ನೀರವ್ ಮೋದಿಯ ಪತ್ನಿಗೆ ರೆಡ್ ಕಾರ್ನರ್ ನೀಡಿದ ಅಂತಾರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆ
ಹೊಸದಿಲ್ಲಿ, ಅಗಸ್ಟ್25: ಭಾರತದಲ್ಲಿ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಆರೋಪಿ ನೀರವ್ ಮೋದಿಯ ಪತ್ನಿ ವಿರುದ್ಧ ಅಂತಾರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆ ಇಂಟರ್ಪೋಲ್ ರೆಡ್ ಕಾರ್ನರ್ ನೀಡಿದೆ.
ಪರಾರಿಯಾಗಲು ಪ್ರಯತ್ನಿಸಿದ್ದವರಿಗೆ ಅಥವಾ ಪರಾರಿಯಾಗಿದ್ದವರಿಗೆ ಶಿಕ್ಷೆ ವಿಧಿಸಲು ರೆಡ್ ಕಾರ್ನರ್ ನೀಡಲಾಗುತ್ತದೆ. ಹಸ್ತಾಂತರ, ಶರಣಾಗತಿ ಅಥವಾ ಅಂತಹುದೇ ಕಾನೂನು ಕ್ರಮ ಬಾಕಿ ಇರುವ ವ್ಯಕ್ತಿಯನ್ನು ಪತ್ತೆ ಹಚ್ಚಲು ಮತ್ತು ತಾತ್ಕಾಲಿಕವಾಗಿ ಬಂಧಿಸಲು ವಿಶ್ವದಾದ್ಯಂತ ಕಾನೂನು ಜಾರಿಗೊಳಿಸುವ ಮನವಿಯನ್ನು ರೆಡ್ ಕಾರ್ನರ್ ಸೂಚಿಸುತ್ತದೆ.
ವಿಶೇಷವೆಂದರೆ, ನೀರವ್ ಮೋದಿಯ ಇತರ ಕುಟುಂಬ ಸದಸ್ಯರಾದ ಅವರ ಸಹೋದರ ನೇಹಾಲ್ ಮತ್ತು ಸಹೋದರಿ ಪೂರ್ವಿ ಅವರ ವಿರುದ್ಧವೂ ಇದೇ ರೀತಿಯ ಬಂಧನ ವಾರಂಟ್ ಹೊರಡಿಸಲಾಗಿದೆ.
ಅಮಿ ಮೋದಿ ಅವರು ಕೆಲವು ಕಂಪನಿಗಳಲ್ಲಿ ನಿರ್ದೇಶಕರ ಹುದ್ದೆಯನ್ನು ಅಲಂಕರಿಸಿದ್ದು, ಕಳಂಕಿತ ಡೈಮಂಟೈರ್ ಹಣವನ್ನು ಮನಿ ಲಾಂಡರಿಂಗ್‌ಗೆ ಬಳಸಿದ್ದಾರೆಂದು ಆರೋಪಿಸಲಾಗಿದೆ. ಜಾರಿ ನಿರ್ದೇಶನಾಲಯ (ಇಡಿ) ಕೂಡ ಅವರನ್ನು ಈ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಿದೆ.
ನೀರವ್ ಮೋದಿಯನ್ನು ಕಳೆದ ವರ್ಷ ಲಂಡನ್‌ನಲ್ಲಿ ಬಂಧಿಸಲಾಗಿದ್ದು, ಪ್ರಸ್ತುತ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಮೇ ತಿಂಗಳಲ್ಲಿ ಸೆಂಟ್ರಲ್ ಲಂಡನ್‌ನ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಒಂದು ವಾರದ ವಿಚಾರಣೆಯ ನಂತರ ವಿಚಾರಣೆಯನ್ನು ಸೆಪ್ಟೆಂಬರ್ ವರೆಗೆ ಮುಂದೂಡಲಾಗಿದೆ.