Ashwin | ಅಶ್ವಿನ್ ಚೇತರಿಸಿಕೊಂಡಿದ್ದು, ಉತ್ತಮ ಸ್ಥಿತಿಯಲ್ಲಿದ್ದಾರೆ: ಬುಮ್ರಾ
ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಮಾರ್ಚ್ 4 ರಿಂದ ಪ್ರಾರಂಭವಾಗಲಿದೆ. ತಂಡದ ಉಪನಾಯಕ ಜಸ್ಪ್ರೀತ್ ಬುಮ್ರಾ ಅವರು ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಫಿಟ್ನೆಸ್ ಬಗ್ಗೆ ದೊಡ್ಡ ಸುದ್ದಿ ನೀಡಿದ್ದಾರೆ. ಅಶ್ವಿನ್ ತಮ್ಮ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಟೆಸ್ಟ್ ಸರಣಿಯ ಮೊದಲು ಅಭ್ಯಾಸದ ಸಮಯದಲ್ಲಿ ಅವರು ಫಿಟ್ ಆಗಿದ್ದಾರೆ ಎಂದು ಬುಮ್ರಾ ಹೇಳಿದ್ದಾರೆ.
ಆರ್ ಅಶ್ವಿನ್ ಗಾಯದ ಕಾರಣ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದ ಹೊರಗುಳಿಯಬೇಕಾಯಿತು. ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಮಾರ್ಚ್ 4 ರಿಂದ ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬುಮ್ರಾ, “ಟೆಸ್ಟ್ ತಂಡವು ಈಗಾಗಲೇ ಇಲ್ಲಿಗೆ (ಮೊಹಾಲಿ) ತಲುಪಿದೆ ಮತ್ತು ಅಭ್ಯಾಸ ನಡೆಸುತ್ತಿದೆ. ಅಶ್ವಿನ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಅವರಿಗೆ ಈಗ ಸಮಸ್ಯೆ ಇದೆಯೇ ಎಂದು ನನಗೆ ತಿಳಿದಿಲ್ಲ. ಅಭ್ಯಾಸದ ಅವಧಿಯಲ್ಲಿ ಅವರು ಫಿಟ್ ಆಗಿ ಕಾಣುತ್ತಿದ್ದರು. ಅವರು ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಅಭ್ಯಾಸ ಮಾಡಿದರು. ಹಾಗಾಗಿ ಅವರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಶ್ರೀಲಂಕಾ ಟೆಸ್ಟ್ ಸರಣಿಗೆ ಜಸ್ಪ್ರೀತ್ ಬುಮ್ರಾ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ. ಉಪನಾಯಕನಾಗಿ ನನ್ನ ಪಾತ್ರ ಹಾಗೆಯೇ ಉಳಿದಿದೆ ಎಂದು ಬುಮ್ರಾ ಹೇಳಿದ್ದಾರೆ. ವೇಗದ ಬೌಲರ್ ಪ್ರಕಾರ, ಹಿರಿಯ ಆಟಗಾರರು ಸಹ ಆಟಗಾರರಿಗೆ ಸಹಾಯ ಮಾಡಬೇಕು. ಉಪನಾಯಕತ್ವವು ಕೇವಲ ಒಂದು ಸ್ಥಾನ ಎಂದು ನಾನು ಮೊದಲೇ ಹೇಳಿದ್ದೇನೆ” ಎಂದು ವೇಗಿ ತಿಳಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಚೇತೇಶ್ವರ್ ಮತ್ತು ಅಜಿಂಕ್ಯ ರಹಾನೆ ಅವರನ್ನು ಕೈಬಿಡಲಾಗಿದೆ. ಹೀಗಿರುವಾಗ ಮೊಹಾಲಿ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಹೇಗೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ಬಗ್ಗೆ ಬುಮ್ರಾ ಅವರನ್ನು ಕೇಳಿದಾಗ, ಅವರು “ಇದು ಪಂದ್ಯವನ್ನು ಪ್ರಾರಂಭಿಸುವ ಸಮಯ, ಆದ್ದರಿಂದ ಈ ಬಗ್ಗೆ ಏನನ್ನೂ ಹೇಳಲು ತುಂಬಾ ಮುಂಚೆ ಆಗುತ್ತದೆ. ಈಗ ನಮ್ಮ ಮನಸ್ಸಿನಲ್ಲಿ ಯಾವುದೇ ಸಂಯೋಜನೆ ಇಲ್ಲ” ಎಂದಿದ್ದಾರೆ. Ravichandran ashwin-jasprit bumra Cricket