RCB vs PBKS Match | ಹೆಡ್ ಟು ಹೆಡ್ ರೆಕಾರ್ಡ್ ನಲ್ಲಿ ಯಾರು ಗ್ರೇಟ್..?
1 min read
rcb-vs-pbks-match-head-to-head-records saaksha tv
RCB vs PBKS Match | ಹೆಡ್ ಟು ಹೆಡ್ ರೆಕಾರ್ಡ್ ನಲ್ಲಿ ಯಾರು ಗ್ರೇಟ್..?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳಿಗೆ ಇಂದಿನ ಪಂದ್ಯ ಭಾರಿ ಮಹತ್ವವನ್ನು ಪಡೆದುಕೊಂಡಿದೆ.
15 ನೇ ಇಂಡಿಯನ್ ಪ್ರಿಮಿಯರ್ ಲೀಗ್ 15ನೇ ಸೀಸಸ್ ನಲ್ಲಿ ಮುಂದಿನ ಹಂತ ಪ್ರವೇಶಿಸಬೇಕಾದರೇ ಇವತ್ತು ನಡೆಯಲಿರುವ ಪಂದ್ಯದಲ್ಲಿ ಗೆಲುವು ಸಾಧಿಸೋದು ಎರಡೂ ತಂಡಗಳಿಗೂ ಅನಿವಾರ್ಯವಾಗಿದೆ.
ಹೌದು..! 15ನೇ ಸೀಸನ್ ನ ಇಂಡಿಯನ್ ಪ್ರಿಮಿಯರ್ ಲೀಗ್ ನ 60ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.
ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದೆ. ಈ ಎರಡೂ ತಂಡಗಳು ಈ ಸೀಸನ್ ನಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ.
ಮೊದಲ ಬಾರಿ ಎದುರುಬದುರಾದಾಗ ಪಂಜಾಬ್ ಕಿಂಗ್ಸ್ ತಂಡ ಜಯ ಸಾಧಿಸಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಸೀಸನ್ ನಲ್ಲಿ 12 ಪಂದ್ಯಗಳನ್ನಾಡಿದೆ. ಈ ಪೈಕಿ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಐದು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ 14 ಅಂಕಗಳೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕನೇ ಸ್ಥಾನದಲ್ಲಿದೆ.

ಇತ್ತ ಮಯಾಂಕ್ ಅಗರ್ ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡ 15ನೇ ಸೀಸನ್ ನಲ್ಲಿ 11 ಪಂದ್ಯಗಳನ್ನಾಡಿದೆ, ಇದರಲ್ಲಿ ಐದು ಪಂದ್ಯಗಳನ್ನು ಪಂಜಾಬ್ ತಂಡ ಗೆದ್ದುಕೊಂಡಿದ್ದರೇ ಆರು ಪಂದ್ಯಗಳಲ್ಲಿ ಸೋಲು ಕಂಡಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ಪಂಜಾಬ್ ತಂಡ ಎಂಟನೇ ಸ್ಥಾನದಲ್ಲಿದೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಗೆದ್ದು ಎರಡು ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಮೇಲೇರೋದು ಎರಡು ತಂಡಗಳ ಪ್ಲಾನ್ ಆಗಿದೆ.
ಅಂದಹಾಗೆ ಎರಡು ತಂಡಗಳ ಹೆಡ್ ಟು ಹೆಡ್ ರೆಕಾರ್ಡ್ ನೋಡೋದಾದ್ರೆ..
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಆರ್ ಸಿಬಿ ಮತ್ತು ಪಂಜಾಬ್ ತಂಡಗಳು ಒಟ್ಟು 29 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ 16 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡ ಗೆಲುವು ಸಾಧಿಸಿದೆ. 13 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದೆ.
ಕಳೆದ ಐದು ಪಂದ್ಯಗಳ ವಿಚಾರಕ್ಕೆ ಬಂದರೇ ಪಂಜಾಬ್ ಕಿಂಗ್ಸ್ ತಂಡ ಮೇಲು ಗೈ ಸಾಧಿಸಿದೆ. ಐದು ಪಂದ್ಯಗಳ ಪೈಕಿ ಪಂಜಾಬ್ ತಂಡ ನಾಲ್ಕು ಮ್ಯಾಚ್ ಗಳಲ್ಲಿ ಗೆದ್ದಿದೆ. ಬೆಂಗಳೂರು ತಂಡ ಒಂದು ಪಂದ್ಯದಲ್ಲಿ ಗೆದ್ದಿದೆ.
ಇನ್ನು ಮೊದಲು ಬ್ಯಾಟಿಂಗ್ ಮಾಡಿದಾಗ ಆರ್ ಸಿಬಿ ಏಳು ಬಾರಿ ಗೆದ್ದಿದ್ದರೇ ಪಂಜಾಬ್ ಕಿಂಗ್ಸ್ ತಂಡ ಆರು ಬಾರಿ ಗೆಲುವು ಸಾಧಿಸಿದೆ. ಚೇಸಿಂಗ್ ಮಾಡಿದಾಗ ಪಂಜಾಬ್ ತಂಡ ಬರೋಬ್ಬರಿ 10 ಬಾರಿ ಗೆದ್ದಿದೆ. ಬೆಂಗಳೂರು ಆರು ಬಾರಿ ಗೆಲುವು ಸಾಧಿಸಿದೆ. rcb-vs-pbks-match-head-to-head-records