ದ್ರಾವಿಡ್ ಎದುರೇ ಕಿತ್ತಾಡಿದ ಅಶ್ವಿನ್ – ಪೂಜಾರ ravichandran Ashwin saaksha tv
ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್, ಶಿಸ್ತಿಗೆ ಮತ್ತೊಂದು ಹೆಸರು. ಹೀಗಿದ್ದರೂ ದ್ರಾವಿಡ್ ಎದುರೇ ಟೀಂ ಇಂಡಿಯಾದ ಆಟಗಾರರಾದ ರವಿಚಂದ್ರನ್ ಅಶ್ವಿನ್ ಮತ್ತು ಚೇತೇಶ್ವರ ಪೂಜಾರ ಕೈಕೈ ಮಿಲಾಯಿಸಿದ್ದಾರೆ.
ಹೌದು..! ಸದ್ಯ ಟೀಂ ಇಂಡಿಯಾ ಆಫ್ರಿಕಾ ನಾಡಲ್ಲಿ ಕಾಲಿಟ್ಟಿದ್ದು, ಒಂದು ದಿನ ಕ್ವಾರಂಟೈನ್ ಬಳಿಕ ಪ್ರಾಕ್ಟೀಸ್ ಶುರು ಮಾಡಿದೆ. ಅದರ ಭಾಗವಾಗಿ ಜೊಹಾನ್ಸ್ ಬರ್ಗ್ ನಲ್ಲಿ ಫುಟ್ ಬಾಲ್ ಮ್ಯಾಚ್ ಆಡಿದ್ದಾರೆ ಟೀಂ ಇಂಡಿಯಾದ ಆಟಗಾರರು.
ನಾಯಕ ವಿರಾಟ್ ಕೊಹ್ಲಿ, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಶರ್ದೂಲ್ ಠಾಕೂರ್ ಸೇರಿದಂತೆ ಎಲ್ಲರೂ ಎರಡು ತಂಡಗಳಾಗಿ ವಿಂಗಡನೆಯಾಗಿ ಫುಲ್ ಬಾಲ್ ಮ್ಯಾಚ್ ಆಡಿದ್ದಾರೆ. ಒಂದು ತಂಡಕ್ಕೆ ರವಿಚಂದ್ರನ್ ಅಶ್ವಿನ್ ಸಾರಥ್ಯವಹಿಸಿದ್ದರೇ ಮತ್ತೊಂದು ತಂಡಕ್ಕೆ ದ್ರಾವಿಡ್ ನಾಯಕತ್ವ ವಹಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದೆ.
ಆದ್ರೆ ವಿಡಿಯೋದಲ್ಲಿ ರವಿಚಂದ್ರನ್ ಅಶ್ವಿನ್, ಚೇತೇಶ್ವರ್ ಪೂಜಾರ ಮಧ್ಯೆ ಜಗಳವಾದಂತೆ ಕಾಣಿಸುತ್ತಿದೆ. ಅದೇ ವಿಧವಾಗಿ ರಾಹುಲ್ ದ್ರಾವಿಡ್ ಪುಟ್ ಬಾಲ್ ಸ್ಕೀಲ್ಸ್ ನೋಡಿ ವಿರಾಟ್ ಕೊಹ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಇದಕ್ಕೆ ಸಂಬಂಧಿಸಿದ ಫೋಟೋಗಳು, ವಿಡಿಯೋ ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.