ಸುಶಾಂತ್ ಸಾವಿನ ಪ್ರಕರಣಕ್ಕೆ ಹೊಸ ಹೊಸ ಟ್ವಿಸ್ಟ್ ಗಳು ಸಿಗುತ್ತಿದ್ದು, ಇತ್ತೇಚೆಗಷ್ಟೇ ಮುಂಬೈನ ನಿವಾಸದಿಂದ ರೆಹಾ ಎಸ್ಕೇಪ್ ಆಗಿರುವ ವಿಚಾರ ಬೆಳಕಿಗೆ ಬಂದಿತ್ತು. ಇದಾದ ಬಳಿಕ ಆರೋಪಿ ಸ್ಥಾನದಲ್ಲಿರುವ ರೆಹಾ ಬಂಧನಕ್ಕೆ ಟ್ವಿಟ್ಟರ್ ನಲ್ಲಿ ಟ್ರೆಂಡ್ ಶುರುವಾಗಿದೆ. ಅಲ್ಲದೇ ರೆಹಾ ತಮ್ಮ ವಕೀಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ರು. ಇದಾದ ಬಳಿಕ ರೆಹಾ ಪರ ವಕೀಲರು ಪಟ್ನಾದಿಂದ ಪ್ರಕರಣವನ್ನು ಮುಂಬೈಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ರು. ಇದೀಗ ಅರ್ಜಿಯಲ್ಲಿ ರೆಹಾ ಕೆಲ ವಿಚಾರಗಳನ್ನ ಬಿಚ್ಚಿಟ್ಟಿರುವುದು ಬಹಿರಂಗವಾಗಿದೆ.
ಅರ್ಜಿಯಲ್ಲಿ ‘ ನಾನು ಮತ್ತೆ ಸುಶಾಂತ್ ಮುಂಬೈನ ಬಾಂದ್ರಾದ ಅಪಾರ್ಟ್‍ಮೆಂಟ್‍ನಲ್ಲಿ ಒಂದು ವರ್ಷ ಜೊತೆಯಲ್ಲಿದ್ದೆವು. ನಾನು ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ 6 ದಿನಗಳ ಹಿಂದೆ ಫ್ಲಾಟ್‍ನಿಂದ ಹೊರಬಂದಿದ್ದೆ. ಆದ್ರೆ ಸುಶಾಂತ್ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಆದರೆ ಸುಶಾಂತ್ ಮನೆಯವರು ವೃಥಾ ನನ್ನ ವಿರುದ್ಧ ಸುಳ್ಳು ಆರೋಪ ಮಾಡ್ತಿದ್ದಾರೆ. ಸುಶಾಂತ್ ಸಾವಿಗೂ ನನಗೂ ಯಾವುದೇ ರೀತಿಯಾದ ಸಂಬಂಧವಿಲ್ಲ’ ಎಂದು ರೆಹಾ ತಿಳಿಸಿದ್ದಾರೆ. ಅಲ್ಲದೆ ಸುಸಾಂತ್ ತಂದೆ ಸಲ್ಲಿಸಿರುವ ದೂರಿನ ಅರ್ಜಿಯನ್ನು ಪಟ್ನಾದಿಂದ ಮುಂಬೈಗೆ ವರ್ಗಾಯೊಸುವಂತೆ ರೆಹಾ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕ್ರೇಜಿಸ್ಟಾರ್ ಮನೆ ಮುಂದೆ ಅಭಿಮಾನಿಗಳ ಗಲಾಟೆ
ಹಿರಿಯ ನಟ ರವಿಚಂದ್ರನ್ ಈ ವರ್ಷ ಹುಟ್ಟು ಹಬ್ಬ ಆಚರಣೆಯಿಂದ ದೂರ ಉಳಿಯಲು ನಿರ್ಧಾರಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಅವರ ಮನೆಯ ಮುಂದೆ ಗಲಾಟೆ ನಡೆಸಿದ್ದಾರೆ. ಮನೆ ಬಳಿ...