯಕ್ತಿಯನ್ನು ಉಳಿಸಬಹುದು ಅಥವಾ ಕೊಲ್ಲಬಹುದು. ನನ್ನನ್ನು ಟ್ರೋಲ್ ಮಾಡಲಾಯಿತು, ನನ್ನನ್ನು ಬಾಡಿ ಶೇಮಿಂಗ್ ಮಾಡಲಾಯಿತು. ಕ್ಯಾರೆಕ್ಟರ್ ಬಗ್ಗೆ ಮಾತನಾಡಿದರು, ನಾನು ಸೈಬರ್ ಬೆದರಿಕೆಗಳಿಗೆ ಒಳಗಾದೆ. ಆದರೆ ನಾನು ಇನ್ನೂ ಸಾಮಾಜಿಕ ಜಾಲತಾಣದಿಂದ ದೂರ ಸರಿದಿಲ್ಲ, ಬಚ್ಚಿಟ್ಟುಕೊಂಡಿಲ್ಲ. ತುಂಬಾ ನಕರಾತ್ಮಕತೆಯನ್ನು ನೋಡಿದಾಗ ನೀವು ಕೇವಲ ನಕರಾತ್ಮಕತೆನ್ನು ಮಾತ್ರ ನಂಬಲು ಪ್ರಾರಂಭಿಸುತ್ತೀರಿ. ಇದು ಒಂದು ಕೇವಲ ಸಣ್ಣ ಹಂತವಾಗಿದ್ದರೂ ಸಹ ನಂಬುತ್ತೇವೆ. ಡಿಜಿಟಲ್ ವೇದಿಕೆಯನ್ನು ಒಳ್ಳೆಯದಕ್ಕೆ ಬಳಸಲು ಆರಂಭಿಸಬೇಕು ಅಂತ ನಾನು ನಂಬುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ರಶ್ಮಿಕಾ ವಿರುದ್ಧ ತೀರ ಕೆಳಮಟ್ಟದ ಟ್ರೋಲ್ ಗಳನ್ನು ಮಾಡಲಾಗಿದೆ. ಆದರೂ ರಶ್ಮಿಕಾ ಖ್ಯಾತಿ ಕಡಿಮೆ ಆಗಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯಿಸುತ್ತ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿರುವ ರಶ್ಮಿಕಾ ಟ್ರೋಲ್ ಗಳಿಗೆ ಹೆದರಿ ಸಾಮಾಜಿಕ ಜಾಲತಾಣದಿಂದನೂ ದೂರ ಸರಿದಿಲ್ಲ.
ತಮಿಳುನಾಡಲ್ಲಿ `ಬಿಜೆಪಿ ಬಲ ಹೆಚ್ಚಿಸುತ್ತಾರಾ ತಲೈವಾ’..?
Rashmika Mandanna
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel