RCB Unbox 2023 Event : ಬೆಂಗಳೂರಿಗೆ ಬಂದಿಳಿದ ಕೊಹ್ಲಿ, ಎಬಿಡಿ, ಕ್ರಿಸ್ ಗೇಲ್….
ಇದೇ ಮಾರ್ಚ್ 31ರಿಂದ ಆರಂಭಗೊಳ್ಳಲಿರುವ 16ನೇ ಆವೃತ್ತಿಯ ಐಪಿಎಲ್ ಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಆರ್ ಸಿ ಬಿ ತಂಡದ ನಾಯಕ ಪಾಫ್ ಡುಪ್ಲೆಸಿಸ್ ಮತ್ತು ಮ್ಯಾಕ್ಸವೆಲ್ ಬೆಂಗಳೂರಿಗೆ ಆಗಮಿಸಿದ್ದು ತರಬೇತಿ ಆರಂಭಿಸಿದ್ದಾರೆ. ಇದೀಗ ಮಾಜಿ ನಾಯಕ ವಿರಾಟ್ ಕೊಹ್ಲಿ ಸಹ ಬೆಂಗಳೂರಿಗೆ ಆಗಮಿಸಿದ್ದು, ಆರ್ ಸಿ ಬಿ ಅನ್ ಬಾಕ್ಸಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾರ್ಚ್ 26, 2023 ರಂದು ಸಂಜೆ 4 ರಿಂದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಟಾರ್ ಸ್ಟಡ್ಡ್ ಅನ್ಬಾಕ್ಸಿಂಗ್ ಕಾರ್ಯಕ್ರಮವನ್ನ ಆಯೋಜಿಸಿದೆ. ಬೆಂಗಳೂರು ಮೂಲದ ಫ್ರಾಂಚೈಸಿ ಈವೆಂಟ್ಗೆ ಆರ್ಸಿಬಿ ಅನ್ಬಾಕ್ಸ್ ಎಂದು ಕರೆದಿದ್ದು, ಐಪಿಎಲ್ 2023 ರ ಜರ್ಸಿಯನ್ನ ಅನಾವರಣಗೊಳಿಸಲಾಗುತ್ತದೆ. ಅಲ್ಲದೇ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರಂತಹ ಪ್ರಮುಖ ಆಟಗಾರರನ್ನು ಹಾಲ್ ಆಫ್ ಫೇಮ್ನಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಈ ಕ್ರಾರ್ಯಕ್ರಮಕ್ಕಾಗಿ ಕ್ರಿಸ್ ಗೇಲ್ ಮತ್ತಿ ಎಬಿ ಡಿವಿಲಿಯರ್ಸ್ ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದಾರೆ.
ಆರ್ಸಿಬಿ ಅನ್ಬಾಕ್ಸ್ ಈವೆಂಟ್ ಸಂಪೂರ್ಣವಾಗಿ ಅಭಿಮಾನಿಗಳ ಕಾರ್ಯಕ್ರಮವಾಗಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. RCB ಅಭಿಮಾನಿಗಳು RCB ಯ ಅಧಿಕೃತ ವೆಬ್ಸೈಟ್ನಿಂದ ಟಿಕೆಟ್ಗಳನ್ನು ಖರೀದಿಸಬಹುದು. ಈವೆಂಟ್ ವಿವಿಧ ಕಾರ್ಯಕ್ರಮಗಳನ್ನ ಒಳಗೊಂಡಿರುತ್ತದೆ, ಅದರಲ್ಲಿ ಹಾಲ್ ಆಫ್ ಫೇಮ್ ಇಂಡಕ್ಷನ್ ಪ್ರಮುಖ ಕಾರ್ಯಕ್ರಮ . ಹಾಲ್ ಆಫ್ ಫೇಮ್ ಈವೆಂಟ್ನಲ್ಲಿ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಮತ್ತು 360 ಎಬಿ ಡಿವಿಲಿಯರ್ಸ್ ಭಾಗವಹಿಸಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೇಲ್ ಮತ್ತು ಡಿವಿಲಿಯರ್ಸ್ ಧರಿಸಿದ್ದ ಜರ್ಸಿ ಸಂಖ್ಯೆ 17 ಮತ್ತು 333 ಅನ್ನ ನಿವೃತ್ತಿಗೊಳಿಸಲಿದೆ.
ನಾಳೆಯ ದಿನ ಬೆಂಗಳೂರಿನಲ್ಲಿ ಕ್ರಿಸ್ ಗೇಲ್, ಎಬಿಡಿ, ವಿರಾಟ್ ಕೊಹ್ಲಿಯವರನ್ನ ಬಹುದಿನಗಳ ನಂತರ ಒಟ್ಟಿಗೆ ನೋಡಬಹುದು.
RCB Unbox 2023 Event : Kohli, ABD, Chris Gayle landed in Bangalore…