ವಿರಾಟ್ ಬ್ಯಾಟಿಂಗ್ ನಲ್ಲಿ ಯಾವುದೇ ಬದಲಾವಣೆ ಕಾಣಿಸ್ತಿಲ್ಲ : ರವಿಶಾಸ್ತ್ರಿ
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಟೀಂ ಇಂಡಿಯಾ ಮೇಲೆ ಟೀಕೆಗಳ ಸುರಿಮಳೆಗಳು ಬರುತ್ತಿವೆ.
ಆದ್ರೆ ಟೀಂ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಮಾತ್ರ, ಅವರದ್ದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸರಣಿ ಸೋಲಿನ ಬಗ್ಗೆ ನಾವು ಚಿಂತಿಸುವುದಿಲ್ಲ, ಬದಲಾಗಿ ಎದುರಾಳಿಗಳು ಚಿಂತಿಸಲಿ. ಒಂದು ಸರಣಿ ಸೋಲಿನಿಂದ ಟೆಸ್ಟ್ ನಲ್ಲಿ ನಂಬರ್ 1 ತಂಡ ಎನಿಸಿಕೊಂಡಿರುವ ಟೀಂ ಇಂಡಿಯಾ ಪಾತಾಳಕ್ಕೆ ಕುಸಿಯುತ್ತೇವೆ ಅನ್ನೋದು ಮೂರ್ಖತನ ಎಂದಿದ್ದಾರೆ.
ಬರೋಬ್ಬರಿ ಎಂಟು ವರ್ಷಗಳ ಬಳಿಕ ವಿರಾಟ್ ಕೊಹ್ಲಿ, ನಾಯಕನ ಜವಾವ್ದಾರಿ ಇಲ್ಲದೇ ಟೀಂ ಇಂಡಿಯಾದ ಪರ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದರು.
ಈ ಹಿಂದೆ ಟಿ 20 ನಾಯಕತ್ವಕ್ಕೆ ರಾಜೀನಾಮೆ ನೀಡಿ, ಏಕದಿನ ಕ್ಯಾಪ್ಟನ್ಸಿ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋಲುತ್ತಿದ್ದಂತೆ ಟೆಸ್ಟ್ ನಾಯಕತ್ವಕ್ಕೂ ಗುಡ್ ಬೈ ಹೇಳಿದ್ರು.
ಇದಾದ ಬಳಿಕ ಯಾವುದೇ ನಾಯಕತ್ವದ ಜವಾಬ್ದಾರಿ ಇಲ್ಲದೇ ದಕ್ಷಿಣ ಆಫ್ರಿಕಾ ಏಕದಿನ ಸರಣಿಯಲ್ಲಿ ಬ್ಯಾಟ್ ಬೀಸಿದ ವಿರಾಟ್, ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕಗಳನ್ನು ಸಿಡಿಸಿದರು.
ಮೊದಲ ಪಂದ್ಯದಲ್ಲಿ 79, ಕೊನೆಯ ಪಂದ್ಯದಲ್ಲಿ 65 ರನ್ ಗಳಿಸಿದರು. ಈ ಸಂಬಂಧ ಎನ್‌ಡಿಟಿವಿ ಜೊತೆ ಮಾತನಾಡುತ್ತಾ ರವಿಶಾಸ್ತ್ರಿ, ನಾಯಕತ್ವದಿಂದ ಕೆಳಗಿಳಿದರೂ ವಿರಾಟ್ ಬ್ಯಾಟಿಂಗ್ ನಲ್ಲಿ ಯಾವುದೇ ಬದಲಾವಣೆ ಕಾಣಿಸುತ್ತಿಲ್ಲ. ”ನಾಯಕತ್ವದಿಂದ ಕೆಳಗಿಳಿಯುವುದು ಅವರ ಆಯ್ಕೆ. ಅವರ ನಿರ್ಧಾರವನ್ನು ನಾವು ಗೌರವಿಸಬೇಕು ಎಂದಿದ್ದಾರೆ.
ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ. ಬ್ಯಾಟಿಂಗ್‌ನತ್ತ ಗಮನಹರಿಸಲು ಹಲವು ಕ್ರಿಕೆಟಿಗರು ಈ ಹಿಂದೆ ನಾಯಕತ್ವ ತ್ಯಜಿಸಿದ್ದರು.
ಸಚಿನ್ ತೆಂಡೂಲ್ಕರ್, ಗವಾಸ್ಕರ್, ಧೋನಿ. ಅವರಿಗೆ ಸರಿಯಾದ ಸಮಯ ಎನಿಸಿದಾಗ ಅವರು ನಾಯಕತ್ವದ ಜವಾಬ್ದಾರಿಗಳನ್ನು ತ್ಯಜಿಸಿದರು. .
ಈಗ ಕೊಹ್ಲಿ ಕೂಡ ಅದನ್ನೇ ಮಾಡಿದ್ದಾರೆ. ವಾಸ್ತವವಾಗಿ ನಾನು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನು ನೋಡಿಲ್ಲ. ಆದರೆ… ಕೊಹ್ಲಿ ಆಡುವ ರೀತಿಯಲ್ಲಿ ದೊಡ್ಡ ವ್ಯತ್ಯಾಸವೇನೂ ಇಲ್ಲ ಎಂದು ಹೇಳಬಲ್ಲೆ” ಎಂದು ರವಿಶಾಸ್ತ್ರಿ ಹೇಳಿದ್ದಾರೆ.