RCB ಗೆ ಹೊಸ ಜೋಷ್ ತಂದ ಲಯನ್
14 ವರ್ಷಗಳಿಂದ ಒಂದು ಲೆಕ್ಕಾ.. ಈಗ ಒಂದು ಲೆಕ್ಕಾ.. ಈ ಬಾರಿ ಆರ್ ಸಿಬಿ ಕಪ್ ಗೆಲ್ಲೋದು ಪಕ್ಕಾ..!!! ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಘೋಷವಾಕ್ಯ..!
ಹೌದು…! ಇಂಡಿಯನ್ ಪ್ರಿಮಿಯರ್ ಲೀಗ್ ಶುರುವಾಗಿ ಬರೋಬ್ಬರಿ 14 ವರ್ಷಗಳು ಕಳೆದಿವೆ. ಐದು ಫ್ರಾಂಚೈಸಿಗಳು ಚಾಂಪಿಯನ್ ಪಟ್ಟಕೇರಿವೆ.
ಆರಂಭದಲ್ಲಿದ್ದ ಕ್ರಿಕೆಟ್ ಸೂಪರ್ ಸ್ಟಾರ್ ಗಳು ಈಗ ಮೆಂಟರ್ ಗಳಾಗಿದ್ದಾರೆ. ಗಲ್ಲಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದ ಪಡ್ಡೆಗಳು ಈಗ ಟಿವಿಗಳಲ್ಲಿ ಮಿಂಚುತ್ತಿದ್ದಾರೆ.
ಹಳೆ ನೀರು ಹೋಗಿದೆ. ಹೊಸ ನೀರು ಬಂದಿದೆ. ಆದ್ರೆ ಆರ್ ಸಿಬಿ ಮಾತ್ರ ಕಪ್ ಗೆಲ್ಲಲೇ ಇಲ್ಲ.
ಕಳೆದ 14 ವರ್ಷಗಳಲ್ಲಿ ಬೆಂಗಳೂರು ತಂಡದಲ್ಲಿ ಘಟಾನುಘಟಿ ಆಟಗಾರರೇ ಆಡಿದ್ದಾರೆ. ವಿಶ್ವಕ್ರಿಕೆಟ್ ನ ಸೂಪರ್ ಸ್ಟಾರ್ ಗಳು ಬೆಂಗಳೂರು ತಂಡಕ್ಕಾಗಿ ಬ್ಯಾಟ್ ಬೀಸಿದ್ದಾರೆ.
ಆದ್ರೆ ಕಪ್ ತಂದುಕೊಡುವಲ್ಲಿ ಮಾತ್ರ ಯಾರೂ ಯಶಸ್ವಿಯಾಗಿಲ್ಲ. ಆದ್ರೂ ಆರ್ ಸಿಬಿಯ ಕ್ರೇಜ್ ಮಾತ್ರ ಎಂದಿಗೂ ಕಡಿಮೆಯಾಗಿಲ್ಲ.
ಅಂದಹಾಗೆ ಆರ್ ಸಿಬಿ ಪಾಳಯದಲ್ಲಿ ಈ ಬಾರಿ ಹೊಸ ಜೋಷ್ ತುಂಬಿಕೊಂಡಿದೆ.
ವಿರಾಟ್ ನಾಯಕತ್ವ ತ್ಯಜಿಸಿದ್ದು, ಎಬಿಡಿ ತಂಡದಿಂದ ದೂರವಾಗಿದ್ದರಿಂದ ಮಂಕಾಗಿದ್ದ ಆರ್ ಸಿಬಿಯನ್ಸ್ ಗೆ ಆಫ್ರಿಕನ್ ಲಯನ್ ಹೊಸ ಹುಮ್ಮಸ್ಸನ್ನ ತಂದುಕೊಟ್ಟಿದೆ.
ಆ ಲಯನ್ ಆಗಮನ ಮತ್ತು ಸಾರಥ್ಯದಿಂದಾಗಿ ಬೆಂಗಳೂರು ತಂಡದಲ್ಲಿ ಕರೆಂಟ್ ಪಾಸಾಗಿದೆ.
ನಿಜ..! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಫ್ರಿಕಾದ ಸೂಪರ್ ಸ್ಟಾರ್ ಫಾಫ್ ಡುಪ್ಲಸೀ ಕ್ಯಾಪ್ಟನ್ ಅಂತಾ ಘೋಷಣೆ ಆಗುತ್ತಿದ್ದಂತೆ, ಆರ್ ಸಿಬಿಯನ್ಸ್ ಗೆ ಹಿಡಿದಿದ್ದ ಮಂಕು ದಿಕ್ಕಾಪಾಲಾಗಿದೆ.
ಅದರಲ್ಲೂ ಡುಪ್ಲಸೀ ಆಡಿದ ಈ ಸಲ ಕಪ್ ನಮ್ದೆ ಮಾತು ಬೆಂಗಳೂರು ತಂಡದ ಅಭಿಮಾನಿಗಳಿಗೆ ಬೆಟ್ಟದಷ್ಟು ವಿಶ್ವಾಸವನ್ನ ಮೂಡಿಸಿದೆ.
ಮುಖ್ಯವಾಗಿ ಡುಪ್ಲಸಿಗೆ ಆರ್ ಸಿಬಿ ನಾಯಕತ್ವ ನೀಡಿದ್ದು, ತಂಡದಲ್ಲಿ ಹೊಸ ಎನರ್ಜಿಯನ್ನ ತುಂಬಿದಂತೆ ಆಗಿದೆ.
ಆಟಗಾರನಾಗಿ ಫಾಫ್ ಡುಪ್ಲಸೀ ಐಪಿಎಲ್ ನಲ್ಲಿ ಈಗಾಗಲೇ ಯಶಸ್ಸು ಕಂಡಿದ್ದಾರೆ. ಚೆನ್ನೈ ತಂಡಕ್ಕೆ ಕಪ್ ಗೆದ್ದು ಕೊಟ್ಟಿದ್ದಾರೆ.
ಈಗ ಅವರೇ ಒಂದು ತಂಡದ ನಾಯಕರಾಗಿದ್ದು, ತಂಡವನ್ನ ಚಾಂಪಿಯನ್ ಮಾಡೋದ್ರರಲ್ಲಿ ಡೌಟ್ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.
ಇತ್ತ ಒಂದಿಷ್ಟು ಬದಲಾವಣೆಗಳನ್ನ ಮಾಡಿಕೊಂಡರೇ ಪ್ಲೇಯಿಂಗ್ ಫಿಕ್ಸ್ ಆದ್ರೆ ಡುಪ್ಲಸೀ ನೇತೃತ್ವದಲ್ಲಿ ಬೆಂಗಳೂರು ಚಾಂಪಿಯನ್ ಆಗೋದು ಪಕ್ಕಾ ಎನ್ನುತ್ತಿದ್ದಾರೆ ಕ್ರೀಡಾ ವಿಶ್ಲೇಷಕರು..