RCBಯ ಯೂಟ್ಯೂಬ್ ಚಾನೆಲ್ ಹ್ಯಾಕ್!?
ಆರ್ ಸಿಬಿ ವಿಡಿಯೋಗಳೆಲ್ಲವೂ ಡಿಲೀಟ್
“ಮೈಕ್ರೋ ಸ್ಟ್ರಾಟಜಿ” ಎಂಬ ಕಂಪನಿಯಿಂದ ಹ್ಯಾಕ್
ಅತಿ ಹೆಚ್ಚು ಫ್ಯಾನ್ಸ್ ಹೊಂದಿರುವ ಐಪಿಎಲ್ ಫ್ರಾಂಚೈಸಿ
ಈ ಹಿಂದೆ ಟ್ವಿಟ್ಟರ್ ಖಾತೆ ಕೂಡ ಹ್ಯಾಕ್ ಆಗಿತ್ತು
ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಇರುವ, ವಿಶ್ವದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಅಧಿಕೃತ ಯುಟ್ಯೂಬ್ ಚಾನೆಲ್ ಹ್ಯಾಕ್ ಆಗಿದೆ.
ಮೈಕ್ರೋ ಸ್ಟ್ರಾಟಜಿ ಎಂಬ ಕ್ರಿಪ್ಟೋ ಕರೆನ್ಸಿ ಕಂಪನಿ ಆರ್ ಸಿಬಿ ಯೂಟ್ಯೂಬ್ ಚಾನೆಲ್ ಅನ್ನು ಹ್ಯಾಕ್ ಮಾಡಿದೆ ಎಂದು ವರದಿಯಾಗಿದೆ.
ಅಲ್ಲದೇ ಯೂಟ್ಯೂಬ್ ನಲ್ಲಿ ಎಲ್ಲ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
RCB ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ, ಏಕೆಂದರೆ ಕಳೆದ ವರ್ಷವಷ್ಟೇ ಈ ಫ್ರಾಂಚೈಸಿಯ ಟ್ವಿಟರ್ ಖಾತೆಯನ್ನು ಕೂಡ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದರು.

ಇನ್ನು ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡಿತ್ತು. 15 ನೇ ಸೀಸನ್ ನಲ್ಲಿ 15 ಪಂದ್ಯಗಳನ್ನಾಡಿದ್ದ ಬೆಂಗಳೂರು ತಂಡ, 9 ರಲ್ಲಿ ಗೆಲುವು ಸಾಧಿಸಿದೆ.
ಲೀಗ್ ಹಂತದಲ್ಲಿ 8 ಪಂದ್ಯಗಳ ಗೆಲುವುಗಳೊಂದಿಗೆ 16 ಅಂಕಗಳನ್ನು ಪಡೆದುಕೊಂಡು ಅಂತಿಮ ನಾಲ್ಕರ ಹಂತ ತಲುಪಿತ್ತು.
ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಿತ್ತು.
ಇದರಲ್ಲಿ ಗೆದ್ದ ಬಳಿಕ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ತಾನ್ ತಂಡದ ವಿರುದ್ದ ಸೋತು ಟೂರ್ನಿಯಿಂದ ಹೊರ ಬಿತ್ತು.
ಈ ಸೀಸನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫಾಫ್ ಡುಪ್ಲಸಿಸ್ ಮುನ್ನಡೆಸಿದ್ದರು.







