ಮಾರ್ಡನ್ VS ಟ್ರೆಡಿಷನಲ್ = “ರೆಮೋ”
ರೋಗ್ ಸಿನಿಮಾದಲ್ಲಿ ಸಖತ್ ವಿಭಿನ್ನವಾಗಿ ನಟಿಸಿ ವಿಭಿನ್ನ ಪಾತ್ರದೊಂದಿಗೆ ಜನಮೆಚ್ಚುಗೆ ಪಡೆದಿದ್ದ ನಟ ಇಶಾನ್ ಇದೀಗ ಮತ್ತೆ ಅಂತಹದ್ದೇ ಡಿಫರೆಂಟ್ ಪಾತ್ರದ ಮೂಲಕ ಜನರ ಮುಂದೆ ಬರ್ತಿದ್ದಾರೆ.. ‘Raymo’ ಸಿನಿಮಾ ಮೂಲಕ ಮೋಡಿ ಮಾಡಲು ಹೊರಟಿದ್ದಾರೆ..
ಇದೀಗ ರೆಮೋ ಸಿನಿಮಾದ ಟೀಸರ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿ ಭಾರೀ ಸೌಂಡ್ ಮಾಡ್ತಿದೆ.. ವಿಭಿನ್ನ ಟೈಟಲ್ ನಿಂದಲೇ ಸಿನಿಮಾ ಜನರನ್ನ ಆಕರ್ಶಿಸುತ್ತಿದೆ.. ಸಿನಿಮಾದಲ್ಲಿ ಇಸಾನ್ ರೆಮೋ ಎಂಬ ಪಾತ್ರ ನಿಭಾಸ್ತಾಯಿದ್ದು, ಅವರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಬಣ್ಣ ಹಚ್ಚಿದ್ದಾರೆ..
ಟ್ರೇಲರ್ ನೋಡಿದ್ರೆ ಈ ಸಿನಿಮಾದಲ್ಲಿ ನಾಯಕ ಸಿಕ್ಕಾಪಟ್ಟೆ ಮಾಡರ್ನ್, ರಫ್ ಅಂಡ್ ಟಫ್ , ಡೋಂಟ್ ಕೇರ್ ಆಟಿಟ್ಯೂಡ್ ಆಗಿದ್ರೆ ನಾಯಕಿ ಪಕ್ಕಾ ಟ್ರೆಡಿಷನಲ್ ಹುಡುಗಿಯಾಗಿ ಸಾಫ್ಟ್ ನೇಚರ್ ಇರುವಂತೆ ಕಾಣ್ತಿದೆ.. ಒಟ್ಟಾರೆ ಇಬ್ಬರ ನೇಚರ್ ಡೆಡ್ ಆಪೋಸಿಟ್ ಆಗಿದ್ರೂ ಇಬ್ರೂ ಹೇಗೆ ಕನೆಕ್ಟ್ ಆಗ್ತಾರೆ ಅನ್ನೋ ಕ್ಯೂರಿಯಾಸಿಟಿ ಅಂತು ಇದೆ..
ಜಯಾದಿತ್ಯ ಫಿಲಮ್ಸ್ ಬ್ಯಾನರ್ ನಡಿ ಸಿನಿಮಾಗೆ C R ಮನೋಹರ್ ಬಂಡವಾಳ ಹೂಡಿದ್ದು, ಗೂಗ್ಲಿ ಖ್ಯಾತಿಯ ಪವನ್ ಒಡೆಯರ್ ಆಕ್ಷನ್ ಕಟ್ ಹೇಳ್ತಾಯಿದ್ದಾರೆ.. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ..
ಕತ್ರಿನಾ – ವಿಕ್ಕಿ ಮದುವೆಗೆ ಬರೋರಿಗೆ ಈ ಕಂಡೀಶನ್ ಅಪ್ಲೈ..!