RCB | ಬೌಲರ್ ಹೆಸರಲ್ಲಿ ಅತ್ಯಂತ ಕೆಟ್ಟ ದಾಖಲೆ
1 min read
RCB | ಬೌಲರ್ ಹೆಸರಲ್ಲಿ ಅತ್ಯಂತ ಕೆಟ್ಟ ದಾಖಲೆ
ಆರ್ಸಿಬಿ ಬೌಲರ್ ಆಕಾಶ್ ದೀಪ್ ಐಪಿಎಲ್ 2022ರಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದಿದ್ದಾರೆ.
CSK ವಿರುದ್ಧದ ಪಂದ್ಯದಲ್ಲಿ ಆಕಾಶ್ ದೀಪ್ ಒಂದೇ ಓವರ್ನಲ್ಲಿ 11 ಎಸೆತಗಳನ್ನು ಬೌಲ್ ಮಾಡಿದ್ದಾರೆ.
ಜೊತೆಗೆ 11 ಎಸೆತಗಳನ್ನು ಎಸೆದ ಆಕಾಶ್ ದೀಪ್ 24 ರನ್ ನೀಡಿದರು.
ಒಟ್ಟಾರೆ ಪಂದ್ಯದಲ್ಲಿ ಒಟ್ಟು 4 ಓವರ್ ಗಳನ್ನು ಬೌಲ್ ಮಾಡಿದ ಆಕಾಶ್ ದೀಪ್, 58 ರನ್ ನೀಡಿದರು. ಅಲ್ಲದೇ ಒಂದೇ ಒಂದು ವಿಕೆಟ್ ಪಡೆದಿಲ್ಲ.
ರಾಬಿನ್ ಉತ್ತಪ್ಪ – ಶಿವಂ ದುಬೆ ಆರ್ ಸಿಬಿ ಬೌಲರ್ ಗಳ ಬೆಂಡೆತ್ತಿದ್ರು. ಹೀಗಾಗಿ ಆರ್ ಸಿಬಿ ನಾಯಕ ಫಾಫ್ ಡುಪ್ಲಸಿ ಸಂಕಷ್ಟಕ್ಕೆ ಸಿಲುಕಿದರು.
ಈ ಹಂತದಲ್ಲಿ ಫಾಫ್ 18ನೇ ಓವರ್ ಬೌಲ್ ಮಾಡಲು ಆಕಾಶ್ ದೀಪ್ ಕೈಗೆ ಚೆಂಡನ್ನು ನೀಡಿದರು.
ಆದ್ರೆ ಆಕಾಶ್ ದೀಪ್ ಓವರ್ ಪೂರ್ಣಗೊಳಿಸಲು 11 ಎಸೆತಗಳನ್ನು ತೆಗೆದುಕೊಂಡರು.
ಮೊದಲ ನಾಲ್ಕು ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಬೌಂಡರಿಯೊಂದಿಗೆ, ಆಕಾಶ್ ದೀಪ್ ಲಯ ತಪ್ಪಿದರು.
ನಂತರ ಅವರು ಸತತವಾಗಿ ನಾಲ್ಕು ವೈಡ್ ಗಳನ್ನು ಹಾಕಿದರು.
ಆ ನಂತರ ಆಕಾಶ್ ದೀಪ್ ಎರಡು ಎಸೆತಗಳನ್ನು ಎಸೆದು ಒಟ್ಟಾರೆ 24 ರನ್ಗಳನ್ನು ನೀಡಿದರು.
ಇದರೊಂದಿಗೆ ಅಭಿಮಾನಿಗಳು ಆಕಾಶ್ ದೀಪ್ ಅವರನ್ನು ಟ್ರೋಲ್ ಮಾಡಿದ್ದಾರೆ rcb-bowler-akash-deep-bowls-11-balls-single-over