ರಾಜಧಾನಿಯಲ್ಲಿ ಗಣರಾಜ್ಯೋತ್ಸವ ಸಮಾರೋಪ ಸಮಾರಂಭ | ವಿಶೇಷ ಡ್ರೋನ್ ಲೈಟಿಂಗ್ ಶೋ Saaksha Tv
ನವದೆಹಲಿ: ರಾಷ್ಟ್ರ ರಾಜಧಾನಿ ವಿಜಯಚೌಕ್ ನಲ್ಲಿ ಗಣರಾಜ್ಯೋತ್ಸವ ಸಮಾರೋಪ ಸಮಾರಂಭ ನಿಮಿತ್ತ ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮ ಆಯೋಜನೆ.
ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಭಾರತೀಯ ಸೇನೆಯ 3 ವಿಭಾಗಳ ಮುಖ್ಯಸ್ಥರು ಭಾಗಿಯಾಗಿದ್ದಾರೆ. ಅಲ್ಲದೇ ಭಾರತೀಯ ಸೇನಾ ಸಿಬ್ಬಂದಿ ಅಮೋಘವಾಗಿ ಬ್ಯಾಂಡ್ ವಾದ್ಯ ನುಡಿಸಿದ್ದಾರೆ. ಭೂ ಸೇನೆ, ವಾಯು ಸೇನೆ, ಸಿಆರ್ ಎಫ್ ಎಫ್ , ನೇವಿ ಬ್ಯಾಂಡ್ ಗಳು ಭಾಗಿಯಾಗಿದ್ದಾವೆ.
ಸ್ವತಂತ್ರ್ಯ ಬಂದು 75 ವರ್ಷವಾದ ಹಿನ್ನಲೇ 1000 ವಿಶೇಷ ಡ್ರೋನ್ ಮೂಲಕ ಲೈಟಿಂಗ್ ಶೋ ನಡೆಯುತ್ತಿದೆ. ಇದೇ ಮೊದಲ ಬಾರಿಗೆ 10 ನಿಮಿಷಗಳ ಕಾಲ ಡ್ರೋನ್ ಲೈಟ್ ಶೋ ನಡೆಯುತ್ತಿದೆ. ಈ ಡ್ರೋನ್ ಲೈಟಿಂಗ್ ಶೋ 6.15 ಕ್ಕೆ ಪ್ರಾರಂಭವಾಗಲಿದೆ. ಈ ಡ್ರೋನ್ ಶೋ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಿಂದ ಆಯೋಜಿಸಲಾಗಿದೆ.