ಸತತ ಗೆಲುವುಗಳಿಂದ ಬೀಗುತ್ತಿರುವ ರಾಯಲ್ ಚಾಲೆಂಜರಸ್ ಬೆಂಗಳೂರು (ಆರ್ಸಿಬಿ) ಇಂದು ಕೋಲ್ಕತ್ತಾ ವಿರುದ್ಧ ತವರಿನಲ್ಲಿ ಸೆಣಸಲಿದೆ. ಆರ್ಸಿಬಿಗೆ ಇದು ಸೇಡಿನ ಕದನವಾಗಿದೆ. ಮೊದಲ ಮುಖಾಮುಖಿಯಲ್ಲಿ ಕೋಲ್ಕತ್ತಾ ವಿರುದ್ಧ ಆರ್ಸಿಬಿ ಸೋತಿತ್ತು.
ಆರ್ಸಿಬಿ ತಂಡ ಅಗ್ರ ಬ್ಯಾಟರ್ಗಳಾದ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗು ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ನೆಚ್ಚಿಕೊಂಡಿದೆ.
ಟೂರ್ನಿಯ ಅದ್ಭುತ ಆರಂಭಿಕ ಜೋಡಿ ಎನಿಸಿರುವ ಫಾಫ್ ಡುಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ 500ಕ್ಕೂ ಹೆಚ್ಚು ಜತೆಯಾಟ ನೀಡಿದ್ದಾರೆ.
ಇನ್ನು ಚಿನ್ನಸ್ವಾಮಿ ಅಂಗಳಲದಲ್ಲಿ ಗ್ಲೆನ್ ಮ್ಯಾಕ್ಸ್ ವಲ್ 4 ಇನ್ನಿಂಗ್ಸ್ ಗಳಿಂದ 3 ಅರ್ಧ ಶತಕ ಸಿಡಿಸಿದ್ದಾರೆ.
ಮಧ್ಯಮ ಕ್ರಮಾಂಕ ತಂಡವನ್ನು ಚಿಂತಗೀಡು ಮಾಡಿದೆ. ಮಹಿಪಾಲ್ ಲೊಮ್ರೊರ್ , ಸುಯೇಷ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್ ಹಾಗೂ ಶಾಬಾಜ್ ಅಹ್ಮದ್ ಒಟ್ಟು 161 ರನ್ ಕಲೆ ಹಾಕಿದ್ದಾರೆ. ಬೌಲಿಂಗ್ನಲ್ಲಿ ಹರ್ಷಲ್ ಪಟೇಲ್ ಲಯ ಕಂಡುಕೊಂಡಂತೆ ಕಾಣುತ್ತಿದ್ದಾರೆ. ಜೋಶ್ ಹೇಜಲ್ವುಡ್ ಫಿಟ್ ಆಗದ ಕಾರಣ ಡೇವಿಡ್ ವಿಲ್ಲಿ ಮುಂದುವರೆಯಬಹುದು.
ಇನ್ನು ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಕೋಲ್ಕತ್ತಾ ಸಮಸ್ಯೆ ಸುಳಿಯಲ್ಲಿ ಸಿಲುಕಿದೆ. ಆರಂಭಿಕ ಬ್ಯಾಟರ್ ಗಳನ್ನು ಬದಲಾವಣೆ ಮಾಡಿದರೂ ಯಶಸ್ಸು ಕಂಡಿಲ್ಲ. ಪವರ್ ಪ್ಲೆನಲ್ಲಿ ಅತಿ ಹೆಚ್ಚು 17 ವಿಕೆಟ್ ಕಳೆದುಕೊಂಡಿದೆ.
8 ವಿದೇಶಿ ಆಟಗಾರರನ್ನು ಬಳಸಿದರೂ ಸೂಕ್ತ ಸಂಯೋಜನೆ ಕಂಡುಕೊಂಡಿಲ್ಲ.








