ವಿಷ್ಣು ಸಹಸ್ರನಾಮ ಪಠಿಸಿದರೆ ಸಾವಿರ ಪ್ರಯೋಜನ..! ಆದರೆ ಪಠಿಸೋದು ಹೇಗೆ..
ಗುರುವಾರದಂದು ಭಗವಾನ್ ವಿಷ್ಣುವನ್ನು ನಿಯಮಗಳಂತೆ ಪೂಜಿಸುವ ಪದ್ಧತಿಯಿದೆ. ಭಗವಾನ್ ವಿಷ್ಣುವನ್ನು ಪ್ರಾಮಾಣಿಕ ಹೃದಯದಿಂದ ಪೂಜಿಸಿದರೆ, ಒಬ್ಬ ವ್ಯಕ್ತಿಯು ಎಲ್ಲಾ ಪಾಪಗಳಿಂದ ಮುಕ್ತಿ ಹೊಂದುತ್ತಾನೆ ಎನ್ನುವ ನಂಬಿಕೆಯಿದೆ. ಈಗಾಗಲೇ ಚಾತುರ್ಮಾಸ ಆರಂಭಗೊಂಡಿದ್ದು, ಈ ನಾಲ್ಕು ತಿಂಗಳಲ್ಲಿ ಪೂಜೆ, ಜಪ, ತಪಸ್ಸು, ಸಾಧನೆಗೆ ವಿಶೇಷ ಮಹತ್ವವಿದೆ. ಅಂತಹ ಪರಿಸ್ಥಿತಿಯಲ್ಲಿ, ಗುರುವಾರದಂದು ವಿಷ್ಣುವಿನ ಭಕ್ತಿಗಾಗಿ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸುವುದು ಉತ್ತಮವೆಂದು ಹೇಳಲಾಗುತ್ತದೆ. ಈ ಪಾರಾಯಣವನ್ನು ಸರಿಯಾದ ವಿಧಾನ ಮತ್ತು ನಿಯಮಗಳೊಂದಿಗೆ ಮಾಡಿದರೆ, ಶ್ರೀ ಹರಿಯ ಕೃಪೆಯಿಂದ ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.
ನಿಮ್ಮನ್ನು ಪ್ರೀತಿಸುವವರು ನಿಮಗೆ ಸಿಗುತ್ತಿಲ್ಲವೇ?
ನಿಮಗೆ ಮದುವೆಯಾಗುತ್ತಿಲ್ಲವೇ? ಮಕ್ಕಳಾಗದೇ ಕೊರಗುತ್ತಿದ್ದೀರಾ? ಗಂಡ ಹೆಂಡತಿ ಜಗಳವೇ? ಅತ್ತೆ-ಸೊಸೆ ಕಾಟ, ನಾದಿನಿಯರ ಪಿತೂರಿಗೆ ನೊಂದಿದ್ದೀರಾ? ಕುಟುಂಬ ಕಲಹ ತಾರಕ್ಕೆರುತ್ತಿದ್ದೀಯಾ? ಗಂಡನಿಗೆ ಬೇರೆ ಸಂಬಂಧವಿದೆಯಾ? ಹೆಂಡತಿಗೆ ಮತ್ತೊಬ್ಬರ ಸಹಾವಾಸವೇ? ಶತ್ರುಗಳ ಕಾಟಕ್ಕೆ ನಷ್ಟದಲ್ಲೀದ್ದಾರಾ? ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗವಾಗಿದೆಯೇ? ಬಿಜಿನೆಸ್ ನಡಿಯುತ್ತಿಲ್ಲವೇ? ಮನೆ ಕಟ್ಟಲಾಗುತ್ತಿಲ್ಲವೇ? ಪ್ರತಿ ಹೆಜ್ಜೆಗೂ ತೊಂದರೆಯೇ? ಅದೆಂಥದ್ದೇ ಕೆಡಕಿರಲಿ, ತೊಂದರೆಯಿರಲಿ ವಶೀಕರಣದ ಮೂಲಕ ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಜಾತಕ ಭಾವಚಿತ್ರದ ಆಧಾರದ ಮೇಲೆ ಖಚಿತ ಜ್ಯೋತಿಷ್ಯ ನಿಶ್ಚಿತ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠದ ತಾಂತ್ರಿಕ್ ವಿದ್ಯೆ ಮೂಲಕ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಅವರಿಂದ ನಿಮ್ಮ ಎಂಥದೇ ನಿಗೂಢ ಸಮಸ್ಯೆಗಳಿಗೂ ಪರಿಹಾರ ನೀಡಲಿದ್ದಾರೆ.
