“ಧೋನಿ” ಜೊತೆಗಿನ ಫೋಟೋ ಹಾಕಿ “ರೆಸ್ಪೆಕ್ಟರ್ ಫಾರೆವರ್” ಎಂದಿದ್ದೇಕೆ ಜಡ್ಡು..!

1 min read

“ಧೋನಿ” ಜೊತೆಗಿನ ಫೋಟೋ ಹಾಕಿ “ರೆಸ್ಪೆಕ್ಟರ್ ಫಾರೆವರ್” ಎಂದಿದ್ದೇಕೆ ಜಡ್ಡು..!

ಮುಂಬೈ : ಆಸ್ಟ್ರೇಲಿಯಾ, ಇಂಗ್ಲೆಂಡ್ ನಡುವಿನ ಸರಣಿಯಿಂದ ದೂರ ಉಳಿದಿದ್ದ ಸರ್ ಜಡೇಜಾ ಇದೀಗ ಹೊಸ ಲುಕ್ ನೊಂದಿಗೆ ಯೆಲ್ಲೋ ಕ್ಯಾಂಪ್ ಸೇರಿಕೊಂಡಿದ್ದಾರೆ.

ಈ ಬಾರಿಯ ಐಪಿಎಲ್ ಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಎಲ್ಲ ಫ್ರಾಂಚೈಸಿಗಳು ಅಭ್ಯಾಸ ಶಿಬಿರ ಆರಂಭಿಸಿವೆ. ಐಪಿಎಲ್ ತಂಡಗಳು ಈಗಾಗಲೇ ಮೈದಾನಕ್ಕೆ ಇಳಿದು ತಾಲೀಮು ನಡೆಸುತ್ತಿವೆ.

ಅದರಂತೆ ಚೆನ್ನೈ ತಂಡ ಕೂಡ ಹೊಸ ಭರವಸೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದು, ಈಗಾಗಲೇ ಮುಂಬೈನಲ್ಲಿ ತರಬೇತಿ ಆರಂಭಿಸಿದೆ. ತಂಡದ ಆಲ್ ರೌಂಡರ್ ರವೀಂದ್ರ ಜಡೇಜಾ ಕ್ವಾರಂಟೈನ್ ಮುಗಿಸಿ ನಿನ್ನೆ ತಂಡ ಸೇರಿಕೊಂಡಿದ್ದಾರೆ.

ನಿನ್ನೆ ಸಿಎಸ್ ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನ ಭೇಟಿ ಮಾಡಿರುವ ಜಡೇಜಾ ಟ್ವಿಟ್ಟರ್ ನಲ್ಲಿ, ಧೋನಿ ಜೊತೆಗಿನ ಫೋಟೋಗಳನ್ನ ಹಂಚಿಕೊಂಡು ನಾನು ಅವರನ್ನು ಭೇಟಿಯಾದಾಗೆಲ್ಲಾ ಮೊದಲ ಬಾರಿಗೆ ಭೇಟಿಯಾಗುತ್ತಿದ್ದೇನೆ ಎಂಬ ಭಾವ ಉಂಟಾಗುತ್ತದೆ.

RAVINDRA JADEJA

2009ರಲ್ಲಿ ಮೊದಲ ಸಲ ಅವರನ್ನು ಭೇಟಿಯಾದಾಗಲೂ ಅದೇ ಉತ್ಸಾಹ, ಬಾಂಧವ್ಯ ಇತ್ತು. ರೆಸ್ಪೆಕ್ಟರ್ ಫಾರೆವರ್ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಸಿಎಸ್ ಕೆ ತಂಡಕ್ಕೆ ಜಡೇಜಾ ಟ್ರಂಪ್ ಕಾರ್ಡ್ ಪ್ಲೇಯರ್..! ಅದರಲ್ಲು ಎಂಎಸ್ ಡಿಯ ನೆಚ್ಚಿನ ಬಂಟ ಜಡೇಜಾ. ಇದು ಐಪಿಎಲ್ ಗೆ ಮಾತ್ರ ಸೀಮಿತವಾಗಿರದೇ ಟೀಂ ಇಂಡಿಯಾದಲ್ಲು ಮುಂದುವರಿದಿತ್ತು.

ಇಂದು ಜಡೇಜಾ ಒಬ್ಬ ಅತ್ಯುತ್ತಮ ಆಲ್ ರೌಂಡರ್ ಅಂತ ಕರೆಸಿಕೊಳ್ಳುತ್ತಿದ್ದರೇ ಅದಕ್ಕೆ ಧೋನಿ ನೀಡಿ ಪ್ರೋತ್ಸಾಹ ಕೂಡ ಕಾರಣವಾಗಿದೆ.

chinthamani
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd