IPL 2022 : ಪರಾಗ್.. ಹರ್ಷಲ್ ನಡುವೆ ನಡೆದಿದ್ದು ಏನು..?
ಇಂಡಿಯನ್ ಪ್ರಿಮಿಯರ್ ಲೀಗ್ ನ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ.
ರಾಜಸ್ಥಾನ್ ಗೆಲುವಿನಲ್ಲಿ ಆಲ್ ರೌಂಡರ್ ರಿಯಾನ್ ಪರಾಗ್ ಪ್ರಮುಖ ಪಾತ್ರವಹಿಸಿದ್ದರು.
ಒಂದು ಕಡೆ ರಾಜಸ್ಥಾನ್ ತಂಡದ ಬ್ಯಾಟರ್ ಗಳು ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೇ, ದಿಟ್ಟ ಪ್ರದರ್ಶನ ನೀಡಿದ ಪರಾಗ್, 31 ಎಸೆತಗಳಲ್ಲಿ 56 ರನ್ ಗಳಿಸಿ ಅಜೇಯರಾಗುಳಿದರು.
ಪರಿಣಾಮ ರಾಜಸ್ಥಾನ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು.
ಅದರಲ್ಲೂ ಮುಖ್ಯವಾಗಿ ರಾಜಸ್ಥಾನ್ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ರಿಯಾನ್ ಪರಾಗ್, ಆರ್ ಸಿಬಿ ಬೌಲರ್ ಹರ್ಷಲ್ ಪಟೇಲ್ ಬೌಲಿಂಗ್ ನಲ್ಲಿ 18 ರನ್ ಚಚ್ಚಿದರು.

20 ಓವರ್ ನ ಕೊನೆಯ ಎಸೆತದಲ್ಲಿ ರಿಯಾನ್ ಸಿಕ್ಸರ್ ಬಾರಿಸಿದರು. ಈ ವೇಳೆ ರಿಯಾನ್ ಪರಾಗ್ ಮತ್ತು ಹರ್ಷಲ್ ಪಟೇಲ್ ನಡುವೆ ಮಾತಿನ ಚಕಮಕಿ ನಡೆಯಿತು.
ರಾಜಸ್ಥಾನ್ ಇನ್ನಿಂಗ್ಸ್ ಮುಗಿದ ಬಳಿಕ ರಿಯಾನ್ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಆಗ ರಿಯಾನ್ ಪರಾಗ್, ಹರ್ಷಲ್ ಪಟೇಲ್ ಗೆ ಏನೋ ಹೇಳಿದರು.
ಇದರಿಂದ ಕೋಪಗೊಂಡ ಹರ್ಷಲ್ ಪಟೇಲ್, ರಿಯಾನ್ ನತ್ತ ನುಗ್ಗಿದರು.
ಕೂಡಲೇ ರಾಜಸ್ಥಾನ್ ರಾಯಲ್ಸ್ ತಂಡದ ಸಹಾಯಕ ಸಿಬ್ಬಂದಿಯೊಬ್ಬರು ಮಧ್ಯಪ್ರವೇಶಿಸಿ ಗಲಾಟೆ ಶಾಂತಗೊಳಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
RCB vs RR tempers-flare-between-riyan-parag-and-harshal-patel