ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಪ್ರಥಮ ಸ್ಥಾನ ಪಡೆದ ಉತ್ತರ ಪ್ರದೇಶದ ರಾಮ ಮಂದಿರ ಟ್ಯಾಬ್ಲೊ
ಹೊಸದಿಲ್ಲಿ, ಜನವರಿ29: ಈ ವರ್ಷದ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಉತ್ತರ ಪ್ರದೇಶದ ಟ್ಯಾಬ್ಲೊವನ್ನು ಅತ್ಯುತ್ತಮವೆಂದು ಆಯ್ಕೆ ಮಾಡಲಾಗಿದೆ. ಕೇಂದ್ರ ಸಚಿವ ಕಿರೆನ್ ರಿಜಿಜು ಅವರು ಗುರುವಾರ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಒಟ್ಟು 32 ಟ್ಯಾಬ್ಲೊಗಳಲ್ಲಿ – ರಾಜ್ಯ ಮತ್ತು ಕೇಂದ್ರ ಪ್ರದೇಶಗಳಿಂದ 17, ಕೇಂದ್ರ ಸಚಿವಾಲಯಗಳು, ಇಲಾಖೆಗಳು ಮತ್ತು ಅರೆಸೈನಿಕ ಪಡೆಗಳಿಂದ ಒಂಬತ್ತು, ಮತ್ತು ರಕ್ಷಣಾ ಸಚಿವಾಲಯದಿಂದ ಆರು ಟ್ಯಾಬ್ಲೊಗಳು ಈ ವರ್ಷದ ರಾಜ್‌ಪಾತ್‌ನಲ್ಲಿ ನಡೆದ ಮೆರವಣಿಗೆಯ ಭಾಗವಾಗಿತ್ತು.
‘ಅಯೋಧ್ಯೆ: ಉತ್ತರ ಪ್ರದೇಶದ ಸಾಂಸ್ಕೃತಿಕ ಪರಂಪರೆ’ ಎಂಬುವುದು ಉತ್ತರ ಪ್ರದೇಶದ ಟ್ಯಾಬ್ಲೊ ವಿಷಯವಾಗಿತ್ತು.
ಪ್ರಾಚೀನ ಪವಿತ್ರ ಪಟ್ಟಣ ಅಯೋಧ್ಯೆಯ ಸಾಂಸ್ಕೃತಿಕ ಪರಂಪರೆ, ರಾಮ ದೇವಾಲಯದ ಪ್ರತಿಕೃತಿ, ‘ದೀಪೋತ್ಸವ’ದ ದರ್ಶನ ಮತ್ತು ರಾಮಾಯಣ ಮಹಾಕಾವ್ಯದ ವಿವಿಧ ಕಥೆಗಳನ್ನು ಟ್ಯಾಬ್ಲೊದಲ್ಲಿ ಚಿತ್ರಿಸಲಾಗಿದೆ.
ತ್ರಿಪುರದ ಟ್ಯಾಬ್ಲೊವನ್ನು ಎರಡನೇ ಅತ್ಯುತ್ತಮವೆಂದು ಆಯ್ಕೆ ಮಾಡಲಾಯಿತು. ಸ್ವಾವಲಂಬನೆ (ಆತ್ಮನಿರ್ಭರ್) ಸಾಧಿಸಲು ಪರಿಸರ ಸ್ನೇಹಿ ಸಂಪ್ರದಾಯದ ಪ್ರಚಾರವನ್ನು ಇದು ಚಿತ್ರಿಸಿದೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತೀಯ ಲಸಿಕೆ ಬಗ್ಗೆ ಯಾವುದೇ ಆಸಕ್ತಿ ತೋರಿಸದ ಪಾಕಿಸ್ತಾನ – ಏನಿದರ ಹಿಂದಿನ ಗುಟ್ಟು?
‘ದೇವ್ ಭೂಮಿ – ದೇವತೆಗಳ ಭೂಮಿ’ ಎಂಬ ವಿಷಯದ ಕುರಿತಾಗಿದ್ದ ಉತ್ತರಾಖಂಡದ ಟ್ಯಾಬ್ಲೊವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೂರನೆಯ ಸ್ಥಾನದಲ್ಲಿದೆ.
‘ಅಮರ್ ಜವಾನ್’ ಎಂಬ ವಿಷಯದೊಂದಿಗೆ ಕೇಂದ್ರ ಲೋಕೋಪಯೋಗಿ ಇಲಾಖೆಯ (ಸಿಪಿಡಬ್ಲ್ಯುಡಿ) ಟ್ಯಾಬ್ಲೊವು ಸಶಸ್ತ್ರ ಪಡೆಗಳ ವೀರರಿಗೆ ಗೌರವ ಸಲ್ಲಿಸಿದ್ದಕ್ಕಾಗಿ ವಿಶೇಷ ಬಹುಮಾನವನ್ನು ಪಡೆದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ದೆಹಲಿಯ ಮೌಂಟ್ ಅಬು ಪಬ್ಲಿಕ್ ಸ್ಕೂಲ್ ಮತ್ತು ವಿದ್ಯಾ ಭಾರತಿ ಸ್ಕೂಲ್ ರೋಹಿಣಿಯ ವಿದ್ಯಾರ್ಥಿಗಳಿಗೆ ರಿಜಿಜು ಅತ್ಯುತ್ತಮ ಸಾಂಸ್ಕೃತಿಕ ಪ್ರದರ್ಶನದ ಪ್ರಶಸ್ತಿಯನ್ನು ನೀಡಿದರು ಎಂದು ರಕ್ಷಣಾ ಸಚಿವಾಲಯ ಹೇಳಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಸಪೋಟಾ ಅಥವಾ ಚಿಕ್ಕು ಸೇವಿಸುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು https://t.co/w7hHvhnqcW
— Saaksha TV (@SaakshaTv) January 28, 2021
ಭಾರತದ ಕೋವಿಡ್ ಲಸಿಕೆಯ ಯಶಸ್ಸನ್ನು ಸಹಿಸಿಕೊಳ್ಳಲಾಗದೆ ಒದ್ದಾಡುತ್ತಿರುವ ಚೀನಾ !https://t.co/rJ0utA58CE
— Saaksha TV (@SaakshaTv) January 28, 2021