ವಿಷ್ಣು ಸಹಸ್ರನಾಮದ ಬಗ್ಗೆ ಬಹುತೇಕರು ಕೇಳಿರುತ್ತಾರೆ. ಆದರೆ, ಅದರಿಂದ ಏನು ಉಪಯೋಗವೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಇದನ್ನು ಪ್ರತಿದಿನ ಪಠಿಸುವುದರಿಂದ ಅನೇಕ ಪ್ರಯೋಜನಗಳಿದ್ದು, ಜೀವನದಲ್ಲಿ ಏಳಿಗೆ ಕಾಣುತ್ತಾ ಹೋಗಬಹುದಾಗಿದೆ. ನಿಮ್ಮ ಕೈಗೂಡದ ಕನಸುಗಳೂ ನನಸಾಗುತ್ತವೆ. ಇದಕ್ಕಾಗಿ ಏಕಾಗ್ರತೆಯಿಂದ ಪ್ರತಿದಿನ ಜಪನಾಮ ಮಾಡಬೇಕಷ್ಟೇ. ಹೀಗಾಗಿ ಈ ಜಪನಾಮವನ್ನು ದಿನವೂ ಪಠಿಸುವುದರಿಂದ ಏನೆಲ್ಲ ಅನುಕೂಲಗಳಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಅಂದುಕೊಂಡಿದ್ದು ನೆರವೇರುತ್ತಿಲ್ಲ, ಯಾವ ಕೆಲಸವೂ ಕೈಹಿಡಿಯುತ್ತಿಲ್ಲ, ಹಣೆಬರಹವೇ ಹೀಗೆ ಎಂದೆಲ್ಲ ಅಂದುಕೊಂಡು ಸುತ್ತಿದ ದೇವಸ್ಥಾನಗಳಿಲ್ಲ, ಸಂದಿಸಿದ ಜ್ಯೋತಿಷಿಗಳಿಲ್ಲ ಎಂದೆಲ್ಲ ಕೆಲವರು ಬೇಸರಿಸಿಕೊಳ್ಳುವುದು ಉಂಟು. ಆದರೆ, ಇದಕ್ಕೆ ಪರಿಹಾರವೇ ಇಲ್ಲವೇ ಎಂದು ಕೆಲವರು ಅಂದುಕೊಳ್ಳುವುದುಂಟು. ವಿಷ್ಣುಸಹಸ್ರನಾಮವೇ ಇದಕ್ಕೆ ಉತ್ತರ ಎಂದು ಹಲವರು ಕಂಡುಕೊಂಡಿದ್ದಾರೆ.
ಜೀವನದಲ್ಲಿ ಒಂದು ದೃಢ ಸಂಕಲ್ಪದಿಂದ ಇದನ್ನು ಪಠಿಸುತ್ತೀರೆಂದರೆ ಬೇರೆ ಯಾವುದೇ ಪರಿಹಾರೋಪಾಯಗಳ ಅವಶ್ಯಕತೆಯೇ ಇಲ್ಲ. ಅತ್ಯಂತ ಪ್ರಭಾವಶಾಲಿ ಜಪ ಇದಾಗಿದ್ದು, ಇದನ್ನು ದಿನವೂ ಪಠಿಸಿದರೆ ಒಳ್ಳೆಯದಾಗಲಿದೆ. ಹಾಗಾದರೆ ಇದರ ಬಗ್ಗೆ ಒಂದು ದೃಷ್ಟಿಹರಿಸೋಣ.
