Ravi Bishnoi : 24 ಎಸೆತಗಳಲ್ಲಿ.. 17 ಡಾಟ್ ಬಾಲ್ಸ್.. ರವಿ ಸೂಪರ್ ಎಂಟ್ರಿ
ವೆಸ್ಟ್ ಇಂಡೀಸ್ ವಿರುದ್ಧದ ಮೂರು ಟಿ 20 ಪಂದ್ಯಗಳ ಸರಣಿ ಭಾಗವಾಗಿ ನಡೆದ ಮೊದಲ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ ಭೋಣಿ ಹೊಡೆದಿದೆ. ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಆರು ವಿಕೆಟ್ ಗಳಿಂದ ಜಯ ಸಾಧಿಸಿದೆ. ravi-bishnoi-best-debut-team-india saaksha tv
ಇದರೊಂದಿಗೆ ಮೂರು ಪಂದ್ಯಗಳ ಟಿ 20 ಪಂದ್ಯದಲ್ಲಿ ಭಾರತ ತಂಡ 1-0 ಅಂತರದೊಂದಿಗೆ ಮುನ್ನಡೆ ಕಾಯ್ದುಕೊಂಡಿದೆ.
ಅಂದಹಾಗೆ ಭಾರತದ ಈ ಅಮೋಘ ಗೆಲುವಿನಲ್ಲಿ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.
ಟಿ 20 ಕ್ರಿಕೆಟ್ ನಲ್ಲಿ ಭಾರತದ 95ನೇ ಆಟಗಾರನಾಗಿ ಮೈದಾನಕ್ಕೆ ಇಳಿದ ರವಿ ಬಿಷ್ಣೋಯಿ, ಪಾದಾರ್ಪಣೆ ಪಂದ್ಯದಲ್ಲಿಯೇ ಎಲ್ಲರ ಗಮನ ಸೆಳೆದಿದ್ದಾರೆ.
ರವಿ ಗೂಗ್ಲಿಗಳಿಗೆ ಉತ್ತರಿಸಲಾಗದೇ ವಿಂಡೀಸ್ ಬ್ಯಾಟರ್ ಗಳು ಪರದಾಡಿದರು. ಬಿಗ್ ಸಿಕ್ಸರ್ ಗಳಿಗೆ ಹೆಸರಾದ ಕೆರಿಬಿಯನ್ಸ್ ರವಿ ಸ್ಪಿನ್ ಗೆ ಸಿಕ್ಸರ್ ಸಿಡಿಸುವುದಿರಲಿ, ವಿಕೆಟ್ ಉಳಿಸಿಕೊಂಡರೇ ಸಾಕು ಎಂಬಂತೆ ತಿಣುಕಾಡಿದರು.
ಅಂದಹಾಗೆ ಈ ಪಂದ್ಯದಲ್ಲಿ ನಾಲ್ಕು ಓವರ್ ಗಳನ್ನು ಎಸೆದ ರವಿ, 17 ಡಾಟ್ ಬಾಲ್ ಗಳನ್ನ ಮಾಡಿದರು. ಅಂದ್ರೆ ಅವರ ಮೂರು ಓವರ್ ಗಳಲ್ಲಿ ರನ್ ಗಳು ಬರಲೇ ಇಲ್ಲ. ಅವರೇ 6 ವೈಡ್ ಗಳನ್ನ ಹಾಕಿದರು. 17 ರನ್ ನೀಡಿ 2 ವಿಕೆಟ್ ಪಡೆದರು.
ಒಟ್ಟಾರೆಯಾಗಿ ನೋಡಿಕೊಂಡರೇ ರಾಜಸ್ಥಾನ್ ಮೂಲದ ರವಿ ಬಿಷ್ಣೋಯಿ, 42 ಟಿ 20 ದೇಶಿ ಪಂದ್ಯಗಳಲ್ಲಿ 6.63 ಎಕೋನಾಮಿಯೊಂದಿಗೆ 49 ವಿಕೆಟ್ ಪಡೆದಿದ್ದಾರೆ.









