RCB vs PBSK Match | ಚಾಲೆಂಜರ್ಸ್ ಗೆ ಕಿಂಗ್ಸ್ ಸವಾಲ್.. ಪ್ಲೇಯಿಂಗ್ 11

1 min read
rcb-vs-pbsk-match- punjab kings Probable XI saaksha tv

rcb-vs-pbsk-match- punjab kings Probable XI saaksha tv

RCB vs PBSK Match | ಚಾಲೆಂಜರ್ಸ್ ಗೆ ಕಿಂಗ್ಸ್ ಸವಾಲ್.. ಪ್ಲೇಯಿಂಗ್ 11

ಮಯಾಂಕ್ ಅಗರ್ ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡ 15ನೇ ಆವೃತ್ತಿಯಲ್ಲಿ ಸೋಲು ಗೆಲುವುಗಳ ಹಾದಿನಲ್ಲಿ ನಡೆಯುತ್ತಿದೆ. ಇನ್ನುಳಿದ ಮೂರು ಪಂದ್ಯಗಳನ್ನ ಗೆದ್ದರೇ ಕ್ಯಾಲ್ಕುನೇಟರ್ ಲೆಕ್ಕಾಚಾರದಲ್ಲಿ ಪಂಜಾಬ್ ತಂಡಕ್ಕೆ ಪ್ಲೇ ಆಫ್ಸ್ ಪ್ರವೇಶಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಇಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಪಂಜಾಬ್ ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.  ಈ ಹೈವೋಲ್ಟೇಜ್ ಪಂದ್ಯ ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ನಡೆಯಲಿದೆ. ಇದಕ್ಕಾಗಿ ಉಭಯ ತಂಡಗಳು ಭಾರಿ ಕಸರತ್ತು ನಡೆಸುತ್ತಿವೆ.

 ಈ ಸೀಸನ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಈವರೆಗೂ 11 ಪಂದ್ಯಗಳನ್ನಾಡಿದೆ.  ಈ ಪೈಕಿ ಐದು ಪಂದ್ಯಗಳಲ್ಲಿ ಗೆದ್ದು 10 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಆದ್ರೆ ಪಂಜಾಬ್ ಕಿಂಗ್ಸ್ ತಂಡ  ಸುಖಾಸುಮ್ಮನೆ ಪಂದ್ಯ ಗೆದ್ದರೇ ಸಾಕಾಗುವುದಿಲ್ಲ. ಪಂಜಾಬ್ ತಂಡ ಬೆಂಗಳೂರು ತಂಡದ ವಿರುದ್ಧ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಬೇಕು. ಯಾಕಂದರೇ ಪಂಜಾಬ್ ತಂಡದ ರನ್ ರೇಟ್ ತೀರಾ ಕಳಫೆಯಾಗಿದ್ದು, ದೊಡ್ಡ ಅಂತರದಿಂದ ಗೆದ್ದರೇ ಮಾತ್ರ ಪಂಜಾಬ್ ತಂಡಕ್ಕೆ ಪ್ಲೇ ಆಫ್ಸ್ ಚಾನ್ಸ್ ಇದೆ.

ಇದಲ್ಲದೇ ಪಂಜಾಬ್ ಕಿಂಗ್ಸ್ ತಂಡ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಕಂಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

rcb-vs-pbsk-match- punjab kings Probable XI saaksha tv
rcb-vs-pbsk-match- punjab kings Probable XI saaksha tv

ತಂಡದ ಬಲಾಬಲದ ವಿಚಾರಕ್ಕೆ ಬಂದರೇ ಪಂಜಾಬ್ ತಂಡಕ್ಕೆ ಸ್ಥಿರ ಪ್ರದರ್ಶನದ ಕೊರತೆ ಎದ್ದು ಕಾಣುತ್ತಿದೆ. ಬ್ಯಾಟಿಂಗ್ ನಲ್ಲಿ ಶಿಖರ್ ಧವನ್ ಮಾತ್ರ ಸ್ಥಿರತೆ ಕಾಯ್ದುಕೊಂಡಿದ್ದಾರೆ. ಇನ್ನು ಬ್ಯಾಟಿಂಗ್ ಲೈನ್ ಅಪ್ ನಲ್ಲಿ ಪಂಜಾಬ್ ಹೀಗಾಗಲೇ ಬದಲಾವಣೆ ಮಾಡಿದೆ. ಆರಂಭಿಕರಾಗಿ ಜಾನಿ ಬೈರ್ ಸ್ಟೋ ಮಿಂಚಲೇಬೇಕಿದೆ.   ಬನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್ ಸ್ಟೋನ್, ಜಿತೇಶ್ ಶರ್ಮಾ ಉತ್ತಮ ಫಾರ್ಮ್ ನಲ್ಲಿದ್ದಾರೆ. ಇದು ತಂಡದ ಪ್ಲಾಸ್ ಪಾಯಿಂಟ್ ಆಗಿದೆ. ಆದ್ರೆ ನಾಯಕ ಮಯಾಂಕ್ ಅಗರ್ ವಾಲ್ ಬ್ಯಾಡ್ ಫಾರ್ಮ್ ತಂಡಕ್ಕೆ ದೊಡ್ಡ ಮೈನಸ್ ಪಾಯಿಂಟ್ ಆಗಿದೆ. ಇನ್ನು ರಿಷಿ ಧವನ್ ಕೂಡ ಬ್ಯಾಟಿಂಗ್ ಮಾಡಬಲ್ಲರು. ಬೌಲಿಂಗ್ ನಲ್ಲಿ ಕಗಿಸೋ ರಬಾಡ, ಅರ್ಷದೀಪ್ ಸಿಂಗ್ ತಂಡಕ್ಕೆ ನೆರವಾಗುತ್ತಿದ್ದಾರೆ. ಆದ್ರೆ ರಾಹುಲ್ ಚಹಾರ್, ಸಂದೀಪ್ ಶರ್ಮಾ ವಿಕೆಟ್ ಬೇಟೆಯಾಡಬೇಕಿದೆ.

ಪ್ಲೇಯಿಂಗ್ ಇಲೆವೆನ್

ಜೋನಿ ಬೈರ್ ಸ್ಟೋ

ಶಿಖರ್ ಧವನ್

ಭನುಕಾ ರಾಜಪಕ್ಸೆ

ಲಿಯಾಮ್ ಲೀವಿಂಗ್ ಸ್ಟೋನ್

ಮಯಾಂಕ್ ಅಗರ್ ವಾಲ್

ಜಿತೇಶ್ ಶರ್ಮಾ

ರಿಷಿ ಧವನ್

ಕಗಿಸೋ ರಬಾಡ

ರಾಹುಲ್ ಚಹಾರ್

ಅರ್ಷದೀಪ್ ಸಿಂಗ್

ಸಂದೀಪ್ ಶರ್ಮಾ

rcb-vs-pbsk-match- punjab kings Probable XI

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd