Ravi Shastri | ಹರಾಜಿನಲ್ಲಿ ರವಿಶಾಸ್ತ್ರಿ 15 ಕೋಟಿಗೆ ಸೇಲ್
ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ಕೆಳಗಿಳಿದ ನಂತರ ಕ್ರಿಕೆಟ್ ಕಾಮೆಂಟೇಟರ್ ಆಗಿ ರವಿಶಾಸ್ತ್ರಿ ಮಿಂಚುತ್ತಿದ್ದಾರೆ.
ಪ್ರಸ್ತುತ ಐಪಿಎಲ್ ವೀಕ್ಷಕ ವಿವರಣೆಗಾರರಾಗಿರುವ ರವಿಶಾಸ್ತ್ರಿ, ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಕೆಲ ಆಸಕ್ತಿಕರ ಕಾಮೆಂಟ್ ಗಳನ್ನ ಮಾಡಿದ್ದಾರೆ.
ಪಂದ್ಯದ ಬಗ್ಗೆ ಮಾತನಾಡುತ್ತಾ, ನಮ್ಮ ಕಾಲದಲ್ಲಿ ಐಪಿಎಲ್ ಇದ್ದಿದ್ದರೇ ಕನಿಷ್ಠ 15 ಕೋಟಿ ರೂಪಾಯಿಗೆ ನಾನು ಸೇಲ್ ಆಗುತ್ತಿದ್ದೆ ಎಂದಿದ್ದಾರೆ.
ಒಂದು ವೇಳೆ ಯಾವುದಾದ್ರೂ ತಂಡದ ನಾಯಕತ್ವ ವಹಿಸಿಕೊಳ್ಳಬೇಕಿತ್ತೆಂದರೇ ಅದಕ್ಕಿಂತ ಹೆಚ್ಚು ಬೆಲೆಗೆ ಸೇಲ್ ಆಗುತ್ತಿದ್ದೆ ಎಂದಿದ್ದಾರೆ.
ಅಂದಹಾಗೆ ರವಿಶಾಸ್ತ್ರಿ, ಎಡಗೈ ಸ್ಪಿನ್ನರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ನಂತರ ಅವರು ಆರಂಭಿಕ ಆಟಗಾರರಾಗಿ ಅಂದಿನ ಟೀಮ್ ಇಂಡಿಯಾದಲ್ಲಿ ಪ್ರಮುಖ ಆಲ್ ರೌಂಡರ್ ಆಗಿ ಬೆಳೆದರು.
ಅವರು ಟೀಮ್ ಇಂಡಿಯಾಕ್ಕಾಗಿ 80 ಟೆಸ್ಟ್ ಮತ್ತು 150 ODIಗಳನ್ನು ಆಡಿದ್ದಾರೆ ಮತ್ತು 1983 ODI ವಿಶ್ವಕಪ್ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದಾರೆ.
ರವಿಶಾಸ್ತ್ರಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 11 ಶತಕ ಮತ್ತು 12 ಅರ್ಧಶತಕಗಳೊಂದಿಗೆ 3830 ರನ್ ಗಳಿಸಿದ್ದಾರೆ.
ಏಕದಿನದಲ್ಲಿ 4 ಶತಕಗಳು ಮತ್ತು 18 ಅರ್ಧ ಶತಕಗಳೊಂದಿಗೆ 3108 ರನ್ ಗಳಿಸಿದ್ದಾರೆ.
ಅಲ್ಲದೆ ಶಾಸ್ತ್ರಿ .. ಟೆಸ್ಟ್‌ನಲ್ಲಿ 151 ಮತ್ತು ಏಕದಿನದಲ್ಲಿ 129 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ravi-shastri-reveals-his-ipl-auction-price