50 ಕಂಪೆನಿ 1100 ಉದ್ಯೋಗಾವಕಾಶ
ಮಾಚ್.21ಕ್ಕೆ ಕೊಪ್ಪಳದಲ್ಲಿ ಉದ್ಯೋಗ ಮೇಳ
SSLC ಯಿಂದ ಪದವೀಧರರಿಗೆ ಉದ್ಯೋಗಾವಕಾಶ
ಶ್ರೀ ಶಿವಶಾಂತವೀರ ಮಂಗಲ ಭವನದಲ್ಲಿ ಉದ್ಯೋಗ ಮೇಳ
ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮೇಳ
ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಸಂಜೀವಿನಿ ಎನ್ಆರ್ಎಲ್ಎಂ, ಜಿಲ್ಲಾ ಕೌಶಲ್ಯ ಮಿಷನ್ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಕೊಪ್ಪಳದಲ್ಲಿ ಬೃಹತ್ ಉದ್ಯೋಗ ಮೇಳವನ್ನ ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 21 ರಂದು ಕೊಪ್ಪಳ ನಗರದ ಶ್ರೀ ಶಿವಶಾಂತವೀರ ಮಂಗಲ ಭವನದಲ್ಲಿ ಉದ್ಯೋಗ ಮೇಳ ನಡೆಯಲಿದೆ.
ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉದ್ಯೋಗ ಮೇಳೆ ನಡೆಯಲಿದೆ.
ಈ ಉದ್ಯೋಗ ಮೇಳದಲ್ಲಿ ಕೈಗಾರಿಕೆ, ಕೃಷಿ, ಸಾರಿಗೆ, ಫಾರ್ಮಾ, ಬ್ಯಾಕಿಂಗ್, ಫೈನಾನ್ಸಿಯಲ್ಸ್ ಗೆ ಸಂಬಂಧಿಸಿದ ವಿವಿಧ ಕ್ಷೇತ್ರಗಳನ್ನೊಳಗೊಂಡ ಸುಮಾರು 50 ಕಂಪನಿಗಳು ಭಾಗವಹಿಸಲಿವೆ.
ಮೇಳದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯಿಂದ ಪದವಿ ವಿದ್ಯಾರ್ಹತೆವರೆಗಿನ ಉದ್ಯೋಕಾಂಕ್ಷಿಗಳು ದಾಖಲಾತಿಗಳೊಂದಿಗೆ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯ ಮಿಷನ್, ಕೊಪ್ಪಳ ದೂರವಾಣಿ ಸಂಖ್ಯೆ 7618731311, 9972778248, 9743839859 ಗೆ ಸಂಪರ್ಕಿಸಬಹುದಾಗಿದೆ.