ಬಾಣದ ಹಾಸಿಗೆ ಮೇಲೆ ಮಲಗಿದ್ದ ಭೀಷ್ಮನ ಬಳಿ ಬಂದು ಧರ್ಮರಾಜ ಹೀಗೆ ಕೇಳುತ್ತಾನೆ, ಎಲ್ಲರಿಗೂ ಸರ್ವೋಚ್ಛ ಆಶ್ರಯ ಕೊಡುವವನು ಯಾರು? ಅವನಿಂತ ಶಾಂತಿ ಸಿಗಬೇಕು. ಎಲ್ಲಾ ಭವಸಾಗರದ ಕಷ್ಟಗಳಿಂದ ಮುಕ್ತಿ ಸಿಗಲು ಯಾರ ಮೊರೆಹೋಗಬೇಕು? ಎಂಬ ಬಗ್ಗೆ ಹೇಳಿ ಎಂದು ಕೇಳಿತ್ತಾನೆ. ಆಗ ಭೀಷ್ಮ ಹೀಗೆ ಹೇಳುತ್ತಾರೆ, ಇದಕ್ಕೆಲ್ಲ ಪರಿಹಾರವೆಂದರೆ ವಿಷ್ಣು. ಹೀಗಾಗಿ ವಿಷ್ಣುಸಹಸ್ರನಾಮ ಜಪಿಸಿದರೆ ಎಲ್ಲಾ ಸಂಕಷ್ಟಗಳೂ ದೂರವಾಗಿ ನೆಮ್ಮದಿ-ಜಯ ಲಭಿಸುತ್ತದೆ ಎಂದು ಹೇಳುತ್ತಾರೆ.
ಶಂಕರಾಚಾರ್ಯರೂ ಹೇಳಿದ್ದಾರೆ
ವಿಷ್ಣುಸಹಸ್ರನಾಮದಲ್ಲಿ ಅದರ ಉಪಯೋಗ ಬಗ್ಗೆ ಶಂಕರಾಚಾರ್ಯರು ಇದರ ಸ್ವಯಂ ಉಪಯೋಗ ಪಡೆದು ಟಿಪ್ಪಣಿಯನ್ನೂ ಬರೆದಿದ್ದಾರೆ. ಹಲವಾರು ವಿದ್ವಾಂಸರು ಸಹ ಈ ಬಗ್ಗೆ ಹೇಳಿಕೊಂಡಿದ್ದು, ಕಲಿಯುಗದಲ್ಲಿ ವಿಷ್ಣುಸಹಸ್ರನಾಮವನ್ನು ಏಕಾಗ್ರತೆಯಿಂದ ಓದಿದವರಿಗೆ ಎಲ್ಲಾ ಕಷ್ಟಗಳನ್ನೂ ನಿವಾರಿಸುವ ಶಕ್ತಿ ಇದೆ. ಯಾವುದೇ ಕಾರಣಕ್ಕೂ ಪರಿಹಾರಕ್ಕಾಗಿ ಬೇರೆಡೆ ಅಲೆಯುವ ಪ್ರಮೇಯ ಬರುವುದಿಲ್ಲ. ಇದಕ್ಕಾಗಿ ಮನೆಯಲ್ಲಿ ಅಲ್ಪ ಸಮಯ ಮೀಸಲಿಟ್ಟು ಓದಬೇಕಷ್ಟೇ ಎಂಬ ಸಲಹೆಗಳನ್ನು ನೀಡಿದ್ದಾರೆ.
ಏಕಾಗಿ ಈ ಜಪ ಪಠಿಸಬೇಕು?
