ಬೆಂಗಳೂರು : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಸಿನಿಮಾದ ಟೈಟಲ್ ಸಾಂಗ್ ನಿನ್ನೆ ರಿಲೀಸ್ ಆಗಿದೆ. ಯುಟ್ಯೂಬ್ ನಲ್ಲಿ “ಆಕಾಶನೆ ಅಧಿರಿಸುವ” ಭಾರಿ ಸೌಂಡ್ ಮಾಡುತ್ತಿದ್ದು, ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 1 ಮಿಲಿಯನ್ ವ್ಯೂ ಪಡೆದಿತ್ತು. ಆದರೆ ಇದು ದಾಖಲೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ ಆನಂದ್ ಆಡಿಯೋ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಗರಂ ಆಗಿದ್ದಾರೆ.
ಅರ್ಜುನ್ ಜನ್ಯಾ ಸಂಗೀತ ನಿರ್ದೇಶನದ ‘ಆಕಾಶನೆ ಅಧಿರಿಸುವ’ ಎಂಬ ಹಾಡು ನಿನ್ನೆ ಬೆಳಿಗ್ಗೆ 10 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅಂದರೆ ಮೂರು ಗಂಟೆ 20 ನಿಮಿಷದ ಅವಧಿಯಲ್ಲಿ 1 ಮಿಲಿಯನ್ ವೀಕ್ಷಣೆ ಪಡೆಯಿತು. ಇದು ದಾಖಲೆ ಎಂದು ಕಿಚ್ಚ ಅಭಿಮಾನಿಗಳೂ ಖುಷಿಪಟ್ಟಿದ್ದರು.
ಆದರೆ ಆನಂದ್ ಆಡಿಯೋ ತಪ್ಪು ಮಾಹಿತಿ ಕೊಡುತ್ತಿದೆ. ಇದಕ್ಕೂ ಮೊದಲು ದರ್ಶನ್ ಅಭಿನಯದ ‘ಯಜಮಾನ’ ಸಿನಿಮಾದ ‘ಶಿವನಂದಿ’ ಹಾಡು ಕೇವಲ 3 ಗಂಟೆಗಳಲ್ಲಿ 1 ಮಿಲಿಯನ್ ವ್ಯೂ ಪಡೆದಿತ್ತು ಎಂದು ದಿ ಬಾಸ್ ಅಭಿಮಾನಿಗಳು ಕೆಂಡಕಾರಿದ್ದಾರೆ.