IPL 2022 | “ನಿನ್ನಂದ ಆಗಲ್ಲ” ಎಂದ ಲಕ್ನೋಗೆ RCB ತಿರುಗೇಟು

1 min read
rcb-savage-response-lsg- tweet IPL 2022 saaksha tv

“ನಿನ್ನಂದ ಆಗಲ್ಲ ಮಗನೇ” ಎಂದ ಲಕ್ನೋಗೆ RCB ತಿರುಗೇಟು

ಐಪಿಎಲ್ ಫ್ರಾಂಚೈಸಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಟ್ರೋಲ್ ಮಾಡುವುದು ಸಹಜ.

ಎರಡು ತಂಡಗಳ ನಡುವಿನ ಪಂದ್ಯದ ಸಂದರ್ಭದಲ್ಲಿ, ವಿಜಯದ ನಿರೀಕ್ಷೆಯಲ್ಲಿ ಪಂಚ್‌ಗಳನ್ನು ಟ್ವೀಟ್ ಮಾಡೋದು ಸಾಮಾನ್ಯವಾಗಿ ನಡೆಯುತ್ತವೆ.

ಆದರೆ, ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಆ ಮಿತಿ ಮೀರಿದ್ರೆ ಲಕ್ನೋ ಅನುಭವಿಸಿ ಅವಮಾನವನ್ನು ಅನುಭವಿಸಬೇಕಾಗುತ್ತದೆ.

ಮಂಗಳವಾರದಂದು ನೂತನ ತಂಡ ಲಕ್ನೋ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯ ನಡೆಯಿತು.

ಪಂದ್ಯಕ್ಕೂ ಮುನ್ನ ಅಂತಿಮ ತಂಡವನ್ನು ಪ್ರಕಟಿಸಿದ ಲಕ್ನೋ, ‘ನಿನ್ನಂದ ಆಗಲ್ಲ ಮಗನೇ ಎಂದು ಕಟು ಪದಗಳನ್ನು ಬಳಸಿ ಟ್ವೀಟ್ ಮಾಡಿತ್ತು.

rcb-savage-response-lsg- tweet IPL 2022 saaksha tv

ಈ ಬಗ್ಗೆ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಕರ್ನಾಟಕದ ವೇಗದ ಬೌಲರ್ ದೊಡ್ಡ ಗಣೇಶ್ ಲಕ್ನೋ ಫ್ರಾಂಚೈಸಿ ವಿರುದ್ಧ ಕಿಡಿಕಾರಿದ್ದಾರೆ.

ಕ್ರಿಕೆಟ್‌ನಲ್ಲಿ ಯಾವಾಗಲೂ ಮೋಜಿಗೆ ಅವಕಾಶವಿರುತ್ತದೆ. ಆದರೆ ಐಪಿಎಲ್ ಪ್ರವೇಶಿಸಿರುವ ಹೊಸ ತಂಡ.. 2008ರಿಂದ ಲೀಗ್ ನಲ್ಲಿ ಆಡುತ್ತಿರುವ ತಂಡವನ್ನು ಬೇಟಾ  ಅನ್ನೋದು ಸರಿಯಲ್ಲ ಎಂದಿದ್ದಾರೆ.

ಈ ಪಂದ್ಯದಲ್ಲಿ ಆರ್‌ಸಿಬಿ 18 ರನ್‌ಗಳಿಂದ ಲಕ್ನೋ ವಿರುದ್ಧ ಜಯ ಸಾಧಿಸಿತ್ತು. ಗೆದ್ದ ತಂಡ ತಮ್ಮ ಮೇಲೆ ವ್ಯಂಗ್ಯವಾಡುವ ಲಕ್ನೋಗೆ ಕೌಂಟರ್ ನೀಡುವುದಿಲ್ಲವೇ? ಕೆಜಿಎಫ್ ನ If you think U R BAD IAM U R DAD ಮಾಸ್ ಡೈಲಾಗ್ ನೊಂದಿಗೆ ತಿರುಗೇಟು ಕೊಟ್ಟಿದೆ.

ಇತ್ತ ಲಕ್ನೋ  ಫ್ರಾಂಚೈಸಿ ಬೇಟಾ ಟ್ವೀಟ್‌ ಗೆ ಟೀಕೆಗಳ ಹಿನ್ನೆಲೆಯಲ್ಲಿ ಪೋಸ್ಟ್ ಅನ್ನು ಅಳಿಸಿಹಾಕಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd