RCB vs DC : ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ RCB ಬೌಲಿಂಗ್ ಆಯ್ಕೆ…
WPL ಮಹಿಳಾ ಪ್ರೀಮಿಯರ್ ಲೀಗ್ ನ ಮೊದಲ ಡಬಲ್ ಹೆಡರ್ ಪಂದ್ಯ ಇಂದು ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬ್ರಬೋರ್ನ್ ಸ್ಟೇಡಿಯಂನಲ್ಲಿ ಸಣಸಲಿದೆ. ಎರಡನೇ ಪಂದ್ಯ ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ರಾತ್ರಿ 7:30 ರಿಂದ ನಡೆಯಲಿದೆ.
ಸಧ್ಯಕ್ಕೆ ಬೆಂಗಳೂರು ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ, ಸೋಫಿ ಡಿವೈನ್, ಹೀದರ್ ನೈಟ್, ಡೇನ್ ವ್ಯಾನ್ ನೀಕೆರ್ಕ್, ಮೇಗನ್ ಶುಟ್, ರಿಚಾ ಘೋಷ್ ಮತ್ತು ರೇಣುಕಾ ಠಾಕೂರ್ ಅವರಂಥಹ ಹೆಸರಾಂತ ಆಟಗಾರರನ್ನ ಹೊಂದಿರುವ ಆರ್ ಸಿ ಬಿ ತಂಡ ವನ್ನ ವಿಶ್ವಕಪ್ ವಿಜೇತ ಆಸ್ಟ್ರೇಲಿಯನ್ ಮೆಗ್ ಲ್ಯಾನಿಂಗ್ ದೆಹಲಿ ಪರವಾಗಿ ಎದುರಿಸಲಿದ್ದಾರೆ.
ದೆಹಲಿ ಕೂಡ ಸವಾಲಿನ ತಂಡವನ್ನೇ ಹೊಂದಿದೆ. ಲೇಡಿ ಸೆಹ್ವಾಗ್ ಖ್ಯಾತಿಯ ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಶಿಖಾ ಪಾಂಡೆ, ಪೂನಂ ಯಾದವ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ, ರಾಧಾ ಯಾದವ್ ಆರ್ ಸಿ ಬಿ ಟಕ್ಕರ್ ನೀಡಲು ರೆಡಿಯಾಗಿದ್ದಾರೆ.
RCB vs DC : RCB won the toss in the first match and chose to bowl…