Ravindra Jadeja : ಟೀಮ್ ಇಂಡಿಯಾದ ಹಿಡಿತದಲ್ಲಿ ಮೊಹಾಲಿ ಟೆಸ್ಟ್ – ಜಡ್ಡು ಅಜೇಯ ಶತಕ – ಸಂಕಷ್ಟದಲ್ಲಿ ಶ್ರೀಲಂಕಾ
ರವೀಂದ್ರ ಜಡೇಜಾ ಅವರ ಅಜೇಯ 175 ರನ್ ಗಳ ಸಹಾಯದಿಂದ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಬೃಹತ್ ಮೊತ್ತದ ರನ್ ದಾಖಲಿಸಿದೆ. ಮೊಹಾಲಿಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಟೀಮ್ ಇಂಡಿಯಾ ಎಂಟು ವಿಕೆಟ್ ನಷ್ಟಕ್ಕೆ 574 ರನ್ ದಾಖಲಿಸಿದೆ.
ರವೀಂದ್ರ ಜಡೇಜಾ ಅವರು 228 ಎಸೆತಗಳಲ್ಲಿ 17 ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ ಅಜೇಯ 175 ರನ್ ಸಿಡಿಸಿದ್ರು.
ರವೀಂದ್ರ ಜಡೇಜಾ ಅವರಿಗೆ ಎರಡನೇ ದಿನ ಆರ್. ಅಶ್ವಿನ್ ಅವರು ಉತ್ತಮ ಸಾಥ್ ನೀಡಿದ್ರು. ಆರ್. ಅಶ್ವಿನ್ ಅವರು ಆಕರ್ಷಕ 61 ರನ್ ಗಳಿಸಿದ್ರು. ಜಯಂತ್ ಯಾದವ್ 2 ರನ್ ಗಳಿಸಿದ್ರು.
ಇನ್ನು ಮಹಮ್ಮದ್ ಶಮಿ ಕೂಡ ಅಜೇಯ 20 ರನ್ ದಾಖಲಿಸಿದ್ರು. ಇದಕ್ಕು ಮುನ್ನ ಟೀಮ್ ಇಂಡಿಯಾ ಪರ ಮಯಾಂಕ್ ಅಗರ್ ವಾಲ್ 33 ರನ್, ರೋಹಿತ್ ಶರ್ಮಾ 29 ರನ್, ಹನುಮ ವಿಹಾರಿ 58 ರನ್, ವಿರಾಟ್ ಕೊಹ್ಲಿ 45 ರನ್, ರಿಷಬ್ ಪಂತ್ 96 ರನ್ ಹಾಗೂ ಶ್ರೇಯಸ್ ಅಯ್ಯರ್ 27 ರನ್ ಗಳಿಸಿದ್ದರು.
ಕಠಿಣ ಸವಾಲನ್ನು ಬೆನ್ನಟ್ಟಿದ್ದ ಶ್ರೀಲಂಕಾ ತಂಡ ಎರಡನೇ ದಿನದ ಅಂತ್ಯಕ್ಕೆ 108 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ದಿಮಿತ್ ಕರುಣರತ್ನೆ 28 ರನ್, ಲಹಿರು ತಿರಿಮನೆ 17 ರನ್, ಆಂಜಲೋ ಮ್ಯಾಥ್ಯೂಸ್ 22 ರನ್ ಹಾಗೂ ಧನಂಜಯ್ ಡಿಸಿಲ್ವಾ 2 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
ಪಥುಮ್ ನಿಶಾಂಕಾ ಅಜೇಯ 26 ರನ್ ಹಾಗೂ ಚರಿತ್ ಅಸಲಂಕಾ ಅಜೇಯ 1 ರನ್ ಗಳೊಂದಿಗೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟೀಮ್ ಇಂಡಿಯಾ ಪರ ಅಶ್ವಿನ್ ಎರಡು ವಿಕೆಟ್ ಪಡೆದ್ರೆ, ಜಸ್ಪ್ರಿತ್ ಬೂಮ್ರಾ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಉರುಳಿಸಿದ್ರು.