RCB | ಶಹಬ್ಬಾಸ್ ಪ್ರದರ್ಶನದ ಬಗ್ಗೆ ಮೈಕ್ ಹೇಳಿದ್ದೇನು..?
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ಇನ್ನೇನು ಪಂದ್ಯದಲ್ಲಿ ಆರ್ ಸಿಬಿ ತಂಡ ಸೋಲೋದು ಪಕ್ಕಾ ಎನ್ನುವಂತಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ರೆ ಪಂದ್ಯದಲ್ಲಿ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡಿದ ಬೆಂಗಳೂರು ತಂಡ ಡೆಲ್ಲಿ ತಂಡದ ಕೈಯಲ್ಲಿದ್ದ ಗೆಲುವವನ್ನ ಕಿತ್ತುಕೊಂಡರು.
ಪಂದ್ಯದಲ್ಲಿ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡಕ್ಕೆ ಟಾಪ್ ಆರ್ಡರ್ ಬ್ಯಾಟರ್ ಗಳು ಕೈ ಕೊಟ್ಟರು. 70 – 80 ರನ್ ಗಳಿಗೆ ತಂಡ ಐದು ವಿಕೆಟ್ ಕಳೆದುಕೊಂಡಿತ್ತು. ಇಂತಹ ಸಂಕಷ್ಟದಲ್ಲಿ ದಿನೇಶ್ ಕಾರ್ತಿಕ್, ಶಹಬ್ಬಾಸ್ ಅಹ್ಮದ್ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಅಲ್ಲದೇ ಡೆಲ್ಲಿ ತಂಡಕ್ಕೆ ಗೆಲ್ಲಲು 190 ರನ್ ಗಳ ಟಾರ್ಗೆಟ್ ನೀಡಿದರು.
ಈ ಗುರಿ ಬೆನ್ನಟ್ಟಿದ ಡೆಲ್ಲಿಗೆ ಉತ್ತಮ ಆರಂಭ ಸಿಕ್ತು. ವಾರ್ನರ್ ಅರ್ಧ ಶತಕ ಸಿಡಿಸಿದ್ರು. ಆದ್ರೆ ಪಂದ್ಯದ 12ನೇ ಓವರ್ ನಲ್ಲಿ ಆರ್ ಸಿಬಿ ಬೌಲರ್ ಗಳು ಕಂ ಬ್ಯಾಕ್ ಮಾಡಿದರು. ಅಲ್ಲದೇ ಡೆಲ್ಲಿ ಬ್ಯಾಟರ್ ಗಳನ್ನು ಕಟ್ಟಿ ಹಾಕಿದರು. ಬ್ಯಾಕ್ ಟು ಬ್ಯಾಕ್ ವಿಕೆಟ್ ತೆಗೆದು ಪಂದ್ಯವನ್ನು ಗೆದ್ದುಕೊಂಡರು.
ಈ ಗೆಲುವು ಆರ್ ಸಿಬಿ ತಂಡದಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಪಂದ್ಯದಲ್ಲಿ ಶಹಬ್ಬಾಸ್ ಉತ್ತಮ ಪ್ರದರ್ಶನ ನೀಡಿದರು. ಹೀಗಾಗಿ ಪಂದ್ಯದ ಬಳಿಕ ಆರ್ ಸಿಬಿಯ ಡೈರೆಕ್ಟರ್ ಮೈಕ್ ಹಸನ್ ಮಾತನಾಡಿ, ಶಹಬ್ಬಾಸ್ ಅವರನ್ನ ಹೊಗಳಿಸಿದ್ದಾರೆ.
ಸಂಕಷ್ಟದ ಸಮಯದಲ್ಲಿ ಶಹಬ್ಬಾಸ್ ಉತ್ತಮವಾಗಿ ಆಡುತ್ತಿದ್ದಾರೆ. ಒತ್ತಡ ಸಂದರ್ಭದಲ್ಲಿ ಒತ್ತಡಕ್ಕೆ ಒಳಗಾಗದೇ ಬ್ಯಾಟ್ ಬೀಸುತ್ತಿದ್ದಾರೆ. ಮೈದಾನದಲ್ಲಿ ತಾಳ್ಮೆ ಯಿಂದ ಇದ್ದು ಸಂದರ್ಭಕ್ಕೆ ತಕ್ಕಂತೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುತ್ತಿರುವುದ ಖುಷಿ ತಂದಿದೆ ಎಂದಿದ್ದಾರೆ. RCB | What did Mike say about the Shahabas show?









