Rcb foundation day : RCB ಸ್ಥಾಪನೆಯಾಗಿ ಇಂದಿಗೆ 15 ವರ್ಷ…
ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ ಹೆಸರಲ್ಲ ಅಭಿಮಾನಿಗಳ ಉಸಿರು. ಇಡೀ IPL ಪ್ರಾಂಚೈಸಿಯಲ್ಲಿ 10 ಟೀಮ್ ಗಳಿದ್ದರು ಅತಿಹೆಚ್ಚು ಕ್ರೇಜ್ ಹೊಂದಿರುವ, ಅತಿಹೆಚ್ಚು ಎಂಟರ್ ಟೈನ್ ಮೆಂಟ್ ನೀಡುವ, ಅತಿ ಹೆಚ್ಚು ರಾಯಲ್ ಮತ್ತು ಲಾಯಲ್ ಫ್ಯಾನ್ ಭೇಸ್ ಹೊಂದಿರುವ ಏಕೈಕ ಟೀಮ್ ಎಂದರೆ ಅದು RCB.
ಇಂಥಹ RCB ಗೆ ಇಂದು ಜನ್ಮ ದಿನ 24 ಜನವರಿ ಇದೇ ದಿನಾಂಕದ ಹದಿನೈದು ವರ್ಷಗಳ ಹಿಂದೆ 2008 ರಲ್ಲಿ RCB ಪ್ರಾಂಚೈಸಿ ಜನ್ಮ ತಾಳಿತ್ತು. ಇಂದಿಗೆ RCB ಗೆ ಹದಿನೈದನೆ ಜನ್ಮದಿನ . 2008 ರಿಂದ 2022 ರವರೆಗೆ ರಂಜಿಸಿರುವ ರಾಯಲ್ ಚಾಂಲೆಂಜರ್ಸ್ ಅಭಿಮಾನಿಗಳಿಗೆ ಇರುವ ಒಂದೇ ಕೊರತೆಯೆಂದರೇ ಅದು ಕಪ್.. RCB ಇಲ್ಲಿಯ ವರೆಗೆ ಮೂರು ಭಾರಿ ಪೈನಲ್ಗೇರಿದೆಯಾದರೂ ಚಾಂಪಿಯನ್ ಪಟ್ಟಕ್ಕೇರುವ ಕೊನೆ ಕ್ಷಣದಲ್ಲಿ ಎಡವಿಬಿದ್ದಿದೆ. ಆದರೇ ಇದು RCB ಕ್ರೇಜ್ ಗಾಗಲಿ ಫ್ಯಾನ್ ಫಾಲೋಯಿಂಗ್ ಗೆ ಆಗಲಿ ಕುಂದು ತಂದಿಲ್ಲ.
ಇದೀಗ RCB ಬದಲಾಗಿದೆ. ಮೊದ ಮೊದಲಿಗೆ ರಾಹುಲ್ ದ್ರಾವಿಡ್ ನೇತೃತ್ವನ್ನ ವಹಿಸಿದ್ದರು ಆನಂತ ದೀರ್ಘ ಕಾಲದ ವರೆಗೆ ವಿರಾಟ್ ತಂಡವನ್ನ ಮುನ್ನಡೆಸಿದ್ದರು. ಇದೀಗ ಕೋಹ್ಲಿ ಕ್ಯಾಪ್ಟನ್ಸಿ ಇಲ್ಲ. ABD 360 ಡಿಗ್ರಿ ಬ್ಯಾಟಿಂಗ್ ಇಲ್ಲ. ಕ್ರಿಸ್ ಗೇಲ್ ಸ್ಪೋಟಕ ಬ್ಯಾಟಿಂಗ್ ಇಲ್ಲ. ತಂಡ ಹಲವು ಹಂತಗಳಲ್ಲಿ ಬದಲಾಗಿದೆ. ಆದರೇ ಬದಲಾಗದೇ ಇರವುದೆಂದರೇ ಒಂದೇ ಒಂದು ಅದು ಈ ಸಲ ಕಪ್ ನಮ್ಮದೇ ಎನ್ನುವ ಸ್ಲೋಗನ್.
ಇನ್ನೂ 2023 ರ IPL ಗಾಗಿ ಮಿನಿ ಹಾರಜು ಮುಗಿದಿದೆ. ಡುಪ್ಲೆಸಿಸ್ ನಾಯಕತ್ವದಲ್ಲಿ ತಂಡ ಮತ್ತೊಮ್ಮೆ ಕಪ್ ಗೆಲ್ಲುವ ಕಡೆಗೆ ಹೊರಡಿಲಿದೆ.
2023 ಕ್ಕಾಗಿ RCB ತಂಡ ಈ ರೀತಿ ಇದೆ..
ವಿರಾಟ್ ಕೊಹ್ಲಿ
ಗ್ಲೆನ್ ಮ್ಯಾಕ್ಸ್ವೆಲ್
ಮೊಹಮ್ಮದ್ ಸಿರಾಜ್
ಫಾಫ್ ಡು ಪ್ಲೆಸಿಸ್
ಹರ್ಷಲ್ ಪಟೇಲ್
ವನಿಂದು ಹಸರಂಗ
ದಿನೇಶ್ ಕಾರ್ತಿಕ್
ಜೋಶ್ ಹ್ಯಾಜಲ್ವುಡ್
ಶಹಬಾಜ್ ಅಹಮದ್
ಅನುಜ್ ರಾವತ್
ಆಕಾಶ್ ದೀಪ್
ಮಹಿಪಾಲ್ ಲೋಮ್ರೋರ್
ಫಿನ್ ಅಲೆನ್
ಶೆರ್ಫೇನ್ ರುದರ್ಫೋರ್ಡ್
ಜೇಸನ್ ಬೆಹ್ರೆನ್ಡಾರ್ಫ್
ಸುಯಶ್ ಪ್ರಭುದೇಸಾಯಿ
ಅನೀಶ್ವರ್ ಗೌತಮ್
ಕರಣ್ ಶರ್ಮಾ
ಡೇವಿಡ್ ವಿಲ್ಲಿ
ರಜತ್ ಪಾಟಿದಾರ್
ಸಿದ್ಧಾರ್ಥ್ ಕೌಲ್
ಚಾಮ ಮಿಲಿಂದ್
Rcb foundation day : 15 years of RCB foundation today…