RCB ವಿರಾಟ್ ಗೆ ಕೊಟ್ಟ ಮೊದಲ ಸಂಭಾವನೆ ಎಷ್ಟು ಗೊತ್ತಾ..?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಯ್ಕೆಯಾದ ನಂತರ (ಐಪಿಎಲ್, 2008 ರ ಮೊದಲ ಋತುವಿನ ಬಳಿಕ) ತಮಗೆ ಜರುಗಿದ ಅವಮಾನವನ್ನು ವಿರಾಟ್ ಕೊಹ್ಲಿ ಬಹಿರಂಗಗೊಳಿಸಿದ್ದಾರೆ. rcb-virat-kohli-shares-interesting-memory
ಫೆಬ್ರವರಿ 12 ಮತ್ತು 13 ರಂದು ಮೆಗಾ ಹರಾಜು ಪ್ರತಿಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪಾಡ್ಕ್ಯಾಸ್ಟ್ ಶೋ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಆರ್ಸಿಬಿ ಜೊತೆಗಿನ ತಮ್ಮ ಹಿಂದಿನ ಅನುಭವಗಳನ್ನ ಮೆಲುಕು ಹಾಕಿದ್ದಾರೆ.
ತಮ್ಮ ಐಪಿಎಲ್ ಕೆರಿಯರ್ ನಲ್ಲಿ 15 ಸೀಸನ್ಗಳಲ್ಲಿ ಆರ್ಸಿಬಿಯನ್ನು ಪ್ರತಿನಿಧಿಸಿರುವ ಕೊಹ್ಲಿ, ಐಪಿಎಲ್ ಇತಿಹಾಸದಲ್ಲಿ ಯಾವ ಆಟಗಾರನೂ ಮಾಡದ ದಾಖಲೆ ಬರೆದಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್ ಮೊದಲ ಸೀಸನ್ನಲ್ಲಿ 15 ಸರಾಸರಿಯಲ್ಲಿ ಕೇವಲ 165 ರನ್ ಗಳಿಸಿದ್ದರು. ಹೀಗಾಗಿ ಆರ್ ಸಿಬಿ ಯಜಮಾನ್ಯ 2ನೇ ಸೀಸನ್ ಗಾಗಿ ವಿರಾಟ್ ಅವರನ್ನ ಏರ್ ಪೋರ್ಟ್ ನಿಂದ ಪಿಕ್ ಮಾಡಲು, ಡಕೋಟ ಓಮನಿ ಕಾರ್ ಅನ್ನು ಕಳುಹಿಸಿತ್ತಂತೆ.
ಇನ್ನುಳಿದ ಆಟಗಾರರಿಗೆ ಎಸಿ ಕಾರುಗಳನ್ನು ಕಳುಹಿಸಿಕೊಟ್ಟಿತ್ತಂತೆ. ಇದನ್ನ ನೆನಸಿಕೊಂಡಿರುವ ವಿರಾಟ್ ಕೊಹ್ಲಿ, ಈ ಘಟನೆ ತಮ್ಮ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು ಎಂದಿದ್ದಾರೆ.
ಇನ್ನು ಐಪಿಎಲ್ ನ ಮೊದಲ ಮೂರು ಸೀಸನ್ ಗಳಿಗಾಗಿ ವಿರಾಟ್ ಕೊಹ್ಲಿ 12 ಲಕ್ಷ ರೂಪಾಯಿ ಸಂಭಾವಣೆ ಪಡೆದಿದ್ದರಂತೆ.
ಇದಾದ ಬಳಿಕ ಆರ್ಸಿಬಿ ಪರ ಭರ್ಜರಿ ರನ್ ಗಳಿಸಿದ ಕೊಹ್ಲಿ, ತಂಡದ ನಾಯಕರಾದ್ರು. ಆದ್ರೆ ತಂಡವನ್ನು ಚಾಂಪಿಯನ್ ಆಗಿಸುವಲ್ಲಿ ವಿಫಲರಾಗಿದ್ದಾರೆ.