ಇದನ್ನು ಮನೆ-ಮನದಲ್ಲಿ ಶಾಂತಿಯನ್ನು ನೆಲೆಸುತ್ತದೆ, ಸುಖಸಮೃದ್ಧಿಯನ್ನು ತಂದುಕೊಡುತ್ತದೆ. ಮೋಕ್ಷ ಮಾರ್ಗವನ್ನೂ ಕರುಣಿಸುತ್ತದೆ. ಇದರಲ್ಲಿ ವಿಷ್ಣುವಿನ ಸಾವಿರ ಹೆಸರು ಇರುತ್ತದೆ. ಜೀವನದಲ್ಲಿ ನಿಮಗೆ ಕಷ್ಟಗಳೇ ಬೆಳೆಯುತ್ತಿದೆ ಎಂತಿದ್ದರೆ, ಸಂಸಾರ ನಡೆಸಲು ಕಷ್ಟವಾಗುತ್ತದೆ ಎಂದಿದ್ದರೆ, ಆರ್ಥಿಕ ಸಮಸ್ಯೆ ಕಾಣಿಸಿಕೊಂಡರೆ, ನಿಮ್ಮ ಮೇಲೆ ಯಾರಾದರೂ ವಾಮಾಚಾರದ ಪ್ರಯೋಗ ಮಾಡಿದ್ದರೆ, ನಿಮ್ಮ ಕುಟುಂಬಕ್ಕೆ ಯಾರದ್ದಾದರೂ ಕೆಟ್ಟ ದೃಷ್ಟಿ ಬಿದ್ದಿದ್ದರೆ ಅಂಥವರು ವಿಷ್ಣುಸಹಸ್ರನಾಮವನ್ನು ಅವಶ್ಯಕವಾಗಿ ಜಪಿಸಲೇಬೇಕು. ವಿಷ್ಣು ಸಹಸ್ರನಾಮ ಪಠಿಸುವುದರಿಂದ ಆಗುವ ಉಪಯೋಗಗಳು:
1. ಸಂಪತ್ತು, ಸಮೃದ್ಧಿ ಹೆಚ್ಚಾಗುವುದು:
ಧಾರ್ಮಿಕ ಗ್ರಂಥಗಳ ಪ್ರಕಾರ, ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪ್ರತಿನಿತ್ಯ, ಗುರುವಾರ ಅಥವಾ ವಿಶೇಷ ಸಂದರ್ಭಗಳಲ್ಲಿ ಪಠಿಸಿ ಉಪವಾಸ ಮಾಡಿದರೆ, ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಹೆಚ್ಚಾಗುತ್ತದೆ.
2. ಗುರು ದೋಷ ನಿವಾರಣೆ:
ಜಾತಕದಲ್ಲಿ ಗುರುವಿನ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರವು ಬಹಳ ಫಲಪ್ರದವಾಗಿದೆ.
3. ಭೌತಿಕ ಆಸೆಗಳು ಈಡೇರುವುದು:
ವಿಷ್ಣು ಸಹಸ್ರನಾಮದಲ್ಲಿ ವಿಷ್ಣುವಿನ 1000 ಹೆಸರುಗಳನ್ನು ವಿವರಿಸಲಾಗಿದೆ. ಇದನ್ನು ಪಠಣ ಮಾಡುವುದರಿಂದ, ವ್ಯಕ್ತಿಯ ಭೌತಿಕ ಆಸೆಗಳನ್ನು ಪೂರೈಸಲಾಗುತ್ತದೆ. ಹಾಗೂ ಪ್ರತಿಯೊಂದು ಕಾರ್ಯದಲ್ಲೂ ಯುಶಸ್ಸನ್ನು ಪಡೆದುಕೊಳ್ಳಬಹುದು.
4. ಭಯದಿಂದ ಮುಕ್ತಿ:
ಪ್ರತಿದಿನ ವಿಷ್ಣು ಸಹಸ್ರನಾಮ ಪಾರಾಯಣ ಅಥವಾ ಪಠಣವನ್ನು ಕೇಳುವುದರಿಂದ ಭಯ ದೂರವಾಗುತ್ತದೆ ಮತ್ತು ಗುರಿಯನ್ನು ಸಾಧಿಸುವ ಶಕ್ತಿ ಬರುತ್ತದೆ ಎಂದು ನಂಬಲಾಗಿದೆ.
5. ಆತ್ಮವಿಶ್ವಾಸ ಹೆಚ್ಚಾಗುವುದು:
ಪ್ರತಿದಿನ ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಮನಸ್ಸು ಏಕಾಗ್ರತೆಯಿಂದ ಇರುತ್ತದೆ. ಒತ್ತಡ ನಿವಾರಣೆಯಾಗುತ್ತದೆ.
6. ಅದೃಷ್ಟವನ್ನು ತರುವುದು:
ವಿಷ್ಣು ಸಹಸ್ರನಾಮದ ನಿಯಮಿತ ಪಠಣವು ಮನೆಯಲ್ಲಿ ಅದೃಷ್ಟ ಮತ್ತು ಸಂತೋಷವನ್ನು ತರುತ್ತದೆ. ಹಣಕಾಸಿನ ವಿಷಯದಲ್ಲಿ ಸದೃಢತೆಯನ್ನು ತರುತ್ತದೆ.
