ಮುರುಘಾ ಶ್ರೀಗಳು ವೈಚಾರಿಕ ಕ್ರಾಂತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಪಸರಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂಬುದಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಂಸ್ಥಾಪಕ ರವಿಶಂಕರ್ ಗುರೂಜಿ ಅಭಿಪ್ರಾಯ ಪಟ್ಟಿದ್ದಾರೆ. ನಾವೆಲ್ಲ ವಚನ ಸಾಹಿತ್ಯದಿಂದ ಬೆಳೆದು ಬಂದವರು ಮುಂದೆ ಅದನ್ನು ಬೆಳೆಸುವ ಕೆಲಸವೂ ನಮ್ಮದೇ. ಮನುಷ್ಯ ತನ್ನ ದ್ವೇಷವನ್ನು ಬಿಟ್ಟು, ಜಗತ್ತಿನೆಲ್ಲೆಡೆ ಬಸವಣ್ಣನವರ ಸಂದೇಶವನ್ನು ಸಾರುವುದು ಪ್ರತಿಯೊಬ್ಬರ ಕರ್ತವ್ಯ, ಜಾತಿ ಜಾತಿಗಳ ನಡುವೆ ದ್ವೇಷವನ್ನು ಬಿತ್ತಿ ತಮ್ಮ ಕೆಲಸಗಳನ್ನು ಮಾಡುವವರು ಇದ್ದಾರೆ. ಅಂತ ವಿಚಾರಗಳನ್ನು ಬಿಟ್ಟು ಹೊರ ಬರಬೇಕು ಎನ್ನುವ ಮೂಲಕ ಬಸವಣ್ಣರ ವಚನಗಳ ಮಹತ್ವವನ್ನು ತಿಳಿಸಿದರು. ಇನ್ನು ಈಗಾಗಲೇ ಬುದ್ಧ ಹಾಗೂ ಬಸವಣ್ಣನವರ ಕುರಿತು ಆಂಗ್ಲ ಭಾಷೆಯಲ್ಲಿ ರಚನೆ ಮಾಡಿದ್ದಾರೆ. ಆದರೆ ಶರಣರು ಎಲ್ಲರನ್ನು ಒಟ್ಟುಗೂಡಿಸುವ ಕೆಲಸವನ್ನು ಮಾಡಬೇಕಾದ ಸಮಯ ಬಂದಿದೆ ಎಂದು ಅಭಿಪ್ರಾಯ









