Rate hiked
ಕೆಎಂಎಫ್ ಇಂದಿನಿಂದ ನಂದಿನಿ ಹಾಲು, ಮೊಸರು ದರವನ್ನು ಲೀಟರ್ ಗೆ ಎರಡು ರೂಪಾಯಿ ಹೆಚ್ಚಿಸಿದೆ. ಕೆಎಂಎಫ್ ನಿರ್ದೇಶಕರ ಜೊತೆಗೆ ಸಭೆ ನಡೆಸಿದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಲು ಮತ್ತು ಮೊಸರಿನ ದರ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದರು. ಪ್ರತಿ ಲೀಟರ್ ನಂದಿನಿ ಹಾಲು ಮತ್ತು ಮೊಸರಿನ ದರ ಎರಡು ರೂಪಾಯಿ ಹೆಚ್ಚಿಸಿ ಕೆಎಂಎಫ್ ಹೊಸ ಆದೇಶ ಹೊರಡಿಸಿದ್ದು, ಅದು ಇಂದಿನಿಂದಲೇ ಜಾರಿಗೆ ಬರಲಿದೆ. ರೈತರ ಅನುಕೂಲಕ್ಕೆ ದರ ಹೆಚ್ಚಿಸಲಾಗಿದ್ದು, ಹೆಚ್ಚುವರಿ ಹಣವನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದು ಕೆಎಂಎಫ್ ತಿಳಿಸಿದೆ.
ವಿವಿಧ ಹಾಲುಗಳ ದರ ಏರಿಕೆ ವಿವರ ಹೀಗಿದೆ
ನಂದಿನಿ ಟೋನ್ಡ್ ಹಾಲು ಲೀಟರ್ ಗೆ 37 ರಿಂದ 39 ರೂ ಹೆಚ್ಚಳ
ಹೋಮೋಜಿನೈಸ್ಡ್ ಟೋನ್ಡ್ ಹಾಲು ಲೀಟರ್ ಗೆ 38 ರಿಂದ 40 ರೂ ಹೆಚ್ಚಳ
ಹೋಮೋಜಿನೈಸ್ಡ್ ಹಸುವಿನ ಹಾಲು 42 ರಿಂದ 44 ರೂ ಹೆಚ್ಚಳ
ಕೆಎಂಎಫ್ ನಂದಿನಿ ಸ್ಪೆಷಲ್ ಹಾಲು 43 ರಿಂದ 45 ರೂ ಹೆಚ್ಚಳ
ಹೋಮೋಜಿನೈಸ್ಡ್ ಸ್ಟಾಂಡರ್ಡ್ ಹಾಲು 44 ರಿಂದ 46 ರೂ ಹೆಚ್ಚಳ
ನಂದಿನಿ ಸಮೃದ್ಧಿ ಹಾಲು ಲೀಟರ್ ಗೆ 48 ರಿಂದ 50 ರೂ ಹೆಚ್ಚಳ
ಸಂತೃಪ್ತಿ ಹೋಮೋಜಿನೈಸ್ಡ್ ಹಾಲು 50 ರಿಂದ 52 ರೂ ಹೆಚ್ಚಳ
ನಂದಿನಿ ಮೊಸರು ಪ್ರತಿ ಕೆಜಿಗೆ 45 ರಿಂದ 47 ರೂ ಹೆಚ್ಚಳವಾಗಿದೆ.