RCB ಯ ಪ್ಲೇಯಿಂಗ್ 11 ಬದಲಾವಣೆ ಪಕ್ಕನಾ..?

1 min read
IPL 2022 RCB Lovers vs Haters saaksha tv

IPL 2022 RCB Lovers vs Haters saaksha tv

RCB ಯ ಪ್ಲೇಯಿಂಗ್ 11 ಬದಲಾವಣೆ ಪಕ್ಕನಾ..?

ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಈಡನ್ ಗಾರ್ಡನ್ಸ್ ನಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಸೆಣಸಲು ಸಜ್ಜಾಗುತ್ತಿದೆ.

ಪಾಯಿಂಟ್ಸ್ ಟೇಬಲ್‌ನಲ್ಲಿ ಒಟ್ಟು 16 ಅಂಕಗಳನ್ನು ಕಲೆ ಹಾಕಿದ್ದ ಫಾಫ್‌ ಡು ಪ್ಲೆಸಿಸ್‌ ನಾಯಕತ್ವದ ಆರ್‌ಸಿಬಿ, ನಾಲ್ಕನೇ ಸ್ಥಾನದೊಂದಿಗೆ ನಾಕೌಟ್‌ ಗೆ ಅರ್ಹತೆ ಪಡೆದುಕೊಂಡಿದೆ.

ಲೀಗ್ ಹಂತದಲ್ಲಿ 14 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂಟು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ, ಆರು ಪಂದ್ಯಗಳಲ್ಲಿ ಸೋಲು ಕಂಡಿದೆ.

ಅಂದಹಾಗೆ ಆರ್ ಸಿಬಿ ತಂಡ ಲೀಗ್ ಹಂತದಲ್ಲಿ  ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಮಾತ್ರ ಸೆಣಸಿತ್ತು. ಆಗ ಬೆಂಗಳೂತು ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 18 ರನ್ ಗಳಿಂದ ಜಯ ಸಾಧಿಸಿತ್ತು. ಅದೇ ವಿಶ್ವಾಸದಲ್ಲಿ ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿ ಕಣಕ್ಕಿಳಿಯಲಿದೆ.

ಆದ್ರೆ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದ ಆರ್‌ಸಿಬಿ ಗೆಲುವು ಪಡೆಯಬೇಕೆಂದರೆ, ಆರಂಭಿಕರಾದ ವಿರಾಟ್‌ ಕೊಹ್ಲಿ ಅಥವಾ ಫಾಫ್‌ ಡು ಪ್ಲೆಸಿಸ್ ಅವರಲ್ಲಿ ಒಬ್ಬರು ದೀರ್ಘಾವಧಿ ಬ್ಯಾಟ್‌ ಮಾಡಲೇಬೇಕು.

ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ರಜತ್‌ ಪಾಟಿದರ್‌ ಅವರಿಂದ ಅತ್ಯುತ್ತಮ ಪ್ರದರ್ಶನ ಹೊರಬರಬೇಕು. ಒಂದು ವೇಳೆ ಟಾಪ್ ಆರ್ಡರ್ ಬ್ಯಾಟರ್ ಗಳು ವೈಫಲ್ಯ ಅನುಭವಿಸಿದ್ರೆ, ಕೆಳ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್, ಮಹಿಪಾಲ್ ಲೋಮ್ರೋರ್ ತಂಡಕ್ಕೆ ನೆರವಾಗಲು ಸಿದ್ಧರಾಗಿರಬೇಕು.

ಮುಖ್ಯವಾಗಿ ಆರಂಭದ ಪಂದ್ಯಗಳಲ್ಲಿ ಮಿಂಚಿದ್ದ ಶಹಬ್ಬಾಸ್ ಅಹ್ಮದ್ ಇಂದಿನ ಪಂದ್ಯದಲ್ಲಿ ಅವಕಾಶ ಸಿಕ್ಕರೇ ತಮ್ಮ ತಾಕತ್ತು ತೋರಿಸಲು ಸಜ್ಜಾಗಿರಬೇಕು.  

