RCB vs LSG-preview | ಯಾರು ಬಲಿಷ್ಠ..? ಚೇಂಜಸ್ ಏನು..?   

1 min read
rcb-vs-lsg-preview-Lucknow Super Giants and Royal Challengers Bangalore battle saaksha tv

ಕನ್ನಡಿಗ vs ಬೆಂಗಳೂರು

ಯಾರು ಬಲಿಷ್ಠ..?

ಚೇಂಜಸ್ ಏನು..?   

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.  15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ 31ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸವಾಲ್ ಹಾಕಿದೆ.

ಈ ಬಾರಿಯ ಐಪಿಎಲ್ ನಲ್ಲಿ ಎರಡೂ ತಂಡಗಳು ಆರು ಪಂದ್ಯಗಳನ್ನಾಡಿವೆ. ಇದರಲ್ಲಿ ತಲಾ ನಾಲ್ಕು ಪಂದ್ಯಗಳನ್ನು ಎರಡೂ ತಂಡಗಳು ಗೆದ್ದಿವೆ. ತಲಾ 2 ಪಂದ್ಯಗಳಲ್ಲಿ ಉಭಯ ತಂಡಗಳು ಸೋಲು ಕಂಡಿವೆ. ಆದ್ರೂ ರನ್ ರೇಟ್ ಆಧಾರದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರ್ ಸಿಬಿಗಿಂತ ಮೇಲಿದೆ.

rcb-vs-lsg-preview-Lucknow Super Giants and Royal Challengers Bangalore battle saaksha tv

ತಂಡಗಳ ಬಲಾಬಲದ ಬಗ್ಗೆ ಮಾತನಾಡೋದ್ರಾದೆ

ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡ ಬಲಿಷ್ಠವಾಗಿದೆ. ಬ್ಯಾಟಿಂಗ್, ಬೌಲಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಸಾಲಿಡ್ ಆಗಿದೆ.

ಕೆ.ಎಲ್ ರಾಹುಲ್, ಕ್ವಿಂಟನ್ ಡೀ ಕಾಕ್, ಮಾರ್ಕಸ್ ಸ್ಟೋಯ್ನಸ್, ಆಯುಷ್ ಬಡೋನಿ ಲಕ್ನೋ ತಂಡದ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ. ಮುಖ್ಯವಾಗಿ ಸೆಂಚೂರಿ ಸಿಡಿಸಿ ಸಖತ್ ಫಾರ್ಮ್ ನಲ್ಲಿರುವ ಕೆ.ಎಲ್.ರಾಹುಲ್ ಗೆ ಬೆಂಗಳೂರು ತಂಡದ ಮೇಲೆ ಉತ್ತಮ ದಾಖಲೆ ಇದೆ. ಜೊತೆಗೆ ಕ್ವಿಂಟನ್ ಡಿ ಕಾಕ್ ಗೂ ಕೂಡ ಆರ್ ಸಿಬಿ ಮೇಲೆ ಉತ್ತಮ ರೆಕಾರ್ಡ್ ಇದೆ. ಹೀಗಾಗಿ ಈ ಇಬ್ಬರು ಆಟಗಾರರು ಆರ್ ಸಿಬಿಗೆ ಮುಳುವಾಗೋದು ಪಕ್ಕಾ. ಇನ್ನು ಮಿಡಲ್ ಆರ್ಡರ್ ನಲ್ಲಿ ಮನೀಷ್ ಪಾಂಡೆ, ದೀಪಕ್ ಹೂಡಾ, ಸ್ಟೋಯ್ನಿಸ್, ಆಯುಷ್ ಬಡೋನಿ ಲಕ್ನೋ ತಂಡಕ್ಕೆ ಆಧಾರ ಸ್ತಂಬಗಳಾಗಿದ್ದಾರೆ. ಜೇಸನ್ ಹೋಲ್ಡರ್, ಕೃನಾಲ್ ಪಾಂಡ್ಯ, ಸ್ಟೋಯ್ನಿಸ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ನಲ್ಲೂ ಮಿಂಚು ಹರಿಸಬಲ್ಲರು.

