Ashwin | ಚರಿತ್ರೆ ಸೃಷ್ಟಿಸಿದ ಅಶ್ವಿನ್.. ಪ್ರಪಂಚದ ಮೊದಲ ಬೌಲರ್..!!!
ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಪರೂಪದ ದಾಖಲೆ ಬರೆದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ 100 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾಗಿದ್ದಾರೆ.
ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ 6 ವಿಕೆಟ್ ಕಬಳಿಸಿದ್ದರು. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಕಳೆದ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಅಶ್ವಿನ್ 71 ವಿಕೆಟ್ ಗಳನ್ನ ಕಬಳಿಸಿದ್ದರು. ಈ ಬಾರಿಯ WTC 2021-23ರಲ್ಲಿ 29 ವಿಕೆಟ್ ಗಳನ್ನು ಪಡೆದಿದ್ದಾರೆ.
ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಇದುವರೆಗೆ 21 ಪಂದ್ಯಗಳನ್ನಾಡಿದ್ದು, 100 ವಿಕೆಟ್ ಪಡೆದಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ 20 ಟೆಸ್ಟ್‌ಗಳಲ್ಲಿ 93 ವಿಕೆಟ್‌ಗಳೊಂದಿಗೆ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಎರಡನೇ ಸ್ಥಾನದಲ್ಲಿದ್ದಾರೆ.
ಪ್ರಸ್ತುತ ಡಬ್ಲ್ಯುಟಿಸಿ ಸಿರೀಸ್ ನಲ್ಲಿ ಅಶ್ವಿನ್ ಅತಿ ಹೆಚ್ಚು ವಿಕೆಟ್ ಪಡೆದ ಆರನೇ ಬೌಲರ್ ಆಗಿದ್ದಾರೆ.
ಜಸ್ಪ್ರೀತ್ ಬುಮ್ರಾ 40 ವಿಕೆಟ್ ಕಿತ್ತು ಅಗ್ರಸ್ಥಾನದಲ್ಲಿದ್ದಾರೆ. ಇದೇ ಪಂದ್ಯದಲ್ಲಿ ಅಶ್ವಿನ್ ಅವರು ಕಪಿಲ್ ದೇವ್ ಜೊತೆಗೆ ಡೇಲ್ ಸ್ಟೇಯ್ನ್ (439 ವಿಕೆಟ್) ದಾಖಲೆಯನ್ನು ಮುರಿದ್ದಾರೆ.
Ravichandran Ashwin In World Test Championship saaksha tv