ವಿಷ್ಣು ಸಹಸ್ರನಾಮ ಪಾರಾಯಣ ವಿಧಾನ:
1. ವಿಷ್ಣು ಸಹಸ್ರನಾಮ ಪಠಿಸುವ ಸಮಯ:
ಈ ಪಾರಾಯಣವನ್ನು ಸೂರ್ಯೋದಯದ ಸಮಯದಲ್ಲಿ ಮಾಡುವುದು ಉತ್ತಮ, ಆದರೂ ಇದನ್ನು ದಿನದ ಯಾವುದೇ ಸಮಯದಲ್ಲಿ ಮಾಡಬಹುದು. ಇದರಲ್ಲಿ ದೇಹ ಮತ್ತು ಮನಸ್ಸಿನ ಶುದ್ಧತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ.
2. ಪಾರಾಯಣಕ್ಕೂ ಮುನ್ನ ಪೂಜೆ:
ಸ್ನಾನದ ನಂತರ, ವಿಷ್ಣು ಮತ್ತು ಮಾತಾ ಲಕ್ಷ್ಮಿಯನ್ನು ಆವಾಹನೆ ಮಾಡಿ, ಸರಿಯಾಗಿ ಪೂಜಿಸಿ ನಂತರ ಪಾರಾಯಣವನ್ನು ಪ್ರಾರಂಭಿಸಿ.
3. ಇದು ಅತಿ ಮುಖ್ಯ:
ವಿಶೇಷ ಇಷ್ಟಾರ್ಥಗಳ ನೆರವೇರಿಕೆಗಾಗಿ, ಸ್ನಾನದ ನಂತರ, ಹಳದಿ ಬಟ್ಟೆಗಳನ್ನು ಧರಿಸಿ, ಪೂಜಾ ಸ್ಥಳದಲ್ಲಿ ನೀರು ತುಂಬಿದ ಕಲಶವನ್ನು ಇರಿಸಿ. ನೀರಿನ ಕಲಶವಿಲ್ಲದೆ ಈ ಪಠಣವನ್ನು ಮಾಡುವುದು ಅಪೂರ್ಣವೆಂದು ಪರಿಗಣಿಸಲಾಗುತ್ತದೆ.
ನಿಮ್ಮನ್ನು ಪ್ರೀತಿಸುವವರು ನಿಮಗೆ ಸಿಗುತ್ತಿಲ್ಲವೇ?
ನಿಮಗೆ ಮದುವೆಯಾಗುತ್ತಿಲ್ಲವೇ? ಮಕ್ಕಳಾಗದೇ ಕೊರಗುತ್ತಿದ್ದೀರಾ? ಗಂಡ ಹೆಂಡತಿ ಜಗಳವೇ? ಅತ್ತೆ-ಸೊಸೆ ಕಾಟ, ನಾದಿನಿಯರ ಪಿತೂರಿಗೆ ನೊಂದಿದ್ದೀರಾ? ಕುಟುಂಬ ಕಲಹ ತಾರಕ್ಕೆರುತ್ತಿದ್ದೀಯಾ? ಗಂಡನಿಗೆ ಬೇರೆ ಸಂಬಂಧವಿದೆಯಾ? ಹೆಂಡತಿಗೆ ಮತ್ತೊಬ್ಬರ ಸಹಾವಾಸವೇ? ಶತ್ರುಗಳ ಕಾಟಕ್ಕೆ ನಷ್ಟದಲ್ಲೀದ್ದಾರಾ? ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗವಾಗಿದೆಯೇ? ಬಿಜಿನೆಸ್ ನಡಿಯುತ್ತಿಲ್ಲವೇ? ಮನೆ ಕಟ್ಟಲಾಗುತ್ತಿಲ್ಲವೇ? ಪ್ರತಿ ಹೆಜ್ಜೆಗೂ ತೊಂದರೆಯೇ? ಅದೆಂಥದ್ದೇ ಕೆಡಕಿರಲಿ, ತೊಂದರೆಯಿರಲಿ ವಶೀಕರಣದ ಮೂಲಕ ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಜಾತಕ ಭಾವಚಿತ್ರದ ಆಧಾರದ ಮೇಲೆ ಖಚಿತ ಜ್ಯೋತಿಷ್ಯ ನಿಶ್ಚಿತ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠದ ತಾಂತ್ರಿಕ್ ವಿದ್ಯೆ ಮೂಲಕ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಅವರಿಂದ ನಿಮ್ಮ ಎಂಥದೇ ನಿಗೂಢ ಸಮಸ್ಯೆಗಳಿಗೂ ಪರಿಹಾರ ನೀಡಲಿದ್ದಾರೆ.
