RC15 | ಹೊಸ ಅವತಾರದಲ್ಲಿ ರಾಮ್ ಚರಣ್
ಕ್ಯಾರೆಕ್ಟರ್ ಡಿಮ್ಯಾಂಡ್ ಮಾಡಿದ್ರೆ ಯಾವುದೇ ಮೇಕ್ ಓವರ್ ಮಾಡಿಕೊಳ್ಳಲು ನಟ ರಾಮ್ ಚರಣ್ ಹಿಂದೆ ಬೀಳುವುದಿಲ್ಲ.
ಇದನ್ನ ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ತೋರಿಸಿಕೊಟ್ಟಿದ್ದಾರೆ.
ಸದ್ಯ ಚರಣ್ ಸ್ಟಾರ್ ನಿರ್ದೇಶಕ ರಾಮ್ ಚರಣ್ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾಗಾಗಿ ಸಾಕಷ್ಟು ಕಸರತ್ತುಗಳನ್ನು ನಡೆಸುತ್ತಿದ್ದಾರಂತೆ.
ಶಂಕರ್ ಸೆಟ್ಟೇರಿಸುತ್ತಿರುವ ಸಿನಿಮಾ ಕಂಪ್ಲೀಟ್ ಆಕ್ಷನ್ ಓರಿಯೆಂಟೆಡ್ ಮ್ಯೂವಿಯಾಗಿದೆ.
ಹೀಗಾಗಿ ಸಿನಿಮಾದಲ್ಲಿ ಸಾಕಷ್ಟು ಫೈಟ್ಸ್, ಆಕ್ಷನ್ ಸೀಕ್ವೆನ್ಸ್ ಇರಲಿವೆ.
ಈ ಫೈಟ್ಸ್ ಗಳನ್ನು ಮಾಡಬೇಕಾಗಿದ್ರೆ ಫಿಟ್ ಆಗಿ ಇರಬೇಕಾಗುತ್ತದೆ.
ಆ ಫಿಟ್ ನೆಸ್ ಗೋಸ್ಕರ ಒಂದು ಸ್ಪೆಷಲ್ ಲುಕ್ ನಲ್ಲಿ ರಾಮ್ ಚರಣ್ ಕಾಣಿಸಿಕೊಳ್ಳಲಿದ್ದಾರಂತೆ.
ಹೀಗಾಗಿ ಚರಣ್ ಸದ್ಯ ಫುಲ್ ವರ್ಕೌಟ್ ಮಾಡುತ್ತಿದ್ದಾರೆ ಅನ್ನೋದು ಟಾಲಿವುಡ್ ನ ಮಾತಾಗಿದೆ.
ಜೊತೆಗೆ ಸತತವಾಗಿ ವಿಭಿನ್ನವಾಗಿ ಚರಣ್ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾತು ಕೂಡ ಟಾಲಿವುಡ್ ನಲ್ಲಿ ನಡೆಯುತ್ತಿದೆ.
ಅದಕ್ಕೆ ತಕ್ಕಂತೆ ಫಿಜಿಕ್ ಕೂಡ ಬದಲಿಸುಕೊಳ್ಳುತ್ತಿದ್ದಾರಂತೆ.
ದಿಲ್ ರಾಜು ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ರಾಮ್ ಚರಣ್ ಜೊತೆ ಕಿಯಾರಾ ಅದ್ವಾನಿ ಕಾಣಿಸಿಕೊಳ್ಳಲಿದ್ದಾರೆ.
ಶೀಘ್ರದಲ್ಲಿಯೇ ಈ ಸಿನಿಮಾದ ಹೊಸ ಶೆಡ್ಯೂಲ್ ಹೈದರಾಬಾದ್ ನಲ್ಲಿ ಶುರುವಾಗಲಿದೆ.
ಇದನ್ನೂ ಓದಿ : KGF 3 ಸಿನಿಮಾದಲ್ಲಿ ಯಶ್ ಬದಲಿಗೆ ಮತ್ತೊಬ್ಬ ಹೀರೋ ಎಂಟ್ರಿ