ಆರ್ ಸಿಬಿ ಪ್ರಾಕ್ಟೀಸ್ ಮ್ಯಾಚ್ : ಎಬಿಡಿ ಶತಕ.. ಭರತ್ 96 ರನ್

1 min read
AB de Villiers rcb ipl 2021 saakshatv

ಆರ್ ಸಿಬಿ ಪ್ರಾಕ್ಟೀಸ್ ಮ್ಯಾಚ್ : ಎಬಿಡಿ ಶತಕ.. ಭರತ್ 96 ರನ್ RCB saaksha tv

ದುಬೈ : ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2021 ರ ದ್ವಿತೀಯಾರ್ಧದ ಪಂದ್ಯಾವಳಿಗಳಿಗೆ ಸರ್ವಸನ್ನದ್ಧವಾಗಿದೆ. ಸದ್ಯ ಯುಎಇನಲ್ಲಿ ತಾಲೀಮು ಆರಂಭಿಸಿರುವ ಆರ್ ಸಿನಿ ನಿನ್ನೆ ಪ್ರಾಕ್ಟೀಸ್ ಮ್ಯಾಚ್ ಆಡಿದೆ. ಈ ಪ್ರಾಕ್ಟೀಸ್ ಮ್ಯಾಚ್ ಗಾಗಿ ತಂಡವನ್ನು ಆರ್‍ಸಿಬಿ ಎ ಮತ್ತು ಆರ್‍ಸಿಬಿ ಬಿ ಎರಡು ತಂಡಗಳಾಗಿ ವಿಂಗಡನೆ ಮಾಡಲಾಗಿತ್ತು. ಆರ್ ಸಿಬಿ ಎ ತಂಡಕ್ಕೆ ಹರ್ಷಲ್ ಪಟೇಲ್ ನೇತೃತ್ವ ವಹಿಸಿದ್ದರೇ ಆರ್ ಸಿಬಿ ಬಿ ತಂಡಕ್ಕೆ ದೇವದತ್ತ್ ಪಡಿಕಲ್ ನಾಯಕತ್ವದ ಜವಾಬ್ದಾರಿ ವಹಿಸಿದ್ದರು.

ಆರ್ ಸಿಬಿ ಎ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಳ್ತು. ಈ ವೇಳೆ ಕ್ರೀಸ್ ಗೆ ಬಂದ ಎಬಿಡಿ ಮೊಹಮ್ಮದ್ ಅಜರುದ್ದೀನ್ ಜೊತೆ ಗೂಡಿ ಬೊಂಬಾಟ್ ಆಟವಾಡಿದರು. ಎಬಿಡಿ ಎಂದಿನಂತೆ ಬ್ಯಾಟ್ ಬೀಸಿ ಶತಕ ಬಾರಿಸಿದರು. ಅಜರುದ್ದೀನ್ ಅರ್ಧಶತಕ ಸಿಡಿಸಿದರು. ಅಂತಿಮವಾಗಿ ಆರ್ ಸಿಬಿ ಎ ತಂಡ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು.

RCB saaksha tv

ಈ ಗುರಿಯನ್ನು ಬೆನ್ನಟ್ಟಿದ್ದ ಆರ್ ಸಿಬಿ ಬಿ ತಂಡಕ್ಕೆ ದೇವದತ್ ಪಡಿಕ್ಕಲ್ ಮತ್ತು ಕೆ.ಎಸ್.ಭರತ್ ಭರ್ಜರಿ ಆರಂಭ ನೀಡಿದರು. ಈ ಮಧ್ಯೆ ಪಡಿಕ್ಕಲ್ 21 ಎಸೆತಗಳಲ್ಲಿ 36 ರನ್ ಗಳಿಸಿ ಪಡಿಕ್ಕಲ್ ಔಟಾದರು. ಆದ್ರೆ ಉತ್ತಮ ಆಟ ಮುಂದುವರೆಸಿದ ಭರತ್ ಅತ್ಯದ್ಭುತ 96 ರನ್ ಗಳಿಸಿದರು. ಪಡಿಕ್ಕಲ್ ತಂಡಕ್ಕೆ ಕೊನೆಯ ಎರಡು ಎಸೆತಗಳಲ್ಲಿ ಮೂರು ರನ್ ಬೇಕಿತ್ತು. ಈ ವೇಳೆ ಭರತ್ ಬೌಂಡರಿ ಬಾರಿಸುವ ಮೂಲಕ ಗೆಲುವಿನ ಕೇಕೆ ಹಾಕಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd