ಟಿಮ್ ಡೆವಿಡ್ ಗೆ ಗಿಫ್ಟ್ ಕೊಟ್ಟ RCB ಕ್ಯಾಪ್ಟನ್..!!
ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲು ಕಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ಸ್ ಗೆ ಎಂಟ್ರಿ ಪಡೆದುಕೊಂಡಿದೆ. ಮುಂಬೈನ ವಾಂಖೇಡೆ ಮೈದಾನದಲ್ಲಿ ಡೆಲ್ಲಿ ಸೋಲುತ್ತಿದ್ದಂತೆ ಇತ್ತ ರಾಯಲ್ ಚಾಲೆಂಜರ್ಸ್ ಮತ್ತು ಅದರ ಅಭಿಮಾನಿಗಳು ಕುಣಿದುಕುಪ್ಪಳಿಸಿದರು. ಅದರಲ್ಲೂ ಮುಂಬೈಗೆ ನಿರ್ಣಾಯಕ ಹಂತದಲ್ಲಿ ಗೆಲುವು ತಂದುಕೊಟ್ಟು, ಆರ್ ಸಿಬಿ ತಂಡದ ಅಭಿಮಾನಿಗಳ ಆಸೆ ಜೀವಂತವಾಗಿರಿಸಿದ ಟಿಮ್ ಡೆವಿಡ್ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಆರ್ ಸಿಬಿ ಅಭಿಮಾನಿಗಳು ರೆಡ್ ಅಂಡ್ ಗೋಲ್ಡ್ ಜರ್ಸಿಯಲ್ಲಿರುವ ಡೆವಿಡ್ ಅವರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ. ಸ್ವತಃ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯೇ ತನ್ನ ಟ್ವಿಟ್ಟರ್ ನಲ್ಲಿ ಟಿಮ್ ಡೆವಿಡ್ ಗೆ ಧನ್ಯವಾದವನ್ನ ಹೇಳಿದೆ.
ವಾಸ್ತವಾಗಿ ಬೆಂಗಳೂರು ತಂಡಕ್ಕೆ ಡೆಲ್ಲಿ ಮತ್ತು ಮುಂಬೈ ನಡುವಿನ ಪಂದ್ಯ ಮಹತ್ವದ್ದಾಗಿತ್ತು. ಡೆಲ್ಲಿ ಸೋಲಿಗೆ ಬೆಂಗಳೂರು ತಂಡ ಪ್ರಾರ್ಥನೆ ಮಾಡಿತ್ತು. ಆ ಪ್ರಾರ್ಥನೆಯನ್ನು ಫಲಿಸುವಂತೆ ಮಾಡಿದ್ದು ಮಾತ್ರ ಆರ್ ಸಿಬಿ ತಂಡದ ಮಾಜಿ ಆಟಗಾರ ಟಿಮ್ ಡೆವಿಡ್..!!
ಹೌದು.. ವಾಂಖೇಡೆ ಮೈದಾನದಲ್ಲಿ ಡೆವಿಡ್ ಬ್ಯಾಟಿಂಗ್ ಗೆ ಬರೋದಕ್ಕೂ ಮೊದಲು ಮುಂಬೈ ಸಂಕಷ್ಟದಲ್ಲಿತ್ತು. ಕೊನೆಯ ದೆತ್ ಓವರ್ ಗಳಲ್ಲಿ ಮುಂಬೈಗೆ 60 ಕ್ಕೂ ಹೆಚ್ಚು ರನ್ ಗಳ ಅವಶ್ಯಕತೆ ಇತ್ತು. ಆಗ ಕ್ರೀಸ್ ಗೆ ಬಂದ ಟಿಮ್ ಡೆವಿಡ್ ಬೌಂಡರಿ ಸಿಕ್ಸರ್ ಗಳ ಸುರಿಮಳೆಗೈದರು. ಕೇವಲ 11 ಎಸೆತಗಳಲ್ಲಿ ಎರಡು ಬೌಂಡರಿ, ನಾಲ್ಕು ಸಿಕ್ಸರ್ ಗಳ ನೆರವಿನಿಂದ 34 ರನ್ ಚಚ್ಚಿ, ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟರು. ಡೆಲ್ಲಿ ತಂಡದ ಕೈ ಸೇರುತಿದ್ದ ಪಂದ್ಯವನ್ನು ಡೆವಿಡ್ ಕಿತ್ತುಕೊಂಡು ಮುಂಬೈ ಇಂಡಿಯನ್ಸ್ ತಂಡದ ಗೆಲುವಿನ ಹಾದಿಯನ್ನ ಸುಗಮಗೊಳಿಸಿದರು.
ಹೀಗಾಗಿ ಹಾರ್ಡ್ ಹಿಟ್ಟರ್ ಟಿಮ್ ಡೆವಿಡ್ ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲಸಿಸ್ ಅಪರೂದ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ. ತಮ್ಮ ಜೊತೆಗೆ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್ ಮುಂಬೈ ಇಂಡಿಯನ್ಸ್ ಕಿಟ್ ನಲ್ಲಿರುವ ಫೋಟೋವನ್ನು ಡುಪ್ಲಸಿಸ್ ಟಿಮ್ ಡೆವಿಡ್ ಗೆ ಕಳುಹಿಸಿಕೊಟ್ಟಿದ್ದಾರೆ. ಈ ವಿಷಯವನ್ನು ಸ್ವತಃ ಡೆವಿಡ್ ತಿಳಿಸಿದ್ದು, ಶೀಘ್ರದಲ್ಲಿಯೇ ಆ ಫೋಟೋವನ್ನು ತನ್ನ ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೇ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 159 ರನ್ ಗಳಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 19.1 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಗೆಲುವಿನೊಂದಿಗೆ ಟೂರ್ನಿಯನ್ನ ಮುಗಿಸಿದ್ರೆ, ಡೆಲ್ಲಿ ಪ್ಲೇ ಆಫ್ಸ್ ಚಾನ್ಸ್ ಮಿಸ್ ಮಾಡಿಕೊಂಡು ನಿರಾಸೆ ಅನುಭವಿಸಿದೆ. rcb tim-david-received-picture-faf-du-plessis