ದಾವಣಗೆರೆ : ಕೊರೊನಾ ಸೋಂಕಿತರಿಗೆ ಹೋಳಿಗೆ ಊಟ ಬಡಿಸುವ ಮೂಲಕ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಸೋಂಕಿತರಿಗೆ ಧೈರ್ಯ ತುಂಬಿಸಿದ್ದಾರೆ.
ನ್ಯಾಮತಿ ತಾಲೂಕಿನ ಮಾದನಬಾವಿಯ ಮೊರಾರ್ಜಿ ವಸತಿ ನಿಲಯದ ಕೋವಿಡ್ ಸೆಂಟರ್ ನ ಕೊರೊನಾ ಸೋಂಕಿತರಿಗೆ ರೇಣುಕಾಚಾರ್ಯ ಹೋಳಿಗೆ, ಪಲ್ಯ ಸೇರಿದಂತೆ ಹಬ್ಬದೂಟ ಉಣಬಡಿಸಿದರು. ಕ್ವಾರಂಟೈನ್ ನಲ್ಲಿದ್ದ ಕಾರಣ ಗೌರಿಗಣೇಶ ಹಬ್ಬ ಆಚರಿಸಲಿಲ್ಲ ಎಂಬ ಕೊರಗು ನೀಗಿಸುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿತ್ತು.

ಈ ವೇಳೆ ರೇಣುಕಾಚಾರ್ಯ, ಕೊರೊನಾ ಬಂದಾಕ್ಷಣ ಯಾರೂ ಸಾಯುವುದಿಲ್ಲ. ಆತ್ಮಸ್ಥೈರ್ಯ ಮುಖ್ಯ. ಎಲ್ಲರೂ ಆದಷ್ಟು ಬೇಗ ಗುಣಮುಖರಾಗಿ. ಏನೇ ಸಮಸ್ಯೆಯಿದ್ದರೂ ತಿಳಿಸಿ ಎಂದು ಸೋಂಕಿತರಿಗೆ ಧೈರ್ಯ ತುಂಬಿದರು.
![]()