ಬೌಲಿಂಗ್ ನಲ್ಲಿ ಆವೇಶ್ ಖಾನ್ ಮತ್ತು ರವಿ ಬಿಷ್ನೋಯಿ ಲಕ್ನೋ ತಂಡದ ಕೀ ಪ್ಲೇಯರ್ ಗಳಲಾಗಿದ್ದಾರೆ. ಇವರಿಗೆ ದುಶ್ಮಂತಾ ಚಮೀತಾ ಸಾಥ್ ನೀಡಿದರೇ ಸಾಕು. ಆದ್ರೆ ಬ್ಯಾಟಿಂಗ್ ವಿಭಾಗಕ್ಕೆ ಹೋಲಿಕೆ ಮಾಡಿದ್ರೆ, ಲಕ್ನೋ ಬೌಲಿಂಗ್ ವಿಭಾಗ ಕೊಂಚ ವೀಕ್ ಆಗಿದೆ.

rcb-vs-lsg-preview-Lucknow Super Giants and Royal Challengers Bangalore battle saaksha tv

ಇತ್ತ ಫಾಫ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಸಾಲಿಡ್ ಆಗಿದೆ. ಬ್ಯಾಟಿಂಗ್ ನಲ್ಲಿ ಕೊಂಚ ಸಮಸ್ಯೆಯಿದ್ದರೂ ಸಾಂಘೀಕ ಪ್ರದರ್ಶನ ಬೆಂಗಳೂರು ತಂಡದ ಆಸ್ತಿಯಾಗಿದೆ. ಬ್ಯಾಟಿಂಗ್ ನಲ್ಲಿ ಮ್ಯಾಕ್ಸ್ ವೆಲ್, ದಿನೇಶ್ ಕಾರ್ತಿಕ್, ಶಹಬ್ಬಾಸ್ ತಂಡದ ಬೆನ್ನೆಲುಬಾಗಿದ್ದಾರೆ. ಬೌಲಿಂಗ್ ನಲ್ಲಿ ಹೆಜಲ್ ವುಡ್, ಹರ್ಷಲ್ ಪಟೇಲ್, ಸಿರಾಜ್, ಹಸರಂಗ ಎದುರಾಗಳ ಬೇಟೆಯಾಡುತ್ತಾರೆ. ಆರ್ ಸಿಬಿಯ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ ಅನ್ನೋದ್ರರಲ್ಲಿ ಯಾವುದೇ ಅನುಮಾನ ಇಲ್ಲ. ಆದ್ರೆ ತಂಡಕ್ಕೆ ಹಿನ್ನಡೆಯಾಗುತ್ತಿರುವು ಟಾಪ್ ಆರ್ಡರ್ ನಲ್ಲಿ. ಮುಖ್ಯವಾಗಿ ತಂಡಕ್ಕೆ ಉತ್ತಮವಾದ ಆರಂಭ ಸಿಗುತ್ತಿಲ್ಲ.

rcb-vs-lsg-preview-Lucknow Super Giants and Royal Challengers Bangalore battle saaksha tv

ಫಾಫ್ ಮೊದಲ ಪಂದ್ಯದಲ್ಲಿ ಮಿಂಚಿದ್ದು ಬಿಟ್ಟರೇ ಉಳಿದ ಪಂದ್ಯಗಳಲ್ಲಿ ಕ್ರೀಸ್ ನಲ್ಲಿ ನಿಲ್ಲುತ್ತಿಲ್ಲ. ಮತ್ತೊಬ್ಬ ಆರಂಭಿಕ ಅನೂಜ್ ರಾವತ್ ಮುಂಬೈ ವಿರುದ್ಧ ಉತ್ತಮ ಆಟವಾಡಿದ್ದು ಬಿಟ್ಟರೇ ಉಳಿದ ಪಂದ್ಯಗಳಲ್ಲಿ ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ. ಹೀಗಾಗಿ ಲಕ್ನೋ ವಿರುದ್ದ ಪಂದ್ಯದಲ್ಲಿ ಬದಲಾವಣೆ ನಿರೀಕ್ಷಿಸಬಹುದಾಗಿದೆ. ಇಲ್ಲದೇ ವಿರಾಟ್ ಕೊಹ್ಲಿ ಅವರ ಅಸ್ಥಿರ ಪ್ರದರ್ಶನ ಕೂಡ ತಂಡಕ್ಕೆ ಮೈನಸ್ ಪಾಯಿಂಟ್ ಆಗುತ್ತಿದೆ. ವಿರಾಟ್ ಈ ಹಿಂದಿನ ಟಚ್ ಕಳೆದುಕೊಂಡಿರುವುದು ತಂಡದ ಮೇಲೆ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಗೆ ಪರಿಹಾರ ಸಿಕ್ಕರೇ ಆರ್ ಸಿಬಿ ಮತ್ತಷ್ಟು ಬಲಿಷ್ಟವಾಗಿರಲಿದೆ.

ಎರಡೂ ತಂಡಗಳು ಆನ್ ಪೇಪರ್ ನೋಡಿದ್ರೆ ಬಲಿಷ್ಠವಾಗಿವೆ. ಆದ್ರೆ ಲಕ್ನೋ ಎದುರು ಬೆಂಗಳೂರು ತಂಡ ಗೆಲ್ಲುವ ಅವಕಾಶಗಳು ಹೆಚ್ಚಾಗಿವೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd