REAL ME ಹೊಸ ಸ್ಮಾರ್ಟ್ ಫೋನ್ ರಿಲೀಸ್ ಆಗೋದು ಯಾವಾಗ ಗೊತ್ತಾ..?
ರಿಯಲ್ ಮಿ ಹೊಸ ಸ್ಮಾರ್ಟ್ ಫೋನ್ ಆಗಿರುವ REAL ME GT ನಿಯೋ ಮಾರುಕಟ್ಟೆಗೆ ಶೀಘ್ರವೇ ಎಂಟ್ರಿಯಾಗಲಿದೆ. ಮಾರ್ಚ್ 31 ಕ್ಕೆ ಹೊಸ ಸ್ಮಾರ್ಟ್ ಫೋನ್ ರಿಲೀಸ್ ಆಗಲಿದೆ. REAL ME GT ನಿಯೋ ಆಕರ್ಷಕ ಫೀಚರ್ ಗಳೊಂದಿಗೆ ಆಕರ್ಷಕ ಲುಕ್ ನಲ್ಲಿ ಕೈಗೆಟುಕುವ ಬೆಲೆಯಲ್ಲಿ ಈ ಮೊಬೈಲ್ ಗ್ರಾಹಕರಿಗೆ ಲಭ್ಯವಾಗಲಿದೆ.
ರಿಯಲ್ಮಿ ಈ ತಿಂಗಳ ಆರಂಭದಲ್ಲಿ ಚೀನಾದಲ್ಲಿ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಈಗ ಕಂಪನಿಯು ಈ ಫೋನ್ ನ ಲೈಟ್ ರೂಪಾಂತರವನ್ನು ಬಿಡುಗಡೆ ಮಾಡಲಿದ್ದು, ಇದನ್ನು ರಿಯಲ್ ಮಿ ಜಿಟಿ ನಿಯೋ ಎಂದು ಹೆಸರಿಸಿದೆ.
ಈ ಫೋನ್ 120Hz ರಿಫ್ರೆಶ್ ದರದೊಂದಿಗೆ ಡಿಸ್ ಪ್ಲೇ ಹೊಂದಿರಲಿದೆ. ಕಂಪನಿಯು ಈ ಫೋನ್ ನಲ್ಲಿ ಗೊರಿಲ್ಲಾ ಗ್ಲಾಸ್ 5ರ ರಕ್ಷಣೆಯನ್ನು ನೀಡಲಿದೆ ಎನ್ನಲಾಗಿದೆ.
ಫೀಚರ್ಸ್
ಕ್ಯಾಮೆರಾದ ಮೊದಲ ಬ್ಯಾಕ್ ಕ್ಯಾಮೆರಾ 64 ಮೆಗಾಪಿಕ್ಸೆಲ್
2ನೇ ಬ್ಯಾಕ್ ಕ್ಯಾಮೆರಾ 8 ಮೆಗಾಪಿಕ್ಸೆಲ್
3ನೇ ಬ್ಯಾಕ್ ಕ್ಯಾಮೆರಾ 2 ಮೆಗಾಪಿಕ್ಸೆಲ್
16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ
4,500 mAh ಬ್ಯಾಟರಿ, 65W ಚಾರ್ಜಿಂಗ್ ಕ್ಯಪಾಸಿಟಿ