4. ಪಠಣದ ಕೊನೆಯಲ್ಲಿ ಇದನ್ನು ತೆಗೆದುಕೊಳ್ಳಲು ಮರೆಯದಿರಿ:
ನೀರು ತುಂಬಿದ ಕಲಶದ ಮೇಲೆ ಮಾವಿನ ಎಲೆ ಮತ್ತು ತೆಂಗಿನಕಾಯಿಯನ್ನು ಇರಿಸುವ ಮೂಲಕ ಪಠಣವನ್ನು ಪ್ರಾರಂಭಿಸಿ. ಪಠಣದ ಕೊನೆಯಲ್ಲಿ, ವಿಷ್ಣುವಿಗೆ ಅರ್ಪಿಸಿದ ಹಳದಿ ಭೋಗವನ್ನು ಪ್ರಸಾದವಾಗಿ ತೆಗೆದುಕೊಳ್ಳಿ.
ವಿಷ್ಣು ಸಹಸ್ರನಾಮವನ್ನು ಪಠಿಸುವಾಗ ಶುದ್ಧತೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಪ್ರತಿದಿನ ನಿಮಗೆ ವಿಷ್ಣು ಸಹಸ್ರನಾಮವನ್ನು ಪಠಿಸಲು ಸಾಧ್ಯವಾಗದಿದ್ದರೆ, ಗುರುವಾರದಂದು ಅಥವಾ ವಾರದ ಯಾವುದೇ ದಿನದಂದು ಕೂಡ ಇದನ್ನು ಪಠಿಸಬಹುದು.
ಇತರ ಪ್ರಮುಖ ಅನುಕೂಲಗಳು
– ವಿಷ್ಣುಸಹಸ್ರನಾಮ ಓದುತ್ತಿರುವವರ ಜಾತಕದ ಮೇಲೆ ಭಗವಂತನಾದ ವಿಷ್ಣು ಹಾಗೂ ಶಿವ ಇಬ್ಬರ ವಿಶೇಷ ಕೃಪೆಯೂ ಇರುತ್ತದೆ.
– ಇದು ಜಾತಕದಲ್ಲಿ ಒಳ್ಳೆಯ ಪ್ರಭಾವ ಬೀರಿ ಮತ್ತಷ್ಟು ಶಕ್ತಿಯುತವನ್ನಾಗಿ ಮಾಡುತ್ತದೆ.
– ಯೋಜನೆಗಳನ್ನು ಹಾಕಿಕೊಂಡಿದ್ದರೆ ಅದು ಕೈಗೂಡಲು ಸಹಾಯಕ ಮಾಡುತ್ತದೆ.
– ನಿಮ್ಮ ಮೇಲೆ ಯಾರದ್ದಾದರೂ ಕೆಟ್ಟ ದೃಷ್ಟಿ ಬಿದ್ದಿದ್ದರೆ, ಅದರಿಂದ ರಕ್ಷಣೆ ಮಾಡುತ್ತದೆ.
– ನಿಮ್ಮನ್ನು ಯಾವಾಗಲೂ ರಕ್ಷಿಸುತ್ತಲೇ ಇರುವ ಈ ಜಪನಾಮ, ರಕ್ಷಾಕವಚವಾಗಿ ಕೆಲಸ ಮಾಡಲಿದೆ.
– ಭಗವಾನ್ ವಿಷ್ಣುವನ್ನು ಪಾಲಕ ಎಂದು ಕರೆಯಲಾಗುತ್ತದೆ. ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ಸಂಸಾರದಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ.
– ವಿವಾಹಿತ ಸ್ತ್ರೀ ವಿಷ್ಣುಸಹಸ್ರನಾಮ ಜಪಿಸಿದರೆ ಸಂತಾನ ಪ್ರಾಪ್ತಿಯಾಗುತ್ತದೆ, ಪರಿವಾರದಲ್ಲಿ ಕಲಹಗಳಿದ್ದರೆ ನಿವಾರಣೆಯಾಗುತ್ತದೆ. ಸುಖ-ಶಾಂತಿ ವೃದ್ಧಿಯಾಗುತ್ತದೆ