ಬೆಂಗಳೂರು : ಸಾಂಪ್ರದಾಯಿಕ ವೃತ್ತಿ ಅವಲಂಬಿಸಿರುವ ಅಸಂಘಟಿತ ಕಾರ್ಮಿಕರ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ. ಈ ಬಗ್ಗೆ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ವೃತಿ ಕಾರ್ಮಿಕರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡುವ ಮುನ್ನವೇ ನಾನು ಮತ್ತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸೇರಿ, ಪ್ರತಿಯೊಬ್ಬ ವೃತಿ ಕಾರ್ಮಿಕರಿಗೆ 10000 ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸುದ್ದಿಗೋಷ್ಠಿ ನಡೆಸಿದ್ದವು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವು. ಆದರೆ ರಾಜ್ಯ ಸರ್ಕಾರ ಕೆಲ ಕಾರ್ಮಿಕರಿಗೆ ಮಾತ್ರ 5000 ರೂಪಾಯಿ ಘೋಷಣೆ ಮಾಡಿತ್ತು. ಅದು ಸಹ ಘೋಷಣೆ ಮಾಡಿ ಇಷ್ಟುದಿನವಾದರೂ ಕಾರ್ಮಿಕರ ಖಾತೆ ಹಣ ಬಂದಿಲ್ಲ.
ವೃತಿ ಕಾರ್ಮಿಕರಿಗೆ ರಾಜ್ಯ ಸರ್ಕಾರ ನ್ಯಾಯ ನೀಡಿಲ್ಲ. ಅಲ್ಲದೆ ಪರಿಹಾರ ಧನ ಪಡೆಯಬೇಕಾದರೆ ಸಾಕಷ್ಟು ಕಂಡೀಷನ್ ಹಾಕಿದ್ದಾರೆ. ಕಾರ್ಮಿಕರು ಅಧಿಕಾರಗಳ ಸುತ್ತಾ ತಿರುಗುತ್ತಿದ್ದಾರೆ. ಅಲ್ಲದೆ ದಾಖಲತಿ ಪಡೆಯಲು ಅಧಿಕಾರಿಗಳಿಗೆ ಕಾರ್ಮಿಕರು ಕಮೀಷನ್ ಕೊಡುವ ಪರಿಸ್ಥಿತಿ ಬಂದಿದೆ. 500 ಕಮೀಷನ್ ಕೊಟ್ಟರೇ ಕೆಲಸ ಆಗುತ್ತದೆ . ಇಲ್ಲವಾದರೆ ಪರಿಹಾರ ಧನ ಸಿಗುವುದಿಲ್ಲ. ಡ್ರೈವರಗಳಿಗೆ ಅಧಿಕಾರಿಗಳು ಹಿಂಸೆ ನೀಡುತ್ತಿದ್ದಾರೆ. ಆ್ಯಪ್ ನಲ್ಲಿ ಅಪಲೋಡ್ ಮಾಡಬಬೇಕು. ಅದು ಇಂಗ್ಲೀಷ್ ನಲ್ಲಿ ಮಾಹಿತಿ ನೀಡಬೇಕು. ಇದರಿಂದ ಡ್ರೈವರ್ ಗಳಿಗೆ ತೊಂದರೆಯಾಗಿದೆ. ವೃತಿ ಕಾರ್ಮಿಕರು ಹಳ್ಳಿಯಲ್ಲಿ ಸಿಗುತ್ತಾರೆ. ಜೊತೆಗೆ ಸ್ಥಳಿಯ ಆಡಳಿತಕ್ಕೆ ಯಾರು ವೃತ್ತಿ ಕಾರ್ಮಿಕರು ಎಂದು ತಿಳಿದಿರುತ್ತೆ. ಹಾಗಾಗಿ ಸ್ಥಳಿಯ ಆಡಳಿತದ ಅಧಿಕಾರಿಗಳು ಹೋಗಿ ಚೆಕ್ ನೀಡಿ, ಒಂದು ಪೋಟೋ ತೆಗೆದುಕೊಂಡರೇ ಸಾಕು ಕಾರ್ಮಿಕರಿಗೆ ಪರಿಹಾರ ಸಿಗುತ್ತದೆ. ಆ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.








