M S Dhoni | ಧೋನಿ ಸೂಪರ್ ಸ್ಟಂಪಿಂಗ್ ಸವಿನೆನಪು
ಧೋನಿಯ ಗ್ರೇಟ್ ಸ್ಪಂಪಿಂಗ್ ಗೆ ಇಂದಿಗೆ ಆರು ವರ್ಷ
ಬೆಂಗಳೂರಿನಲ್ಲಿ ನಡೆದ ಟಿ 20 ವಿಶ್ವಕಪ್ ನ ಪಂದ್ಯ
ಸ್ಟಂಪಿಂಗ್ ಮೂಲಕ ಪಂದ್ಯವನ್ನ ಗೆಲ್ಲಿಸಿದ ಧೋನಿ
ಬಾಂಗ್ಲಾದೇಶದ ವಿರುದ್ಧ ನಡೆದ ಟಿ 20 ವಿಶ್ವಕಪ್ ಪಂದ್ಯ
ಮಾರ್ಚ್ 23 2016ರಲ್ಲಿ ನಡೆದ ಪಂದ್ಯದ ಸವಿ ನೆನಪು
ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ವಿಶ್ವ ಕ್ರಿಕೆಟ್ ನ ಶ್ರೇಷ್ಠ ವಿಕೆಟ್ ಕೀಪರ್. ತಮ್ಮ ಅತ್ಯದ್ಭುತ ಕೀಪಿಂಗ್ ಕೌಶಲ್ಯದ ಮೂಲಕ ಧೋನಿ ಅದೆಷ್ಟೋ ಪಂದ್ಯಗಳ ಗತಿಯನ್ನೇ ಬದಲಿಸಿದ್ದಾರೆ. ವಿಕೆಟ್ ಗಳ ಹಿಂದೆ ಪಾದರಸದಂತೆ ಇರುವ ಧೋನಿ ಎದುರಾಳಿ ಬ್ಯಾಟರ್ ಗಳಿಗೆ ಭಯ ಹುಟ್ಟಿಸಿದ್ದಾರೆ.
ವಿಕೆಟ್ ಗಳ ಹಿಂದೆ ನಿಂತು ಪಂದ್ಯದ ಸ್ಥಿತಿಗತಿಗಳನ್ನ ತಿಳಿಯುವ ಧೋನಿ, ಕೆಲವೊಂದು ಪಂದ್ಯಗಳಲ್ಲಿ ಗ್ರೇಡ್ ಸ್ಪಂಪಿಂಗ್ ಕೂಡ ಮಾಡಿದ್ದಾರೆ. ಅದಕ್ಕೆ ಸೂಕ್ತ ಉದಾಹರಣೆ ಬಾಂಗ್ಲಾದೇಶದ ವಿರುದ್ಧ ಬೆಂಗಳೂರಿನಲ್ಲಿ ನಡೆದ ಟಿ 20 ವಿಶ್ವಕಪ್ ನ ಪಂದ್ಯ.!
ಆ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಪಂದ್ಯ ಗೆಲ್ಲಲು ಒಂದು ಎಸೆತಕ್ಕೆ 2 ರನ್ ಬೇಕಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಲಾಸ್ಟ್ ಬಾಲ್ ಅನ್ನು ಬಾಂಗ್ಲಾ ಬ್ಯಾಟರ್ ಮಿಸ್ ಮಾಡಿದರು. ಪರಿಣಾಮ ಬಾಲ್ ಸೀದಾ ಧೋನಿ ಕೈಗೆ ಹೋಯ್ತು. ಆಗ ಮಿಂಚಿನ ವೇಗದಲ್ಲಿ ಓಡಿಬಂದ ಧೋನಿ, ಸ್ಪಂಟ್ಸ್ ಎಗರಿಸಿದರು. ಅಲ್ಲಿಗೆ ಪಂದ್ಯ ಭಾರತದ ಪಾಲಾಯ್ತು…
ಅಂದಹಾಗೆ ಆ ಗ್ರೇಟ್ ಸ್ಪಂಪಿಂಗ್ ಗೆ ಇಂದಿಗೆ ಆರು ವರ್ಷ ಕಳೆದಿದೆ. ಹೀಗಾಗಿ ಕ್ರೀಡಾಭಿಮಾನಿಗಳು ಅಂದಿನ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. Remarkable moment of Dhoni stumping