RCB vs DC : ಶೆಫಾಲಿ, ಮೆಗ್ ಲ್ಯಾನಿಂಗ್ ಸ್ಫೋಟಕ ಆಟ – ವಿಕೆಟ್ ಪಡೆಯಲು ಪರದಾಡಿದ RCB…
ಮಹಿಳಾ ಪ್ರೀಮಿಯರ್ ಲೀಗ್ ನ ಬೆಂಗಳೂರು ಮತ್ತು ಡೆಲ್ಲಿ ನಡುವಿನ ಪಂದ್ಯದ ಮೊದಲಾರ್ಧ ಮುಕ್ತಾಯಗೊಂಡಿದೆ. ಲೇಡಿ ಸೆಹ್ವಾಗ್ ಶೆಫಾಲಿ ವರ್ಮಾ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ವಿಜೇತ ದೆಹಲಿ ನಾಯಕಿ ಮೆಗ್ ಲ್ಯಾನಿಂಗ್ ಸ್ಫೋಟಕದ ಆರ್ಭಟಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯದ ಮೊದಲರ್ಧದಲ್ಲೇ ತತ್ತರಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತು. ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಗರಿಷ್ಠ 84 ಮತ್ತು ನಾಯಕಿ ಮೆಗ್ ಲ್ಯಾನಿಂಗ್ 72 ರನ್ ಗಳಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ 162 ರನ್ ಸೇರಿಸಿದರು. RCB ಪರ ಹೀದರ್ ನೈಟ್ ಎರಡೂ ವಿಕೆಟ್ ಪಡಯುವ ಮೂಲಕ ಈ ಜೋಡಿಯನ್ನ ಬೇರ್ಪಡಿಸಿದರು.
ಆನಂತರ ಬ್ಯಾಟಿಂಗ್ ಗೆ ಇಳಿದ ಮರಿಯನ್ ಕ್ಯಾಪ್, ಜೆಮಿಮಾ ರಾಡ್ರಿಗಸ್ ತಂಡದ ಸ್ಕೋರ್ ನ್ನ 200 ಗಡ ದಾಟಿಸಿದರು. ಕೊನೆಯಲ್ಲಿ 20 ಓವರ್ ಗಳಲ್ಲಿ ಡೆಲ್ಲಿ ಬೆಂಗಳೂರು 224 ರನ್ ಗಳ ಗುರಿ ನೀಡಿದೆ. ಬ್ಯಾಟಿಂಗ್ ಸ್ನೇಹಿ ಪಿಚ್ ನಲ್ಲಿ ವಿಕೆಟ್ ಕೀಳಲು ಆರ್ ಸಿ ಬಿ ಬೌಲರ್ ಗಳು ಪರದಾಡಿರು. ಕ್ಯಾಪ್ಟನ್ ಸ್ಮೃತಿ ಏಳು ಬೌಲರ್ ಗಳನ್ನ ಪ್ರಯತ್ನಿಸಿದರೂ ಒಬ್ಬ ಬೌಲರ್ ಮಾತ್ರ ವಿಕಟ್ ಪಡೆಯಲು ಶಕ್ತರಾದರು.
ಪವರ್ ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 58 ರನ್ ಗಳಿಸಿದ್ದ ಡೆಲ್ಲಿ 10 ಓವರ್ ಗಳಲ್ಲಿ 100 ರನ್ ಗಳ ಜೊತೆಯಾಟ ಪೂರೈಸಿತು. ಕೊನೆಗೂ ಶೆಫಾಲಿ ಮತ್ತು ಮೆಗ್ ಜೋಡಿ 15 ನೇ ಓವರ್ ನಲ್ಲಿ 162 ರನ್ ಗಳ ಜೊತೆಯಾಟ ನಡೆಸಿ ಬೇರ್ಪಟ್ಟಿತು. ಇದೀಗ ಆರ್ ಸಿ ಬಿ ಬ್ಯಾಟಿಂಗ್ ನಲ್ಲಿ ತೀರುಗೇಟು ಕೊಡುತ್ತಾ ಎನ್ನುವುದನ್ನ ಕಾದು ನೋಡಬೇಕಾಗಿದೆ.
RCB vs DC : Shefali, Meg Lanning explosive game – RCB struggle for wickets…