ರವಿಚಂದ್ರನ್ ಅಶ್ವಿನ್ ಗೆ ಬ್ಯಾಡ್ ಲಕ್.. ಮ್ಯಾಟ್ರು ಏನ್ ಗೊತ್ತಾ..?
ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕ್ಯಾರಮ್ ಬಾಲ್ ಮೂಲಕ ಎದುರಾಳಿಗಳನ್ನು ಗಿರಿಗಿಟ್ಟಲೇ ಹೊಡೆಯುವಂತೆ ಮಾಡುತ್ತಾರೆ. ಭಾರತೀಯ ಪಿಚ್ ಗಳಲ್ಲಿ ಎದುರಾಳಿ ಬ್ಯಾಟರ್ ಗಳಿಗೆ ಸಿಂಹಸ್ವಪ್ನವಾಗುವ ಅಶ್ವಿನ್ ಎದುರಾಳಿಗಳನ್ನು ಒಬ್ಬೊಂಟಿಯಾಗಿ ಬೇಟೆಯಾಡುತ್ತಾರೆ.
ಟಿ 20 ಆಗಿರಲಿ, ಏಕದಿನ ಆಗಿರಲಿ, ಟೆಸ್ಟ್ ಆಗಿರಲಿ ಅಶ್ವಿನ್ ಟೀಂ ಇಂಡಿಯಾದ ಬ್ರಹ್ಮಾಸ್ತ್ರವಾಗಿದ್ದರು. ಆದ್ರೆ ಬ್ಯಾಡ್ ಪಾರ್ಮ್ ಗೆ ಸಿಲುಕಿ ತಂಡದಿಂದ ದೂರ ಉಳಿದು ಕಳೆದ ವರ್ಷವಷ್ಟೇ ಟೀಂ ಇಂಡಿಯಾಗೆ ವಾಪಸ್ ಆಗಿದ್ದರು. ಮೊದಲು ಟೆಸ್ಟ್ ಗೆ ನಲ್ಲಿ ಗಟ್ಟಿಯಾಗಿ ನೆಲೆಯೂರಿದ ಅಶ್ವಿನ್ ಬಳಿಕ ಸೀಮಿತ ಓವರ್ ಗಳಿಗೂ ಎಂಟ್ರಿ ಪಡೆದರು. ಕಳೆದ ಟಿ 20 ವಿಶ್ವಕಪ್ ಟೂರ್ನಿಯಿಂದ ತಂಡದಲ್ಲಿ ಖಾಯಂ ಆಗಿರುವ ಅಶ್ವಿನ್ ಇದೀಗ ಇಂಚೂರಿಗೆ ಗುರಿಯಾಗಿದ್ದಾರಂತೆ.

ಇದರೊಂದಿಗೆ ಫೆಬ್ರವರಿ 16 ರಿಂದ ತವರಿನಲ್ಲಿ ಆರಂಭವಾಗುವ ವೆಸ್ಟ್ ಇಂಡೀಸ್ ಸರಣಿಗೂ ಮುನ್ನಾ ಟೀಂ ಇಂಡಿಯಾಗೆ ಭಾರಿ ಆಘಾತ ಎದುರಾಗಿದೆ. ಗಾಯದ ಸಮಸ್ಯೆಯಿಂದಾಗಿ ಅಶ್ವಿನ್, ಸರಣಿಯಿಂದ ಸಂಪೂರ್ಣವಾಗಿ ದೂರ ಉಳಿಯಲಿದ್ದಾರೆ.
ಇದು ನಿಜಕ್ಕೂ ಅಶ್ವಿನ್ ಬ್ಯಾಡ್ ಲಕ್ ಅಂತಾನೆ ಹೇಳಬೇಕು. ಯಾಕಂದರೇ ಇತ್ತೀಚೆಗಷ್ಟೇ ಎಲ್ಲಾ ಫಾರ್ಮ್ಯಾಟ್‌ಗಳ ತಂಡದಲ್ಲಿ ಅಶ್ವಿನ್ ಖಾಯಂ ಆಗಿದ್ದರು. ಆದ್ರೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅವರು ಇಂಜೂರಿಯಾಗಿದ್ದು ಮತ್ತೆ ಟೀಂ ಇಂಡಿಯಾದಿಂದ ದೂರ ಉಳಿಯಲಿದ್ದಾರೆ.
ಮತ್ತೊಂದೆಡೆ ಗಾಯದ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿರುವ ರೋಹಿತ್ ಶರ್ಮಾ ಈ ಸರಣಿಯ ಮೂಲಕ ರೀ ಎಂಟ್ರಿ ಕೊಡಲು ನಿರ್ಧರಿಸಿದ್ದಾರೆ.