RCB Playing 11 changes for eliminator saaksha tv
RCB Playing 11 changes for eliminator saaksha tv

ಇನ್ನು ಬೌಲಿಂಗ್ ವಿಭಾಗದ ಬಗ್ಗೆ ಹೇಳೋದಾದ್ರೆ, ಜೋಶ್ ಹೇಝಲ್ ವುಡ್, ವನಿಂದು ಹಸರಂಗ ಎಂದಿನಂತೆ ಇಂದು ಮತ್ತಷ್ಟು ಪರಿಣಾಮಕಾರಿಯಾಗಿ ವಿಕೆಟ್ ಬೇಟೆಯಾಡಬೇಕು.

ಹರ್ಷಲ್ ಪಟೇಲ್ ಕಳೆದ ಪಂದ್ಯದಲ್ಲಿ ಇಂಚೂರಿ ಆಗಿದ್ದು, ಪಂದ್ಯ ನಡೆಯುವಾಗಲೇ ಮೈದಾನ ತೊರೆದರು. ಅವರು ಇಂದಿನ ಪಂದ್ಯಕ್ಕೆ ಲಭ್ಯವಿರಲಿದ್ದಾರೆ ಎಂಬ ಮಾತುಗಳು ಬರುತ್ತಿವೆ.

ಹೀಗಾಗಿ ಹರ್ಷಲ್ ಪಟೇಲ್ ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಬೇಕು. ಮುಖ್ಯವಾಗಿ ಲಕ್ನೋ ತಂಡದ ಇನ್ ಫಾರ್ಮ್ ಬ್ಯಾಟರ್ ಗಳಾದ ರಾಹುಲ್, ಡಿ ಕಾಕ್, ದೀಪಕ್ ಹೂಡ ಅವರನ್ನ ಬೇಗ ಪೆವಿಲಿಯನ್ ಸೇರಿಸಬೇಕು.  

ಇದಲ್ಲದೇ ಮೊಹ್ಮದ್ ಸಿರಾಜ್ ಅವರ ಬದಲಿಗೆ ಗುಜರಾತ್ ಟೈಟಾನ್ಸ್ ವಿರುದ್ಧ ಆರ್ ಸಿಬಿ ಪ್ಲೇಯಿಂಗ್ ಇಲೆವೆನ್ ಗೆ ಬಂದ ಸಿದ್ಧಾರ್ಥ್ ಕೌಲ್ ಅವರನ್ನ ಇಂದಿನ ಪಂದ್ಯದಿಂದ ಕೈಬಿಡಬಹುದು.

ಅವರ ಬದಲಿಗೆ ಮತ್ತೆ ಸಿರಾಜ್ ಅವರನ್ನ ಆಡಿಸಬಹುದು. ಅಥವಾ ಹರ್ಷಲ್ ಅನ್ ಫಿಟ್ ಆಗಿದ್ದರೂ ಸಿರಾಜ್ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಇನ್ನುಳಿದಂತೆ ಆರ್ ಸಿಬಿ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ನಿರೀಕ್ಷೆ ಮಾಡುವಂತಿಲ್ಲ.

ಆರ್ ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್

ವಿರಾಟ್ ಕೊಹ್ಲಿ

ಫಾಫ್ ಡುಪ್ಲಸಿಸ್

ಗ್ಲೆನ್ ಮ್ಯಾಕ್ಸ್ ವೆಲ್

ರಜತ್ ಪಟಿದಾರ್

ಮಹಿಪಾಲ್ ಲೋಮ್ರೊರ್

ದಿನೇಶ್ ಕಾರ್ತಿಕ್

ಶಹಬ್ಬಾಸ್ ಅಹ್ಮದ್

ವನಿಂದು ಹಸರಂಗ

ಹರ್ಷಲ್ ಪಟೇಲ್

ಜೋಶ್ ಹೆಜಲ್ ವುಡ್

ಸಿದ್ಧಾರ್ಥ್ ಕೌಲ್ ಅಥವಾ ಸಿರಾಜ್

RCB Playing 11 changes for eliminator

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd