RCB vs LSG | ಲಕ್ನೋ ಸೂಪರ್ ಜೈಂಟ್ಸ್ Playing XIs
15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ 31ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸವಾಲ್ ಹಾಕಿದೆ.
ಈ ಬಾರಿಯ ಐಪಿಎಲ್ ನಲ್ಲಿ ಎರಡೂ ತಂಡಗಳು ಆರು ಪಂದ್ಯಗಳನ್ನಾಡಿವೆ. ಇದರಲ್ಲಿ ತಲಾ ನಾಲ್ಕು ಪಂದ್ಯಗಳನ್ನು ಎರಡೂ ತಂಡಗಳು ಗೆದ್ದಿವೆ.
ತಲಾ 2 ಪಂದ್ಯಗಳಲ್ಲಿ ಉಭಯ ತಂಡಗಳು ಸೋಲು ಕಂಡಿವೆ. ಆದ್ರೂ ರನ್ ರೇಟ್ ಆಧಾರದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರ್ ಸಿಬಿಗಿಂತ ಮೇಲಿದೆ.
ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡ ಬಲಿಷ್ಠವಾಗಿದೆ. ಬ್ಯಾಟಿಂಗ್, ಬೌಲಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಸಾಲಿಡ್ ಆಗಿದೆ.
ಕೆ.ಎಲ್ ರಾಹುಲ್, ಕ್ವಿಂಟನ್ ಡೀ ಕಾಕ್, ಮಾರ್ಕಸ್ ಸ್ಟೋಯ್ನಸ್, ಆಯುಷ್ ಬಡೋನಿ ಲಕ್ನೋ ತಂಡದ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ.
ಮುಖ್ಯವಾಗಿ ಸೆಂಚೂರಿ ಸಿಡಿಸಿ ಸಖತ್ ಫಾರ್ಮ್ ನಲ್ಲಿರುವ ಕೆ.ಎಲ್.ರಾಹುಲ್ ಗೆ ಬೆಂಗಳೂರು ತಂಡದ ಮೇಲೆ ಉತ್ತಮ ದಾಖಲೆ ಇದೆ.
ಜೊತೆಗೆ ಕ್ವಿಂಟನ್ ಡಿ ಕಾಕ್ ಗೂ ಕೂಡ ಆರ್ ಸಿಬಿ ಮೇಲೆ ಉತ್ತಮ ರೆಕಾರ್ಡ್ ಇದೆ. ಹೀಗಾಗಿ ಈ ಇಬ್ಬರು ಆಟಗಾರರು ಆರ್ ಸಿಬಿಗೆ ಮುಳುವಾಗೋದು ಪಕ್ಕಾ.
ಇನ್ನು ಮಿಡಲ್ ಆರ್ಡರ್ ನಲ್ಲಿ ಮನೀಷ್ ಪಾಂಡೆ, ದೀಪಕ್ ಹೂಡಾ, ಸ್ಟೋಯ್ನಿಸ್, ಆಯುಷ್ ಬಡೋನಿ ಲಕ್ನೋ ತಂಡಕ್ಕೆ ಆಧಾರ ಸ್ತಂಬಗಳಾಗಿದ್ದಾರೆ.
ಜೇಸನ್ ಹೋಲ್ಡರ್, ಕೃನಾಲ್ ಪಾಂಡ್ಯ, ಸ್ಟೋಯ್ನಿಸ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ನಲ್ಲೂ ಮಿಂಚು ಹರಿಸಬಲ್ಲರು.
ಬೌಲಿಂಗ್ ನಲ್ಲಿ ಆವೇಶ್ ಖಾನ್ ಮತ್ತು ರವಿ ಬಿಷ್ನೋಯಿ ಲಕ್ನೋ ತಂಡದ ಕೀ ಪ್ಲೇಯರ್ ಗಳಲಾಗಿದ್ದಾರೆ.
ಇವರಿಗೆ ದುಶ್ಮಂತಾ ಚಮೀತಾ ಸಾಥ್ ನೀಡಿದರೇ ಸಾಕು. ಆದ್ರೆ ಬ್ಯಾಟಿಂಗ್ ವಿಭಾಗಕ್ಕೆ ಹೋಲಿಕೆ ಮಾಡಿದ್ರೆ, ಲಕ್ನೋ ಬೌಲಿಂಗ್ ವಿಭಾಗ ಕೊಂಚ ವೀಕ್ ಆಗಿದೆ.
Playing XIs | ಕೆಎಲ್ ರಾಹುಲ್ (ಸಿ), ಕ್ವಿಂಟನ್ ಡಿ ಕಾಕ್ (ವಾಕ್), ಮನೀಶ್ ಪಾಂಡೆ, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಆಯುಷ್ ಬಡೋನಿ, ಜೇಸನ್ ಹೋಲ್ಡರ್, ಕೃನಾಲ್ ಪಾಂಡ್ಯ, ದುಷ್ಮಂತ ಚಮೀರಾ, ಅವೇಶ್ ಖಾನ್, ರವಿ ಬಿಷ್ಣೋಯ್
RCB vs LSG Lucknow Super Giants Playing XIs