RCB | ಅದು ಕೊಹ್ಲಿ ಬ್ಯಾಟಿಂಗ್ ಅಲ್ಲ.. ವಿರಾಟ್ ಪವರ್ ತಗ್ಗಿದೆ..
ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ನಲ್ಲಿ ಬೃಹತ್ ಇನ್ನಿಂಗ್ಸ್ ಆಡದಿದ್ದರೂ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ವಿರಾಟ್ ಈ ಋತುವಿನಲ್ಲಿ ಇದುವರೆಗೆ ನಾಲ್ಕು ಪಂದ್ಯಗಳಲ್ಲಿ 106 ರನ್ ಗಳಿಸಿದ್ದಾರೆ. ಏಪ್ರಿಲ್ 9 ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 48 ರನ್ ಗಳಿಸಿ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮತ್ತೊಂದೆಡೆ, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ.
ಕೊಹ್ಲಿ ಇನ್ನೂ ಸಂಪೂರ್ಣವಾಗಿ ಫಾರ್ಮ್ಗೆ ಬಂದಿಲ್ಲ ಎಂದಿರುವ ಮಂಜ್ರೇಕರ್, ಕೊಹ್ಲಿ ಬ್ಯಾಟಿಂಗ್ ನಲ್ಲಿ ಈ ಹಿಂದಿನಂತೆ ಆಕ್ರಮಣಕಾರಿಯಾಗಿಲ್ಲ ಎಂದಿದ್ದಾರೆ.
ಕೊಹ್ಲಿ ಈ ಋತುವಿನಲ್ಲಿ ರನ್ ಗಳಿಸುತ್ತಿದ್ದಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ನಾನು ಕೊಹ್ಲಿಯಿಂದ ಇಂತಹ ಇನ್ನಿಂಗ್ಸ್ ಅನ್ನು ನಿರೀಕ್ಷಿಸಿರಲಿಲ್ಲ.
ಈ ಹಿಂದೆ ಅವರು ಸಿಕ್ಸರ್ ಬಾರಿಸಿದ್ರೆ ಸ್ಟಾಂಡ್ ಗಳಲ್ಲಿ ಬೀಳುತ್ತಿತ್ತು. ಆದ್ರೆ ಈಗ ಬೌಂಡರಿಯನ್ನ ಮಾತ್ರ ಕ್ಲೀಯರ್ ಮಾಡ್ತಿದ್ದಾರೆ. ಆತನ ಬ್ಯಾಟಿಂಗ್ ನಲ್ಲಿ ಪವರ್ ಕಡಿಮೆಯಾಗಿದೆ ಎಂದು ಸಂಜಯ್ ಮಂಜ್ರೇಕರ್ ಹೇಳಿದರು. rcb-Sanjay Manjrekar not convinced with Kohli’s 48 vs MI









