ಕನ್ನಡದಲ್ಲಿ ಖುಷ್ಬು ಅವರನ್ನ ನೆನಪು ಮಾಡಿಕೊಳ್ಬೇಕಾದ್ರೆ , ರಣಧೀರ , ಅಂಜದ ಗಂಡು , ಯುಗ ಪುರುಷ ಸಿನಿಮಾಗಳ ಕಣ್ಮುಂದೆ ಬರುತ್ತವೆ.. ಇವೆಲ್ಲಾ ಸಿನಿಮಾಗಳಲ್ಲೂ ಖುಷ್ಬೂ ಅವರ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ನಾಯಕಿ ಆಗಿ ಕಾಣಿಸಿಕೊಂಡಿದ್ರು.. ಆ ಕಾಲದಲ್ಲಿ ಈ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು.. ಈ ಸಿನಿಮಾದ ಎವರ್ ಗ್ರೀನ್ ಹಾಡುಗಳು ಜನರಿಗೆ ಸಖತ್ ಇಷ್ಟವಾಗಿತ್ತು.. ಅದ್ರಲ್ಲೂ ಖುಷ್ಬು ರವಿಚಂದ್ರನ್ ಕೆಮಿಸ್ಟ್ರಿಗೆ ಜನ ಫಿದಾ ಆಗಿದ್ದರು..
ಹೀಗೆ ಖುಷ್ಬು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡಾಭಿಮಾನಿಗಳ ಮನ ಗೆದ್ದಿದದ್ದಾರೆ.. ತೆಲುಗು ತಮಿಳಿನಲ್ಲಿ ಖುಷ್ಬು ಜನಪ್ರಿಯತೆ ಗಳಿಸಿದ್ದಾರೆ.. ಆದ್ರೆ ಖುಷ್ಬೂ ಬರೋಬ್ಬರಿ 12 ವರ್ಷಗಳ ಕಾಲ ಕನ್ನಡ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದದ್ದರು… ಇದೀಗ ಮತ್ತೆ ರವಿಚಂದ್ರನ್ ಅವರಿಗೆ ಜೋಡಿಯಾಗಲು 12 ವರ್ಷಗಳ ನಂತರ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ..
ಹೌದು.. ಅಂದ್ಹಾಗೆ ಹೊಸ ಸಿನಿಮಾದಲ್ಲಿ ನಾಯಕನ ತಂದೆ ರವಿಚಂದ್ರನ್ ಆದ್ರೆ , ನಾಯಕನ ತಾಯಿಯಾಗಿ ಖುಷ್ಬು ಬಣ್ಣ ಹಚ್ಚಲಿದ್ದಾರೆ..
2005ರಲ್ಲಿ ತೆರೆಕಂಡ ಮ್ಯಾಜಿಕ್ ಅಜ್ಜಿ ಸಿನಿಮಾದಲ್ಲಿ ಖುಷ್ಬು ಕಾಣಿಸಿಕೊಂಡಿದ್ದರು. ನಂತರ ಜನನಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಬಂದು ಹೋಗಿದ್ದರು.. ಈ ಸಿನಿಮಾ 2010 ರಲ್ಲಿ ರಿಲೀಸ್ ಆಗಿತ್ತು.. ಅದಾದ ನಂತರ ಕನ್ನಡ ಇಂಡಸ್ಟ್ರಿಯಿಂದ ದೂರವೇ ಇದ್ದರು.. ಇದೀಗ 12 ವರ್ಷಗಳ ನಂತರ ಮತ್ತೆ ಚಂದನವನದತ್ತ ಮುಖ ಮಾಡಿದ್ದಾರೆ..
ಜನಾರ್ಧನ ರೆಡ್ಡಿ ಪುತ್ರ ಕಿರೀಟಿಯ ಮೊದಲ ಸಿನಿಮಾದ ಇದಾಗಿದ್ದು , ಇದೇ ಸಿನಿಮಾದಲ್ಲಿ ಕಿರೀಟಿಗೆ ಪತಮದೆ ತಾಯಿ ಪಾತ್ರದಲ್ಲಿ ರಣಧೀರ ಜೋಡಿ ಕಾಣಿಸಿಕೊಳ್ತಿದೆ. ಟೀಸರ್ ಬಿಡುಗಡೆ ನಿನ್ನೆ ಅದ್ಧೂರಿಯಾಗಿ ನೆರವೇರಿದೆ. ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ, ನಟಿ ಜೆನಿಲಿಯಾ ಡಿಸೋಜಾ, ಶ್ರೀಲೀಲಾ, ನಟ ರವಿಚಂದ್ರನ್ ಇನ್ನೂ ಹಲವರು ಭಾಗವಹಿಸಿದ್ದರು.